‘ಹಾಯ್ ಫ್ರೆಂಡ್ಸ್’ ಎನ್ನುತ್ತಾ ಕಾಮಿಡಿ ಶೋಗೆ ರೀಲ್ಸ್ ಸ್ಟಾರ್ ರೇಷ್ಮಾ ಎಂಟ್ರಿ

Public TV
1 Min Read

ಸೋಷಿಯಲ್ ಮೀಡಿಯಾದಲ್ಲಿ ಹಲೋ ಫ್ರೆಂಡ್ಸ್ ಎನ್ನುತ್ತಾ ಸದಾ ರೀಲ್ಸ್ ಮೂಲಕ ಹಾವಳಿ ಕೊಡುವ ರೇಷ್ಮಾ (Reshma) ಇದೀಗ ಟಿವಿ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ. ಗಿಚ್ಚಿ ಗಿಲಿಗಿಲಿ-3 (Gicchi Giligili 3) ಕಾರ್ಯಕ್ರಮಕ್ಕೆ ರೇಷ್ಮಾ ಸ್ಪರ್ಧಿಯಾಗಿ ಬಂದಿದ್ದಾರೆ.

‘ಗಿಚ್ಚಿ ಗಿಲಿಗಿಲಿ -3’ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ (Drone Prathap) ಕಾಣಿಸಿಕೊಳ್ತಿಲ್ಲ. ಈ ಬೆನ್ನಲ್ಲೇ ಹೊಸ ಪ್ರತಿಭೆಯ ಆಗಮನವಾಗಿದೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ರೇಷ್ಮಾ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಸಿನಿಮಾ ಹಾಡುಗಳಿಗೆ ರೀಲ್ಸ್ ಮೂಲಕ ಮತ್ತು ಇಂಗ್ಲಿಷ್ ಪದಗಳನ್ನು ತಪ್ಪಾಗಿ ಹೇಳುವ ಮೂಲಕ ಸಖತ್ ಟ್ರೋಲ್ ಆಗಿದ್ದರು.

 

View this post on Instagram

 

A post shared by Reshma Reshma R (@reshma_of_queen)

ಇದೀಗ ಕಿರುತೆರೆಗೆ ರೀಲ್ಸ್ ಸ್ಟಾರ್ ರೇಷ್ಮಾ (Reshma) ಎಂಟ್ರಿ ಕೊಟ್ಟಿದ್ದಾರೆ. ತುಕಾಲಿ ಸಂತು ಪತ್ನಿ ಮಾನಸಾ ಜೊತೆ ಗಿಚ್ಚಿ ಗಿಲಿಗಿಲಿ ಸೆಟ್‌ನಲ್ಲಿ ರೀಲ್ಸ್ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಕಾಮಿಡಿ ಶೋ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ರೇಷ್ಮಾ, ಅಭಿನಯ ಹೇಗಿರಲಿದೆ ಎಂಬುದರ ಬಗ್ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Share This Article