ಮುಖ್ಯಮಂತ್ರಿ ಕೊಲೆಗೆ ನಡೆದಿತ್ತು ಸಂಚು..?- ಸುಪಾರಿ ನೀಡಿದ್ದು ಯಾರು ಅಂದ್ರು ಎಚ್‍ಡಿಕೆ

Public TV
2 Min Read

ಶಿವಮೊಗ್ಗ: ಶಿವಮೊಗ್ಗ: ಎರಡೇ ತಿಂಗಳಲ್ಲಿ ನನ್ನ ಮೇಲೆ 150 ಕೋಟಿ ಗಣಿ ಲಂಚ ಸ್ವೀಕಾರದ ಆರೋಪ ಮಾಡಿದಾಗ ಏಕೆ ಚರ್ಚೆ ಮಾಡಲಿಲ್ಲ. ನಾನು ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರ ಕೊಲೆಗೆ ಸುಪಾರಿ ಕೊಟ್ಟಿದ್ನಂತೆ. ಹೀಗಂತ ನಿಮ್ಮವರೇ ನನ್ನ ವಿರುದ್ಧ ಬಳ್ಳಾರಿಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಯಡಿಯೂರಪ್ಪ ಏಕೆ ಮಾತನಾಡಲಿಲ್ಲ ಅಂತ ಸಿಎಂ ಎಚ್‍ಡಿಕೆ ಅವರು ಬಿಎಸ್‍ವೈ ಅವರನ್ನು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಫೋಟಕ ವಿಚಾರವನ್ನು ಹೊರಹಾಕಿದ್ದಾರೆ. ನಿಮ್ಮದೇ ಪಕ್ಷದ ಸರ್ಕಾರ ಬಿದ್ದಾಗ ಯಾವ ಗ್ರಹಗಳು ನಿಮ್ಮಲ್ಲಿದ್ದವು. ಈಗ ನಿಮಗೆ ಸಿದ್ದರಾಮಯ್ಯ ಬಗ್ಗೆ ಅನುಕಂಪ ಬಂದುಬಿಟ್ಟಿತೇ. ನನಗಿಂತ ರಾಜಕಾರಣದಲ್ಲಿ ಹಿರಿಯರಿದ್ದೀರಾ, ಅನುಭವಿಗಳಿದ್ದೀರಾ. ನಾನು ಸ್ವಲ್ಪವಾದರೂ ನೈತಿಕತೆ ಉಳಿಸಿಕೊಂಡಿದ್ದೀರಾ. ನಿಮ್ಮ ಮೇಲಿನ ಆರೋಪವನ್ನು ಮುಚ್ಚಿ ಹಾಕಲು ಏನು ಮಾಡಿದ್ದೀರಾ ಎಂಬುದನ್ನು ಶಿಕಾರಿಪುರದ ನಿಮ್ಮ ಹುಚ್ಚುರಾಯ ಸ್ವಾಮಿ ದೇವರ ಮುಂದೆ ಕುಳಿತು ನಿಮ್ಮನ್ನೇ ಕೇಳಿಕೊಳ್ಳಿ ಅಂದ್ರು.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಗ ಅಧಿಕಾರಕ್ಕಾಗಿ ದೇವೇಗೌಡರ ಮನೆಗೆ ಬಂದಿದ್ರು. ವಿಧಾನಸೌಧದಲ್ಲಿ 10 ನಿಮಿಷ ಮಾತಾಡಬೇಕು ಟೈಮ್ ಕೊಡಿ ಅಂತ ಚೀಟಿ ಕಳಿಸಿದ್ರಿ. ಡಿಸಿಎಂ ಅಲ್ಲ ಸಚಿವ ಸ್ಥಾನ ಕೊಡಿ, ಬಿಜೆಪಿ ಬಿಟ್ಟು ಬರುವೆ ಅಂತ ಈ ಯಡಿಯೂರಪ್ಪ ಹೇಳಿದ್ದರು. ವರ್ಗಾವಣೆ ದಂಧೆ ಬಗ್ಗೆ ನನ್ನ ವಿರುದ್ಧ ಆರೋಪ ಮಾಡ್ತಿದ್ದೀರಿ. ನೀವು ಕೆಜೆಪಿಗೆ ಹೋದಾಗ ಬಿಜೆಪಿ ನಾಯಕರು ನಿಮ್ಮ ಬಗ್ಗೆ ಏನು ಮಾತಾಡಿದ್ರು?. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರು ನಿಮ್ಮ ಬಗ್ಗೆ ಏನ್ ಮಾತಾಡಿದ್ದಾರೆ. ನೀವು ಅವರ ಬಗ್ಗೆ ಏನ್ ಮಾತಾಡ್ತೀರಿ ಅಂತ ಒಂದು ಬಾರಿ ಮೆಲುಕು ಹಾಕಿಕೊಳ್ಳಿ ಅಂತ ಬಿಎಸ್‍ವೈ ವಿರುದ್ಧ ಎಚ್‍ಡಿಕೆ ವಾಗ್ದಾಳಿ ನಡೆಸಿದ್ದಾರೆ.

ರಾಜಕಾರಣದಲ್ಲಿ ಕೆಲ ವಿಷಯಗಳನ್ನು ಇಟ್ಟುಕೊಂಡು ಅನುಕಂಪ ಗಳಿಸಲು ಯತ್ನಿಸುತ್ತಿದ್ದೀರಿ. ನೀವು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಾನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುತ್ತೀನಿ ಅಂತ ಹೇಳಿದ್ರಿ. ಈಗ ಅವರ ಬಗ್ಗೆ ನಿಮಗೆ ಅನುಕಂಪ ಬರುತ್ತದೆಯಾ ಅಂತ ಪ್ರಶ್ನಿಸಿದ್ರು.

ನೈತಿಕತೆ ಉಳಿಸಿಕೊಂಡು ಈ ಸರ್ಕಾರ ನಡೆಸುತ್ತಿದ್ದೇನೆ. ಯಡಿಯೂರಪ್ಪನವರು ಅದನ್ನು ಅರ್ಥಮಾಡಿಕೊಳ್ಳಬೇಕು. ಈ ದೇಶದ ವ್ಯವಸ್ಥೆ ಏನು ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ನೀವು ಮಾಡಿದ ಹಲವಾರು ಅಕ್ರಮಗಳಿಂದ ಹೊರಬರಲು ಏನೇನು ಯೋಜನೆಗಳನ್ನು ಮಾಡಿಕೊಂಡಿದ್ದೀರಿ ಎಂಬುದನ್ನು ಶಿಕಾರಿಪುರದಲ್ಲಿರುವ ಆಂಜನೇಯ ದೇವಸ್ಥಾನದ ಮುಂದೆ ಒಮ್ಮೆ ಜ್ಞಾಪಕ ಮಾಡಿಕೊಳ್ಳಿ. ನನ್ನ ಸರ್ಕಾರ, ನನ್ನ ಅಧಿಕಾರಿಗಳ ಬಗ್ಗೆ ಲಘುವಾಗಿ ಮಾತನಾಡಬೇಡಿ ಅಂತ ಛಾಟಿ ಬೀಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *