Upendra Birthday: ಬರ್ತ್‌ಡೇ ಸೆಲೆಬ್ರೇಶನ್‌ ಎಲ್ಲಿ? ಅಪ್‌ಡೇಟ್‌ ಕೊಟ್ರು ಉಪ್ಪಿ

Public TV
2 Min Read

ರಿಯಲ್ ಸ್ಟಾರ್ ಉಪೇಂದ್ರಗೆ (Upendra) ಈ ವರ್ಷದ ಹುಟ್ಟುಹಬ್ಬ (Birthday) ತುಂಬಾನೇ ಸ್ಪೆಷಲ್. ಸೆ.18ರಂದು ಉಪ್ಪಿ ಬರ್ತ್‌ಡೇ ಸಂಭ್ರಮವಾಗಿದ್ದು, ಅದೇ ದಿನ ಗಣೇಶ ಚತುರ್ಥಿಯಾಗಿದೆ. ಗಣಪತಿ ಹಬ್ಬದ ಜೊತೆ ಉಪೇಂದ್ರ ಹುಟ್ಟುಹಬ್ಬ ಕೂಡ ಜೋರಾಗಿರಲಿದೆ. ಯುಐ (UI Film) ಚಿತ್ರದ ಟೀಸರ್ ಕೂಡ ರಿಲೀಸ್ ಆಗಲಿದೆ. ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವ ಪ್ಲ್ಯಾನ್ ಇದೆಯಾ, ಇಲ್ವಾ? ಈ ಬಗ್ಗೆ ನಟ ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಸೆ.18 ಈ ದಿನಕ್ಕಾಗಿ ಉಪ್ಪಿ ಜೊತೆ ಹುಟ್ಟುಹಬ್ಬ ಸೆಲೆಬ್ರೇಟ್‌ ಮಾಡೋಕೆ ಅಪಾರ ಅಭಿಮಾನಿಗಳು ಕಾಯ್ತಿದ್ದಾರೆ. ಈ ಖುಷಿಯನ್ನ ಡಬಲ್‌ ಮಾಡಲು ಉಪೇಂದ್ರ ಅವರು ಫ್ಯಾನ್ಸ್‌ ಆಹ್ವಾನ ನೀಡಿದ್ದಾರೆ. ಎಲ್ಲಾ ಅಭಿಮಾನಿಗಳಿಗೆ ನಮಸ್ಕಾರ. ಸೆಪ್ಟೆಂಬರ್ 18 ಈ ದಿನ ತುಂಬಾನೇ ವಿಶೇಷ. ಈ ವರ್ಷ ಗಣೇಶ ಚತುರ್ಥಿ ಬಂದಿದೆ. ನನ್ನ ಅಭಿಮಾನಿಗಳ ಹಬ್ಬ ಕೂಡ ಹೌದು. ಅದೇ ರೀತಿ ‘ಯುಐ’ ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ಸೆ.17ರ ರಾತ್ರಿ ಅಥವಾ ಸೆ.18ರ ಬೆಳಿಗ್ಗೆ ಕತ್ರಿಗುಪ್ಪೆ ಮನೆಯಲ್ಲಾಗಲೀ ಸದಾಶಿವ ನಗರದ ಮನೆಯಲ್ಲಾಗಲೀ ಇರಲ್ಲ ಎಂದಿದ್ದಾರೆ ಉಪೇಂದ್ರ. ಈ ಮೂಲಕ ಮನೆ ಸಮೀಪ ಬರದಂತೆ ಅವರು ಕೋರಿದ್ದಾರೆ. ಇದನ್ನೂ ಓದಿ:ಮಲ್ಲಿಕಾ ಸಿಂಗ್ ಪಾತ್ರ ಪರಿಚಯಿಸಿದ ನಿರ್ದೇಶಕ ಸಿಂಪಲ್ ಸುನಿ

ಸೆಪ್ಟೆಂಬರ್ 18ರಂದು ಮಧ್ಯಾಹ್ನ ಊರ್ವಶಿ ಥಿಯೇಟರ್ ಬಳಿ ಬನ್ನಿ. ಅಲ್ಲಿಯೇ ಕೇಕ್ ಕತ್ತರಿಸೋಣ. ಹುಟ್ಟುಹಬ್ಬ ಆಚರಿಸೋಣ. ಮಧ್ಯಾಹ್ನ 2 ಗಂಟೆಯಿಂದ 8ರವರೆಗೆ ಆಚರಣೆ ಇರುತ್ತದೆ. ಸಂಜೆ 6:30ಕ್ಕೆ ಥಿಯೇಟರ್ ಒಳಗೆ ಟೀಸರ್ ನೋಡೋಣ ಎಂದಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ದೊಡ್ಡ ಪರದೆಯಲ್ಲಿ ‘ಯುಐ’ (UI Film) ಟೀಸರ್ ನೋಡಲು ಫ್ಯಾನ್ಸ್ ಕಾದಿದ್ದಾರೆ.

‘ಕಬ್ಜ’ ಸಿನಿಮಾದ ಬಳಿಕ ಯುಐ ಸಿನಿಮಾ ಮೂಲಕ ಉಪೇಂದ್ರ ಮತ್ತೆ ಬೆಳ್ಳಿತೆರೆಯಲ್ಲಿ ಅಬ್ಬರಿಸುತ್ತಿದ್ದಾರೆ. ಹಲವು ವರ್ಷಗಳ ನಂತರ ಈ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್