ಬೆಂಗಳೂರಿನಲ್ಲಿ ನಿನ್ನೆ ದಾಖಲೆ ಮಳೆ- ಸೆಪ್ಟೆಂಬರ್‌ನಲ್ಲೇ ಭಾರೀ ಮಳೆ ಯಾಕೆ?

By
2 Min Read

ಬೆಂಗಳೂರು: ನಿನ್ನೆ ರಾತ್ರಿಯಿಂದ ಇಂದು ಮುಂಜಾನೆಯವರೆಗೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ನಿನ್ನೆ ರಾತ್ರಿಯಿಂದ ಸುರಿದ ಮಳೆ ಕಳೆದ 10 ವರ್ಷಗಳಲ್ಲೇ ಸುರಿದ ಇದು 3ನೇ ಭಾರೀ ಮಳೆಯಾಗಿದೆ. ಮಾತ್ರವಲ್ಲದೇ ಸೆಪ್ಟೆಂಬರ್ ತಿಂಗಳಲ್ಲೇ ಅತಿ ಹೆಚ್ಚು ಮಳೆಯಾಗಿರುವುದಾಗಿ ವರದಿ ಬಯಲಾಗಿದೆ.

ಭಾರೀ ಮಳೆ ಇತಿಹಾಸ:
ಬೆಂಗಳೂರಿನಲ್ಲಿ ಈ ಹಿಂದೆ ಭಾರೀ ಮಳೆ ಯಾವಾಗೆಲ್ಲ ಸುರಿದಿತ್ತು ಎಂಬುದನ್ನು ನೋಡುವುದಾದರೆ, 1998 ರಲ್ಲಿ 177.6 ಮಿ.ಮೀ(18 ಸೆ.ಮೀ) ಮಳೆ ಸುರಿದಿತ್ತು. ಬಳಿಕ 2014 ರಲ್ಲಿ 132.3 ಮಿ.ಮೀ(13 ಸೆಂ.ಮೀ) ಮಳೆಯಾಗಿತ್ತು. ಇದಾದ ಬಳಿಕ ಈ ಬಾರಿ ಅದರಲ್ಲೂ ಸೆಪ್ಟೆಂಬರ್‌ನಲ್ಲಿ 131.6 ಮಿ.ಮೀ(13 ಸೆಂ.ಮೀ) ಮಳೆಯಾಗಿದೆ.

ಅತಿ ಹೆಚ್ಚು ಮಳೆಗೆ ಕಾರಣ:
1. ಮಾನ್ಸೂನ್ ಮಾರುತಗಳು ಚುರುಕು ಆಗಿರುವುದು ಅತಿ ಹೆಚ್ಚು ಮಳೆಗೆ ಕಾರಣ.
2. ಸೆಪ್ಟೆಂಬರ್ 30ಕ್ಕೆ ಮಾನ್ಸೂನ್ ಕೊನೆ ಆಗುತ್ತದೆ. ಹೀಗಾಗಿ ಹಿಮಾಲಯದ ಕಡೆಗೆ ಮಾನ್ಸೂನ್ ಮಾರುತಗಳು ಸಾಗುತ್ತವೆ. ಇದರಿಂದ ಹೆಚ್ಚು ಮಳೆಯಾಗುತ್ತದೆ.
3. ಉತ್ತರ ಒಳನಾಡು ಮತ್ತು ಕನ್ಯಾಕುಮಾರಿಯಲ್ಲಿ ಕಾಣಿಸಿಕೊಂಡಿರುವ ಟ್ರಫ್ ಮತ್ತು ಮೇಲ್ಮೈ ಸುಳಿಗಾಳಿ ಈ ಪ್ರಮಾಣದ ಮಳೆಗೆ ಕಾರಣವಾಗಿದೆ.
4. ಸೆಪ್ಟೆಂಬರ್‌ನಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮಾನ್ಸೂನ್ ಚುರುಕು ಆಗಿರುತ್ತದೆ. ಹೀಗಾಗಿ ಮಳೆ ಹೆಚ್ಚಾಗಲು ಕಾರಣವಾಗಿದೆ.
5. ಹಗಲಿನ ಸಮಯದಲ್ಲಿ ತಾಪಮಾನ ವ್ಯತ್ಯಾಸವಾಗುತ್ತದೆ. ಹೆಚ್ಚಾಗಿ ಹಗಲು ಹೊತ್ತು ಬಿಸಿಲು ಇರುವುದರಿಂದ ಕೂಡ ಮಳೆ ಆಗಲು ಕಾರಣವಾಗಿದೆ.
6. ಛತ್ತಿಸ್‌ಗಢದಿಂದ ಕನ್ಯಾಕುಮಾರಿಯವರೆಗೂ 900 ಮೀ. ದೂರದಲ್ಲಿ ಟ್ರಫ್ ಕಾಣಿಸಿಕೊಂಡಿದೆ.
7. 1.5 ರಿಂದ 10.5ರವರೆಗೂ ಕನ್ಯಾಕುಮಾರಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವುದು ಅತಿಹೆಚ್ಚು ಮಳೆಗೆ ಕಾರಣ. ಇದನ್ನೂ ಓದಿ: ಮಾನ್ಯತಾ ಟೆಕ್ ಪಾರ್ಕ್ ಜಲಾವೃತ – 400ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

ಈ ರೀತಿ ಅತಿಹೆಚ್ಚು ಮಳೆ ಆಗುವುದು ಸಹಜವೇ, ಅದರಲ್ಲಿ ವ್ಯತ್ಯಾಸ ಇಲ್ಲ. ಈ ಸಮಯದಲ್ಲಿ ಗುಡುಗು ಇರುವುದರಿಂದ ಭಾರೀ ಮಳೆಯಾಗಿದೆ. ನಿನ್ನೆ ರಾತ್ರಿ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಆಗಿದೆ. ಮುಂದಿನ 5 ದಿನಗಳ ಕಾಲ ಮಳೆ ಇರಲಿದೆ ಹಾಗೂ ಇಂದು ಮತ್ತು ನಾಳೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಎ. ಪ್ರಸಾದ್ ಹೇಳಿದ್ದಾರೆ.

ಕರಾವಳಿ ಮತ್ತು ಉತ್ತರ ಒಳನಾಡಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. 3 ಹಾಗೂ 4ನೇ ದಿನಕ್ಕೆ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಯಾವ ರೀತಿ ಇರುತ್ತದೆ ಎಂದು ಹೇಳುವುದು ಅಸಾಧ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಲ್ಲಿ-ಎಷ್ಟು ಮಳೆಯಾಗಿದೆ?

ಸದ್ಯಕ್ಕೆ ಬೆಂಗಳೂರಿಗೆ ಯಲ್ಲೋ ಅಲರ್ಟ್ ಕೊಟ್ಟಿದ್ದೆವೆ. ಯಲ್ಲೋ ಅಲರ್ಟ್ ಎಂದರೆ, 2 ರಿಂದ 7 ಸೆಂ.ಮೀ ಮಳೆ ಆಗುತ್ತದೆ. ಆರೆಂಜ್ ಅಲರ್ಟ್ ಎಂದರೆ 12 ರಿಂದ 19 ಸೆಂ.ಮೀ ಮಳೆ ಆಗುತ್ತದೆ. ಒಟ್ಟಾರೆ ಕರ್ನಾಟಕದಲ್ಲಿ ಈ ವರ್ಷ 24 ಸೆಂ.ಮೀ ವರೆಗೂ ಮಳೆ ಆಗಿದೆ. ಮುಂದಿನ 5 ದಿನ ಮಳೆ ಪ್ರಮಾಣ ನೋಡಬೇಕಾಗುತ್ತದೆ ಎಂದು ಪ್ರಸಾದ್ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *