ಹಂಪಿಯಲ್ಲಿ ರೀಲ್ಸ್‌ ಹುಚ್ಚಾಟ – ಸ್ಮಾರಕಗಳಿಗೆ ರಕ್ಷಣೆ ಕೊಡಿ ಎಂದ ಗ್ರಾಮಸ್ಥರು

By
1 Min Read

ಬಳ್ಳಾರಿ: ಪ್ರವಾಸಿಗರು (Tourist) ಸೇರಿದಂತೆ ಸ್ವತಃ ಹಂಪಿಯ (Hampi) ಗೈಡ್ ಬೇಕಾಬಿಟ್ಟಿ ಸ್ಮಾರಕಗಳ ಮೇಲೆ ರೀಲ್ಸ್ (Reels) ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಗೈಡ್ ಹಾಗೂ ಪ್ರವಾಸಿಗರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಹಂಪಿಯ ನಿವಾಸಿ, ಗೈಡ್‌ ಆಗಿರುವ ಹೇಮಂತ್ ಸ್ಮಾರಕಗಳ ಬಳಿ ರೀಲ್ಸ್ ಮಾಡಿದ್ದಾರೆ. ‌ಹಂಪಿ ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ಸ್ಮಾರಕಗಳ ರಕ್ಷಣೆಗೆ ಪುರಾತತ್ವ ಇಲಾಖೆ ಕೋಟ್ಯಂತರ ರೂ. ಹಣ ಖರ್ಚು ಮಾಡುತ್ತದೆ. ಹಂಪಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು ಸ್ಮಾರಕಗಳ ಮೇಲೆ ಹತ್ತಿ ಎಲ್ಲೆಂದರಲ್ಲಿ ಪ್ರವಾಸಿಗರು ಕುಣಿಯುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆಗಿನ ಮನಸ್ತಾಪ: ಅವರಿಗೆ ಒಂದಷ್ಟು ಪ್ರಶ್ನೆ ಕೇಳಬೇಕಿದೆ ಎಂದ ಧ್ರುವ

ರೀಲ್ಸ್ ಮಾಡುವ ಪ್ರವಾಸಿಗರಿಗೆ ಹೇಳುವವರು ಕೇಳುವವರು ಇಲ್ಲದಾಗಿದೆ. ಹೆಜ್ಜೆ ಹೆಜ್ಜೆಗೂ ಸೆಕ್ಯುರಿಟಿ ನೇಮಕ ಮಾಡಿರುವ ಪುರಾತತ್ವ ಇಲಾಖೆ ಸುಮ್ಮನೆ ಕುಳಿತಿದೆ. ಐತಿಹಾಸಿಕ ಕಲ್ಲಿನ ರಥ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲದಲ್ಲಿ ಬೇಕಾಬಿಟ್ಟಿ ರೀಲ್ಸ್ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಸ್ಥಳೀಯರು ಆಗ್ರಹ ಮಾಡಿದ್ದಾರೆ.

 

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್