ಕೋಗಿಲು ಲೇಔಟ್ ನಿರಾಶ್ರಿತರಿಗೆ ಪುನರ್ವಸತಿ ಭಾಗ್ಯ – ನಾಳೆ ಅರ್ಹರಿಗೆ ಸಿಗಲಿದೆ ಮನೆ!

1 Min Read

– ದಾಖಲೆ ಪರಿಶೀಲನೆ ಚುರುಕು

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ‌ ನೆಲೆಸಿದ್ದವರ ಮನೆ, ಶೆಡ್‌ಗಳನ್ನ ತೆರವುಗೊಳಿಸಿದ್ದ (kogilu Layout Demolition) ಸರ್ಕಾರ, ಇದೀಗ ಹೈಕಮಾಂಡ್ ಗೆ ತಲೆಬಾಗಿ ವಲಸಿಗರಿಗೆ ಗೃಹಭಾಗ್ಯ ಕಲ್ಪಿಸಲು ಮುಂದಾಗಿದೆ. ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆಯರಿ ಫ್ಲ್ಯಾಟ್‌ ಕೊಡೋದಕ್ಕೆ ಮುಂದಾಗಿದ್ದು, ಎಲ್ಲಾ ಸರ್ಕಾರಿ ದಾಖಲೆಗಳ ಪರಿಶೀಲನೆ (Document verification) ನಡೆಸುತ್ತಿದೆ.

ಈ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಶತಾಯಗತಾಯ ಗುರುವಾರವೇ ಫ್ಲ್ಯಾಟ್‌ (Flat) ನೀಡಲು ಕಸರತ್ತು ಶುರು ಮಾಡಿದೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ ಪೊಲೀಸ್ ದೌರ್ಜನ್ಯದ ಪರಾಕಾಷ್ಠೆ: ಛಲವಾದಿ ನಾರಾಯಣಸ್ವಾಮಿ

ಕೋಗಿಲು ಬಡಾವಣೆಯ ಸರ್ಕಾರಿ ಉರ್ದು ಶಾಲೆಯಲ್ಲಿ ವಲಸಿಗರ ದಾಖಲೆಗಳ ಪರಿಶೀಲನೆ 2ನೇ ದಿನವೂ ಮುಂದುವರಿಯಿತು. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ರು. ಮನೆ ಕಳೆದುಕೊಂಡ ನಿವಾಸಿಗಳಿಗೆ ಪ್ರತ್ಯೇಕವಾಗಿ ಫೋನ್ ಮಾಡಿ ಕರೆಸಿ, ಅವರ ಬಳಿ ಇರುವ ಸರ್ಕಾರಿ ದಾಖಲೆಗಳನ್ನ ಪರಿಶೀಲಿಸಿದ್ದಾರೆ. ನಿನ್ನೆ 50 ಜನ್ರ ದಾಖಲೆ ಪರಿಶೀಲನೆ ಮಾಡಲಾಗಿತ್ತು. ಇವತ್ತು 40ಕ್ಕೂ ಹೆಚ್ಚು ನಿವಾಸಿಗಳ ದಾಖಲೆಗಳನ್ನ ಪರಿಶೀಲಿಸಿದ್ರು. ಇದನ್ನೂ ಓದಿ: ದ್ರೌಪದಿ ವಸ್ತ್ರಾಪಹರಣ ಆದ ಹಾಗೆ ಕೌರವ ವಂಶಸ್ಥರಾದ ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆ ಮೇಲೆ ದೌರ್ಜನ್ಯ: ಅರವಿಂದ್ ಬೆಲ್ಲದ್

ಕೇರಳದ ಆರ್‌ಜೆಡಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಸಲೀಂ ಮಡವೂರು ಇಂದು ಕೋಗಿಲು ಲೇಔಟ್ ಗೆ ಭೇಟಿ ನೀಡಿ, ಕರ್ನಾಟಕ ಸರ್ಕಾರದ ವಿರುದ್ಧ ಗುಡುಗಿದ್ರು. ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸ್ತೇವೆ ಅಂದ್ರು. ಇನ್ನೂ ನಮ್ದು ಮನೆ ಹೋಗಿದೆ, ನಮ್ಗೆ ಫೋನೇ ಬಂದಿಲ್ಲ ಎಂದು ಅಧಿಕಾರಿಗಳಿಗೆ ದಾಖಲೆಗಳನ್ನ ನೀಡಲು ಬಂದವ್ರು ವಾಪಾಸ್ ಆಗ್ತಿದ್ದಾರೆ. ನಮ್ಗೂ ಫ್ಲ್ಯಾಟ್‌ ಕೈ ತಪ್ಪಿದ್ರೆ ಹೇಗೆ? ಅನ್ನೋ ಆತಂಕ ಕೆಲ ನಿವಾಸಿಗಳಿಗೂ ಶುರುವಾಗಿದೆ. ಇದನ್ನೂ ಓದಿ: ಸಿಎಂ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ: ಅಶೋಕ್

Share This Article