ಸೂಪ್ ಪ್ರಿಯರು ಟೇಸ್ಟ್‌ಗೆ ಹಾಗೂ ಆರೋಗ್ಯಕ್ಕೆ ಮೂಲಂಗಿ ಸೂಪ್ ಬಹಳ ಉತ್ತಮ. ಇದು ದೇಹಕ್ಕೆ ಬೇಕಾದ ʻಸಿ; ವಿಟಮಿನ್ ಒದಗಿಸುತ್ತದೆ. ಅಲ್ಲದೇ ಲಿವರ್ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಲಂಗಿ ಸೂಪ್ ತಯಾರಿಸುವ ವಿಧಾನ ನೋಡೋಣ.
ಬೇಕಾಗುವ ಪದಾರ್ಥಗಳು:
* ಮೂಲಂಗಿ: 200 ಗ್ರಾಂ
* ಸಾಸಿವೆ: 1 ಟೀಸ್ಪೂನ್
* ಜೀರಿಗೆ: 1 ಟೀಸ್ಪೂನ್
* ಇಂಗು
* ಕೆಂಪು ಮೆಣಸಿನಕಾಯಿ: 2
* ಬೇವಿನ ಎಲೆಗಳು
* ಅಡುಗೆ ಎಣ್ಣೆ
* ಅರಿಶಿನ ಪುಡಿ: 1 ಟೀಸ್ಪೂನ್
* ರಸಂ ಪುಡಿ: 1 ಟೀಸ್ಪೂನ್
* ಉಪ್ಪು: ರುಚಿಗೆ ತಕ್ಕಷ್ಟು
* ನೀರು
ತಯಾರಿಸುವ ವಿಧಾನ
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಇಂಗು, ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಬೇಕು. ನಂತರ ಸಾಸಿವೆ ಒಡೆದ ತಕ್ಷಣ, ಕತ್ತರಿಸಿದ ಮೂಲಂಗಿ ಸೇರಿಸಿ, 5-7 ನಿಮಿಷಗಳ ಕಾಲ ಮೂಲಂಗಿ ಮೃದುವಾಗುವವರೆಗೆ ಹುರಿಯಬೇಕು.
ಅರಿಶಿನ ಪುಡಿ, ರಸಂ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಒಂದು ಲೀಟರ್ ನೀರು ಸೇರಿಸಿ, ಮುಚ್ಚಿ, 10-15 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಬೇಕು. ಮೂಲಂಗಿ ಸಂಪೂರ್ಣವಾಗಿ ಬೆಂದ ನಂತರ, ಸೂಪ್ ಸವಿಯಲು ಸಿದ್ಧ.