ದಂಗೆ ಅಂದ್ರೆ ಜನ ಪ್ರತಿಭಟನೆ ಮಾಡ್ತಾರೆ ಅಂತ ಅರ್ಥ: ಎಚ್‍ಡಿಕೆ ಸ್ಪಷ್ಟನೆ

Public TV
1 Min Read

ಬೆಂಗಳೂರು: ಕಾರ್ಯಕ್ರಮದ ಭಾಷಣದ ವೇಳೆ ದಂಗೆ ಪದವನ್ನು ಬಳಸಿದ್ದಕ್ಕೆ ಭಾರೀ ಟೀಕೆ ಬರುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ಅರ್ಥವನ್ನು ಕಟ್ಟಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡದ್ದಾರೆ.

ಮಾಧ್ಯಮಗಳಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ದಂಗೆ ಅಂದರೆ ಜನ ಪ್ರತಿಭಟನೆ ಮಾಡುತ್ತಾರೆ ಅಂತ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ ಉತ್ತರಿಸಿದರು.

ಯಡಿಯೂರಪ್ಪ ಈ ಹಿಂದೆ ಸರಕಾರ ವಿರುದ್ಧ ದೊಣ್ಣೆ, ಬಡಿಗೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದರು. ಇದಕ್ಕಿಂತ ಕೆಟ್ಟ ಪದವನ್ನು ನಾನು ಬಳಸಿದ್ದೇನಾ? ಬಿಜೆಪಿ ಮುಖಂಡರು ಭೂಗತ ವ್ಯಕ್ತಿಗಳ ಸಂಪರ್ಕ ಇಟ್ಟುಕೊಂಡವರ ಮೂಲಕ ಸರ್ಕಾರ ಕೆಡವಲು ಮುಂದಾದರೆ ನಾನು ಸುಮ್ಮನೆ ಕೂರಬೇಕಾ ಎಂದು ಗರಂ ಆಗಿಯೇ ಪ್ರಶ್ನಿಸಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಗುರುವಾರ ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಜನಪರ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇಂತವರ ವಿರುದ್ಧ ನಾಡಿನ ಜನ ದಂಗೆ ಏಳಬೇಕು. ಈ ನಾಡಿನ ಜನರಿಗೆ ಈ ಪುಣ್ಯ ಭೂಮಿಯಿಂದಲೇ ನಾನು ದಂಗೆಗೆ ಕರೆ ನೀಡುತ್ತೇನೆ. ಅಷ್ಟೇ ಅಲ್ಲದೇ ನನ್ನಿಂದಲೂ ಏನದರೂ ತಪ್ಪಾಗಿದ್ದರೆ ಅಥವಾ ನಾನೇದರೂ ನಿಮಗೆ ದ್ರೋಹವನ್ನು ಮಾಡಿದ್ದರೆ, ಈ ನಾಡಿನ ಜನತೆ ನನ್ನ ವಿರುದ್ಧವೂ ದಂಗೆ ಏಳಿ ಎಂದು ಹೇಳಿದ್ದರು. ಇದನ್ನೂ ಓದಿ: ನಾಡಿನ ಜನತೆ ಬಿಜೆಪಿ ವಿರುದ್ಧ ದಂಗೆ ಏಳಬೇಕು: ಸಿಎಂ ಎಚ್‍ಡಿಕೆ

https://www.youtube.com/watch?v=CU5WQCUElu8

Share This Article
Leave a Comment

Leave a Reply

Your email address will not be published. Required fields are marked *