ರೆಡ್‍ಮೀ ನೋಟ್ 4 ಸ್ಫೋಟ: ವಿಡಿಯೋದಲ್ಲಿರುವ ಫೋನ್ ನಿಜವಾಗಿಯೂ ಕ್ಸಿಯೋಮಿಯದ್ದಾ? ಕಂಪೆನಿ ಹೇಳಿದ್ದು ಏನು?

Public TV
2 Min Read

ಬೆಂಗಳೂರು: ಚೀನಾದ ರೆಡ್‍ಮೀ ನೋಟ್ 4 ಮೊಬೈಲ್ ಶೋರೂಂ ನಲ್ಲಿ ಸ್ಫೋಟಗೊಳ್ಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವ ಫೋನ್ ರೆಡ್ ಮೀ ನೋಟ್ 4 ಅಲ್ಲ ಎಂದು ಕ್ಸಿಯೋಮಿ ಕಂಪೆನಿ ತಿಳಿಸಿದೆ.

ಹೌದು. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವಿಡಿಯೋ 10 ದಿನದ ಮೊದಲೇ ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಆಗಿದೆ. ಅಷ್ಟೇ ಅಲ್ಲದೇ ಜುಲೈ 18ರಂದು ಮತ್ತೊಂದು ವಿಡಿಯೋ ಅಪ್ಲೋಡ್ ಆಗಿದೆ.

ಜುಲೈ 14ರಂದು ನೋಯ್ಡಾದಲ್ಲಿ ಐಫೋನ್ ಬ್ಲಾಸ್ಟ್ ಆಗಿದೆ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿದ್ದರೆ, ಜುಲೈ 19ರಂದು ಒಪ್ಪೋ ಫೋನ್ ಸ್ಫೋಟಗೊಂಡಿದೆ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಅದೇ ವಿಡಿಯೋ ಅಪ್ಲೋಡ್ ಆಗಿದೆ. ಹೀಗಾಗಿ ಈಗ ಸಿಸಿಟಿವಿ ವಿಡಿಯೋದ ಬಗ್ಗೆ ಅನುಮಾನ ಮೂಡಿದೆ.

ಈ ಸುದ್ದಿ ಪ್ರಕಟವಾದ ಬಳಿಕ ಮಾಧ್ಯಮಗಳಿಗೆ ಕ್ಸಿಯೋಮಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮನುಕುಮಾರ್ ಜೈನ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಹೇಳಿಕೆಯಲ್ಲಿ ಗ್ರಾಹಕ ಅರ್ಜುನ್ ಅವರು ಪೂರ್ವಿಕಾ ಸ್ಟೋರ್ ನಲ್ಲಿ ರೆಡ್ ಮೀ ನೋಟ್ 4 ಫೋನನ್ನು ಜುಲೈ 1ಕ್ಕೆ ಖರೀದಿಸಿದ್ದಾರೆ. ಆದರೆ ಜುಲೈ 17ಕ್ಕೆ ಇವರ ಫೋನ್ ಸಮಸ್ಯೆ ಕಾಣಿಸಿದ್ದು, ಅದೇ ದಿನ ನಾವು ಪೂರ್ವಿಕಾ ಸ್ಟೋರ್ ಮೂಲಕ ಹೊಸ ಫೋನ್ ನೀಡಿದ್ದೇನೆ. ಈ ಫೋನ್ ಪರಿಶೀಲಿಸಿದಾಗ ಥರ್ಡ್ ಪಾರ್ಟಿ ಚಾರ್ಜರ್ ಬಳಸಿ ಚಾರ್ಜ್ ಮಾಡಿದ ಕಾರಣ ಈ ಘಟನೆ ಸಂಭವಿಸಿದೆ. ಅಷ್ಟೇ ಅಲ್ಲದೇ ನಮಗೆ ಬಂದಿರುವ ಫೋನ್ ಬಾಡಿಯಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ವಿಡಿಯೋದ ಬಗ್ಗೆ ಕ್ಸಿಯೋಮಿ ಸ್ಪಷ್ಟನೆ ನೀಡಿದ್ದು, ವಿಡಿಯೋದಲ್ಲಿರುವ ಫೋನ್ ರೆಡ್‍ಮೀ ನೋಟ್ 4 ಎಂದೇ ಹೇಳಲು ಬರುವುದಿಲ್ಲ. ಗ್ರಾಹಕ ಅರ್ಜುನ್ ಈ ಫೋನನ್ನು ಜೂನ್ 1ರಂದು ಪೂರ್ವಿಕ ಸ್ಟೋರ್ ನಲ್ಲಿ ಖರೀದಿಸಿದ್ದರೂ ನಮ್ಮ ತನಿಖೆಯ ವೇಳೆ ಕೇರಳದಲ್ಲಿರುವ ರಿಟೇಲ್ ಶಾಪ್ ನಲ್ಲಿ ಈ ಘಟನೆ ನಡೆದಿದೆ. ಅಷ್ಟೇ ಅಲ್ಲದೇ ಇದು ಜುಲೈ 1ರಂದು ನಡೆದಿಲ್ಲ. ಸಿಸಿಟಿವಿಯಲ್ಲಿ ತೋರಿಸಿದಂತೆ ಈ ವಿಡಿಯೋ ಜುಲೈ 17ಕ್ಕೆ ದಾಖಲಾಗಿದೆ. ಅಷ್ಟೇ ಅಲ್ಲದೇ ಈ ವಿಡಿಯೋದಲ್ಲಿರುವ ವ್ಯಕ್ತಿಗಳು ಯಾರೂ ನಾನು ಕಳುಹಿಸಿದ ವ್ಯಕ್ತಿ ಅಲ್ಲ. ಅಷ್ಟೇ ಅಲ್ಲದೇ ಸಂಬಂಧಿಗಳು ಅಲ್ಲ ಎಂದು ಗ್ರಾಹಕ ಅರ್ಜುನ್ ನಮಗೆ ತಿಳಿಸಿದ್ದಾರೆ ಎಂದು ಕ್ಸಿಯೋಮಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಫೋನ್ ಯಾವುದು? ಟಾಪ್ 5 ಕಂಪೆನಿಗಳು ಯಾವುದು?

 

ಇದನ್ನೂ ಓದಿ: ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

https://youtu.be/HF1i-IvODY4

ಇದನ್ನೂ ಓದಿ:ಬೆಂಗಳೂರಿನಲ್ಲಿ ರೆಡ್‍ಮೀ ಕಂಪೆನಿಯ ಆಫ್‍ಲೈನ್ ಸ್ಟೋರ್ ಆರಂಭ: ಜಸ್ಟ್ 12 ಗಂಟೆಯಲ್ಲಿ 5 ಕೋಟಿ ರೂ. ವ್ಯಾಪಾರ!

https://youtu.be/Ou8583XeH5I

Share This Article
Leave a Comment

Leave a Reply

Your email address will not be published. Required fields are marked *