ಮೊಬೈಲ್ ಪ್ರಿಯರೇ ಗಮನಿಸಿ- ಇಂದು ಕ್ಸಿಯೋಮಿ ವೈ2 2ನೇ ಫ್ಲಾಶ್ ಸೇಲ್!

Public TV
2 Min Read

ಬೆಂಗಳೂರು: ಕಡಿಮೆ ಬೆಲೆ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಹಿಂದಿಕ್ಕಿರುವ ಕ್ಸಿಯೋಮಿ ಕಂಪೆನಿಯ ವೈ2 ಫ್ಲಾಶ್ ಸೇಲ್ ಇಂದು ನಡೆಯಲಿದೆ.

ಜೂನ್ 7 ರಂದು ಬಿಡುಗಡೆಗೊಂಡು ತನ್ನ ಮೊದಲ ಫ್ಲಾಶ್ ಸೇಲ್ ನಲ್ಲೇ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಇಂದು ಪುನಃ 12 ಗಂಟೆಗೆ ಫೋನಿನ ಎರಡನೇ ಫ್ಲಾಶ್ ಸೇಲ್ ಅನ್ನು ಎಂಐ ತಾಣ ಮತ್ತು ಅಮೇಜಾನ್ ಶಾಪಿಂಗ್ ತಾಣದಲ್ಲಿ ನಡೆಸಲಾಗುತ್ತಿದೆ.

ರೆಡ್‍ಮೀ ವೈ2 ಫೋನ್ ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 16ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+5ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ಗ್ರೇ, ಗೋಲ್ಡ್ ಹಾಗೂ ರೋಸ್ ಗೋಲ್ಡ್ ಕಲರ್ ಗಳನ್ನು ಒಳಗೊಂಡಿದೆ.

ಬೆಲೆ ಎಷ್ಟು?
3ಜಿಬಿ ram/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 9,999 ರೂ. ಹಾಗೂ 4ಜಿಬಿ ram/64ಜಿಬಿ ಆಂತರಿಕ ಮೆಮೊರಿಯ ಫೋನಿಗೆ 12,999 ರೂ. ಬೆಲೆ ನಿಗದಿ ಮಾಡಿದೆ.

ರೆಡ್‍ಮಿ ವೈ2ನ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ: 160.73 X 77.26 X 8.1ಮಿ.ಮೀ., 170 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.99 ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720*1440 ಪಿಕ್ಸೆಲ್, 18:9 ಅನುಪಾತ 269ಪಿಪಿಐ)

ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಎಂಎಸ್‍ಎಂ 8953 ಸ್ನ್ಯಾಪ್ ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್ 2.0 ಗೀಗಾಹರ್ಟ್ಸ್-ಕಾರ್ಟೆಕ್ಸ್-ಎ53ಸಿಪಿಯು, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 3ಜಿಬಿ ram/32 ಜಿಬಿ, 4ಜಿಬಿ ram/64 ಜಿಬಿ ಆಂತರಿಕ ಮೆಮೊರಿ.

ಕ್ಯಾಮೆರಾ:
ಮುಂಭಾಗ 16ಎಂಪಿ, ಸಾಪ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಪೇಸ್ ಡಿಟೆಕ್ಷನ್, ಹಿಂಭಾಗ 12ಎಂಪಿ+5ಎಂಪಿ ಆಟೊಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಪ್ಯೂಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್.

ಇತರೆ ಪ್ಯೂಚರ್ ಗಳು:
ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 3080 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ, ಹಾಗೂ 5 ವೋಲ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *