ಭೋಪಾಲ್: ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಬೇಕಾಗಿದ್ದ 21 ವರ್ಷದ ಯುವತಿಯ ಮೇಲೆ ಹಾಡಹಗಲೇ ಆ್ಯಸಿಡ್ ಮಿಶ್ರಿತ ರಾಸಾಯನಿಕ ಪದಾರ್ಥವನ್ನು ಎಸೆದು ದಾಳಿ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಯುವತಿ ದೊಡ್ಡ ರಿಯಾಲಿಟಿ ಶೋ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಬೇಕಿತ್ತು. ಆದರೆ ದುರ್ಷ್ಕಮಿಯೊಬ್ಬ ಆಕೆ ರಸ್ತೆಯಲ್ಲಿ ಹೋಗುವ ವೇಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ದಾಳಿ ಮಾಡಿದ ದುರ್ಷ್ಕಮಿಯನ್ನು ಮಹೇಂದ್ರ ಸೋನು ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಈ ದಾಳಿಯ ಪರಿಣಾಮ ಯುವತಿಯ ಕಣ್ಣಿನಲ್ಲಿರುವ ಕಾರ್ನಿಯಾಗಳಿಗೆ ಹೆಚ್ಚು ಹಾನಿಯಾಗಿದೆ. ಹೀಗಾಗಿ ಯುವತಿ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ರಸ್ತೆಯ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರಾಸಾಯನಿಕ ಎಸೆದು ಮಹೇಂದ್ರ ಸೋನು ಪರಾರಿಯಾಗುತ್ತಿರುವ ಸಂಪೂರ್ಣ ದೃಶ್ಯಗಳು ಸೆರೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv