ರಹಸ್ಯ ಬಯಲಾಗುತ್ತೆಂದು ಬಾಕ್ಸ್‌ನಲ್ಲಿ ಯುವಕ ಲಾಕ್ – ಖುಷಿಯಲ್ಲಿ ಮರೆತು ಮಲಗಿದ್ಳು

Public TV
2 Min Read

– ಸಂಬಂಧಿ ಸೋದರನೊಂದಿಗೆ ಮಹಿಳೆ ಸಂಬಂಧ
– ಉಸಿರುಗಟ್ಟಿ ಯುವಕ ಸಾವು

ಇಸ್ಲಾಮಾಬಾದ್: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ನಡೆದಿದೆ.

ಅಹ್ಮದ್ (22) ಮೃತ ಯುವಕ. ಈತ ತನ್ನ ಸಂಬಂಧಿ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಆದರೆ ಮನೆಯವರ ಕೈಗೆ ಸಿಕ್ಕಿಬೀಳುವ ಭಯದಲ್ಲಿ ಮರದ ಬಾಕ್ಸ್‌ನಲ್ಲಿ ಅವಿತು ಕುಳಿತಿದ್ದನು. ಇದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಏನಿದು ಪ್ರಕರಣ?
ಬೀಬಿ ಕೆಲವು ವರ್ಷಗಳ ಹಿಂದೆ ಪಂಜಾಬ್ ಪ್ರದೇಶದ ಹುಡುಗನೊಂದಿಗೆ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಉದ್ಯೋಗಕ್ಕಾಗಿ ವಿದೇಶದಲ್ಲಿದ್ದನು. ಬೇಬಿ ಮತ್ತು ಮಕ್ಕಳು ಪತಿಯ ಮನೆಯಲ್ಲಿದ್ದರು. ಅಹ್ಮದ್ ಮತ್ತು ಬೇಬಿ ಸಂಬಂಧಿಕರಾಗಿದ್ದು, ಸಂಬಂಧದಲ್ಲಿ ಸಹೋದರಿ-ಸಹೋದರ ಆಗಿದ್ದರು. ದಿನ ಕಳೆದಂತೆ ಇವರಿಬ್ಬರು ಅನೈತಿಕ ಸಂಬಂಧ ಹೊಂದಿದ್ದರು.

ಬೇಬಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಳು. ಹೀಗಾಗಿ ಇವರಿಬ್ಬರು ಭೇಟಿ ಮಾಡಲು ತುಂಬಾ ಕಷ್ಟವಾಗುತ್ತಿತ್ತು. ಅದಕ್ಕಾಗಿ ಮನೆಯಲ್ಲಿ ಎಲ್ಲರೂ ನಿದ್ದೆ ಮಾಡಿದ ನಂತರ ಅಹ್ಮದ್, ಬೇಬಿಯ ರೂಮಿಗೆ ಬಂದು ಅನೈತಿಕ ಸಂಬಂಧ ಹೊಂದುತ್ತಿದ್ದನು. ಪ್ರತಿದಿನ ಇದೇ ರೀತಿ ಇವರಿಬ್ಬರು ಸಂಬಂಧ ಹೊಂದುತ್ತಿದ್ದರು.

ಒಂದು ದಿನ ಬೇಬಿಯ ರೂಮಿನಲ್ಲಿ ಏನೋ ಶಬ್ದ ಕೇಳಿಬಂದಿದೆ. ಈ ವೇಳೆ ಅಹ್ಮದ್ ಮತ್ತು ಬೇಬಿ ರೂಮಿನಲ್ಲಿದ್ದರು. ತಕ್ಷಣ ಕುಟುಂಬದ ಎಲ್ಲ ಸದಸ್ಯರು ಎಚ್ಚರಗೊಂಡು ಮನೆಯೆಲ್ಲಾ ಹುಡುಕಾಡಲು ಶುರು ಮಾಡಿದ್ದಾರೆ. ಆಗ ಬೇಬಿ ತನ್ನ ಅನೈತಿಕ ಸಂಬಂಧ ಮನೆಯವರ ಮುಂದೆ ಬಹಿರಂಗವಾಗುತ್ತದೆ ಎಂಬ ಭಯದಿಂದ ಗೆಳೆಯ ಅಹ್ಮದ್‍ನನ್ನು ಮರದ ಪೆಟ್ಟಿಗೆಯಲ್ಲಿ ಅಡಗಿಸಿದ್ದಾಳೆ. ಬೇಬಿ ರೂಮಿನಲ್ಲೂ ಹುಡುಕಾಟ ಮಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಬೇಬಿ ತನ್ನ ಅನೈತಿಕ ಸಂಬಂಧದ ಬಗ್ಗೆ ಯಾರಿಗೂ ಗೊತ್ತಾಗಿಲ್ಲ ಎಂಬ ಖುಷಿಯಲ್ಲಿ ಅಹ್ಮದ್‍ನ ಬಾಕ್ಸ್‌ನಲ್ಲಿ ಲಾಕ್ ಮಾಡಿರುವುದನ್ನು ಮರೆತು ಮಲಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಆ ಮರದ ಬಾಕ್ಸ್‌ನಲ್ಲಿ ಒಂದು ಸಣ್ಣ ರಂಧ್ರವೂ ಇರಲಿಲ್ಲ. ಹೀಗಾಗಿ ಅಹ್ಮದ್‍ಗೆ ಉಸಿರಾಟಕ್ಕೆ ತೊಂದರೆಯಾಗಿದೆ. ಆಗ ಅಹ್ಮದ್ ಕಿರುಚಿಕೊಂಡಿದ್ದಾನೆ. ಆದರೆ ಆ ಶಬ್ದ ಬೇಬಿಗೆ ಕೇಳಿಸಲಿಲ್ಲ. ಕೊನೆಗೆ ಉಸಿರುಗಟ್ಟಿ ಅಹ್ಮದ್ ಬಾಕ್ಸ್‌ನಲ್ಲಿಯೇ ಮೃತಪಟ್ಟಿದ್ದಾನೆ. ಸ್ವಲ್ಪ ಸಮಯದ ನಂತರ ಬೇಬಿ ತಕ್ಷಣ ಬಾಕ್ಸ್‌ನಲ್ಲಿ ಅಹ್ಮದ್‍ನ ಲಾಕ್ ಮಾಡಿರುವ ಬಗ್ಗೆ ನೆನಪಾಗಿದೆ. ಓಡಿ ಹೋಗಿ ಬಾಕ್ಸ್ ಓಪನ್ ಮಾಡಿದ್ದಾಳೆ. ಅಷ್ಟರಲ್ಲಿ ಅಹ್ಮದ್ ಸಾವನ್ನಪ್ಪಿದ್ದನು.

ಸದ್ಯಕ್ಕೆ ಈ ಕುರಿತು ಮಾಹಿತಿ ತಿಳಿದು ಪಂಜಾಬ್ ಪ್ರದೇಶದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *