ಪಟಾಪಟ್ ಅಂತ ಮಾಡಿ ಬಟರ್‌ ಫ್ರೂಟ್‌ ಚಟ್ನಿ‌ – ಟೇಸ್ಟ್ ಸೂಪರ್!

Public TV
1 Min Read

ಬಟರ್ ಫ್ರೂಟ್‌ ಜ್ಯೂಸ್‌, ಮಿಲ್ಕ್‌ ಶೇಕ್, ಐಸ್‌ಕ್ರೀಮ್‌, ಫ್ರೂಟ್‌ ಸಲಾಡ್ ಎಲ್ಲಾ ಸವಿದಿರುತ್ತೀರ, ಆದರೆ ಇದರಿಂದ ಚಟ್ನಿ ಟ್ರೈ ಮಾಡಿದ್ದೀರಾ? ಹಾಗಾದರೆ ನಾನು ಇವತ್ತು ಹೇಳ್ಕೊಡ್ತೀನಿ, ಮರೆಯದೆ ಮಾಡ್ನೋಡಿ.

ಬಟರ್ ಫ್ರೂಟ್‌ ಚಟ್ನಿ ಮಾಡೋಕೆ ಏನೆಲ್ಲ ಬೇಕು?
ಬಟರ್‌ ಫ್ರೂಟ್‌ 1
ಹಸಿ ಮೆಣಸು 2
1/2 ಕಪ್‌ ಕರಿಬೇವು
ಉಪ್ಪು
ನಿಂಬೆರಸ

ಮಾಡೋದು ಹೇಗೆ?
ಕರಿಬೇವನ್ನು ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಬೇಕು. ಹಸಿ ಮೆಣಸು ಕೂಡ ಅದೇ ಎಣ್ಣೆಯಲ್ಲಿ ಫ್ರೈ ಮಾಡಿ, ಈಗ ಗ್ರೈಂಡರ್‌ಗೆ ಕರಿಬೇವು, ಹಸಿ ಮೆಣಸು ಹಾಕಿ ರುಬ್ಬ ಬೇಕು. ನೀರು ಸೇರಿಸಬಾರದು. ನಂತರ ಉಪ್ಪು, ಬಟರ್‌ ಫ್ರೂಟ್‌ ಹಾಕಿ ಗಟ್ಟಿಯಾಗಿ ರುಬ್ಬಿ, ಬಳಿಕ ಸ್ವಲ್ಪ ನಿಂಬೆರಸ ಸೇರಿಸಿದರೆ ಬಟರ್‌ ಫ್ರೂಟ್ ಚಟ್ನಿ ರೆಡಿ.

ತೂಕ ಕಡಿಮೆಗೆ ಸಹಕಾರಿ
ಡಯಟ್‌ನಲ್ಲಿರುವವರು ಬಟರ್‌ ಫ್ರೂಟ್‌ ಸೇವಿಸಿದರೆ ಸಾಕು ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಹೆಚ್ಚಿಸುತ್ತದೆ, ಇದರಲ್ಲಿರುವುದು ಆರೋಗ್ಯಕರ ಕೊಬ್ಬಿನಂಶ, ಹಾಗಾಗಿ ಮೈ ತೂಕ ಹೆಚ್ಚಾಗುವುದಿಲ್ಲ.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ಕಣ್ಣುಗಳು ಡ್ರೈಯಾಗುವುದನ್ನು ತಪ್ಪಿಸುತ್ತದೆ.

ತ್ವಚೆಗೂ ಒಳ್ಳೆಯದು
ತ್ವಚೆ ಸೌಂದರ್ಯ ವೃದ್ಧಿಗೆ ಒಳ್ಳೆಯದು, ಇದು ತ್ವಚೆಯನ್ನು ಆತಂರಿಕವಾಗಿ ಪೋಷಣೆ ಮಾಡುತ್ತದೆ

Share This Article