ರಾಯಚೂರು: ವಾಲ್ಮೀಕಿ ಸಮುದಾಯದ ವಿರುದ್ಧ ಮಾಜಿ ಸಂಸದ ರಮೇಶ್ ಕತ್ತಿ (Ramesh Katti) ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದು, ರಾಯಚೂರಿನ (Raichuru) ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ರಾಯಚೂರು, ಸಿರವಾರ, ದೇವದುರ್ಗ, ಸಿಂಧನೂರು, ಮಸ್ಕಿ ಪೊಲೀಸ್ ಠಾಣೆಯಲ್ಲಿ ವಾಲ್ಮೀಕಿ ಸಮುದಾಯ ಮುಖಂಡರು ದೂರು ನೀಡಿದ್ದಾರೆ. ಆದರೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದ ವೇಳೆ ದೊಡ್ಡ ಹೈಡ್ರಾಮಾ ನಡೆದಿದೆ.ಇದನ್ನೂ ಓದಿ: 21 ವರ್ಷಗಳ ಹಿಂದಿನ ದರೋಡೆ ಕೇಸ್ – ನಾಮಪತ್ರ ಸಲ್ಲಿಸಿದ ಮರುಕ್ಷಣವೇ ಆರ್‌ಜೆಡಿ ಅಭ್ಯರ್ಥಿ ಅರೆಸ್ಟ್
ರಮೇಶ್ ಕತ್ತಿ ವಿರುದ್ಧ ದೂರು ಪಡೆಯದ ಹಿನ್ನೆಲೆ ಹೆಡ್ ಕಾನ್ಸಟೇಬಲ್ ಎನ್.ಶ್ರೀನಿವಾಸ್ ಹಾಗೂ ದೂರುದಾರರ ನಡುವೆ ವಾಗ್ವಾದ ನಡೆದಿದೆ. ಪೊಲೀಸರ ವರ್ತನೆ ಖಂಡಿಸಿ ವಾಲ್ಮೀಕಿ ಸಮುದಾಯದ ಮುಖಂಡರು, ಯುವಕರು ದೇವದುರ್ಗ ಪೊಲೀಸ್ ಠಾಣೆ ಆವರಣದಲ್ಲಿ ಹೆಡ್ ಕಾನ್ಸಟೇಬಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಬಳಿಕ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ದೂರು ಪಡೆದಿದ್ದಾರೆ.ಇದನ್ನೂ ಓದಿ: ಪಾಕ್‌ನಲ್ಲಿ 4.7 ತೀವ್ರತೆಯ ಭೂಕಂಪ – ಮೂರು ದಿನಗಳಲ್ಲಿ ಮೂರನೇ ಬಾರಿ ಕಂಪಿಸಿದ ಭೂಮಿ