ಮುಸ್ಲಿಂರ ಹಲವು ನಿಲುವುಗಳು ಬದಲಾದರೆ ಸಾಮರಸ್ಯ ಸಾಧ್ಯ: ಕೇಶವ ಹೆಗ್ಡೆ

Public TV
2 Min Read

ಉಡುಪಿ: ಮುಸಲ್ಮಾನರ ಹಲವಾರ ನಿಲುವು, ಆಲೋಚನೆ ಮತ್ತು ಆಚರಣೆಗಳು ಬದಲಾದರೆ ಮಾತ್ರ ಹಿಂದೂ ಸಮಾಜದ ಜೊತೆ ಸಾಮರಸ್ಯ ಸಾಧಿಸಲು ಸಾಧ್ಯ ಎಂದು ವಿಶ್ವಹಿಂದೂ ಪರಿಷತ್‍ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆ ಹೇಳಿದ್ದಾರೆ.

ಮುಸ್ಲಿಂ ವ್ಯಾಪಾರಿಗಳಿಗೆ ದೇವಾಯಗಳಲ್ಲಿ ನಿಷೇದ ಮತ್ತು ಹಲಾಲ್ ಕಟ್ ಜಟ್ಕಾ ಕಟ್‍ಗೆ ಸಂಬಂಧಿಸಿದಂತೆ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಹಿಂದೂಗಳ ಜಾತ್ರೆಯಲ್ಲಿ ಹಿಂದುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಬಾರಿಯ ಜಾತ್ರೆಗಳಲ್ಲಿ ಹಿಂದೂಗಳಲ್ಲಿ ಜಾಗೃತಿ ಉಂಟಾಗಿದೆ. ಜಾತ್ರೆಗಳಲ್ಲಿ ಮುಸಲ್ಮಾನರು ಹಿಂದೂ ಸಮಾಜಕ್ಕೆ ಸವಾಲಾಗಿ ನಿಂತಿದ್ದರು. ಹಿಂದುಗಳಿಗೆ ತೊಂದರೆಗಳು ಕೊಡುವ ಮತ್ತು ಕಿರಿಕಿರಿ ಉಂಟುಮಾಡುವ ನಡವಳಿಕೆಗಳು ಇತ್ತು.

ನಮ್ಮ ಧರ್ಮಕ್ಕೆ ಸವಾಲಾಗಿ ನಿಂತವರು, ಹಿಂದೂ ದೇವರನ್ನು ಒಪ್ಪದೇ ಇರುವವರು ಯಾಕೆ ಬೇಕು. ಹಲಾಲ್ ಮತ್ತು ವ್ಯಾಪಾರ ಮಾಡುವ ವಸ್ತುಗಳ ಮೇಲೆ ಉಗುಳುವುದನ್ನು ಜನರು ಗಮನಿಸಿದ್ದಾರೆ. ಸ್ವಯಂ ಪ್ರೇರಿತರಾಗಿ ಜಾಗೃತಿಯಿಂದ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿದ್ದಾರೆ. ಇದು ಹಿಂದೂ ಸಮಾಜದಲ್ಲಿ ಉಂಟಾದ ಸಹಜ ಪ್ರಕ್ರಿಯೆ. ಮುಸಲ್ಮಾನ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ತೊಂದರೆಗೊಳಗಾದ ಮುಸಲ್ಮಾನ ವ್ಯಾಪಾರಿಗಳು ತಮ್ಮ ಸಮಾಜದ ಮುಖಂಡರಿಗೆ ಹೇಳಲಿ ಎಂದರು.

ಹಿಂದೂ ಸಮಾಜಕ್ಕೆ ಸವಾಲಾಗುವ ನಡವಳಿಕೆ ನಿಲ್ಲಿಸಬೇಕು. ಸಾಮಾನ್ಯ ಮುಸಲ್ಮಾನರಿಗೆ ಆಗುವ ತೊಂದರೆಗಳ ಬಗ್ಗೆ ಮುಸಲ್ಮಾನ ಮುಖಂಡರು ಧರ್ಮಗುರುಗಳು ಹೇಳಲಿ. ತಮ್ಮ ನಿಲುವುಗಳನ್ನು ಬದಲಾಯಿಸಿಕೊಂಡು ಹಿಂದುಗಳ ಜೊತೆ ಸಾಮರಸ್ಯದಿಂದ ಬದುಕಲು ಹೇಳಲಿ. ಹಿಂದೂ ಸಮುದಾಯ ಮತ್ತು ದೇವರು ಮತ್ತು ಹೆಣ್ಣು ಮಕ್ಕಳನ್ನು ಗೌರವಿಸುವ ಪರಿಪಾಠ ಬೆಳೆಯಬೇಕು. ಹಿಂದುಗಳು ಪೂಜಿಸುವ ಗೋಮಾತೆಯನ್ನು ಗೌರವಿಸಲಿ. ಹಲಾಲ್ ವಿಚಾರದಲ್ಲ ಇಡೀ ದೇಶದಲ್ಲಿ ಜಾಗೃತಿಯಾಗಿದೆ.

ಯುಗಾದಿಯ ಸಂದರ್ಭದಲ್ಲಿ ಮಾಂಸದ ಊಟ ನಡೆಯುತ್ತದೆ. ಮುಸಲ್ಮಾನರಿಂದ ಮಾಡಲ್ಪಟ್ಟ ಹಲಾಲ್ ಮಾಂಸ ಖರೀದಿ ಮಾಡಬಾರದು. ಇದು ಹಿಂದೂ ಸಮುದಾಯದ ನಿರ್ಧಾರ. ಹಿಂದೂಗಳು ವ್ಯಾಪಾರ ಮಾಡುವ ಮಟನ್ ಸ್ಟಾಲ್‍ಗಳಲ್ಲಿ ಕೂಡ ಮುಸ್ಲೀಮರ ಮೂಲಕ ಹಲಾಲ್ ಮಾಡಿಸಲಾಗುತ್ತದೆ.

ನಮಗೆ ಹಲಾಲ್ ಮಾಡಿದ ಮಾಂಸದ ಅವಶ್ಯಕತೆ ಇಲ್ಲ. ಮುಸ್ಲಿಮರಿಗೆ ಅಗತ್ಯವಿದ್ದರೆ ಹಲಾಲ್ ಮಾಡಿಸಿಕೊಳ್ಳಲಿ. ಬೇರೆಯವರು ಕೂಡ ಹಲಾಲ್ ಅನುಸರಿಸಬೇಕು ಅನ್ನುವುದು ಸರಿಯಲ್ಲ. ಹಲಾಲ್ ಮುಖಾಂತರ ಆರ್ಥಿಕ ವ್ಯವಸ್ಥೆಯನ್ನು ಕಪಿಮುಷ್ಠಿಗೆ ಹಿಡಿಯಲಾಗುತ್ತಿದೆ. ಇದರಿಂದ ಸಮಾಜ ದೇಶ ಹೊರಗೆ ಬರಬೇಕು. ಮುಸ್ಲಿಮೇತರರು ತಮಗೆ ಬೇಕಾದ ರೀತಿಯ ಹಲಾಲ್ ರಹಿತ ಆಹಾರ ಪಡೆಯುವಂತಾಗಬೇಕು. ದೇಶದಲ್ಲಿ ಜಾಗೃತಿ ಉಂಟಾಗಿದೆ ಇದು ಉತ್ತಮ ಬೆಳವಣಿಗೆ ಎಂದು ಕೇಶವ ಹೆಗ್ಡೆ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *