ಬೀದರ್ | ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

Public TV
1 Min Read

ಬೀದರ್: ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾ.ಪಂ ಸದಸ್ಯ, ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬೀದರ್(Bidar) ಹೊರ ವಲಯದ ಚಿಕ್ಕಪೇಟೆ(Chikkapete) ಬಳಿಯ ಎಸ್.ಕೆ ಡಾಬಾದ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಗ್ರಾ.ಪಂ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಹೊನ್ನಿಕೇರಿ(Honnikeri) ಗ್ರಾಮದ ವೈಜನಾಥ್ ಬಿರಾದರ್(49) ಕೊಲೆಯಾದ ದುರ್ದೈವಿ. ಇಬ್ಬರು ಆರೋಪಿಗಳು, ವೈಜನಾಥ್‌ರನ್ನ ಅಟ್ಟಾಡಿಸಿಕೊಂಡು ಹೋಗಿ, ಮುಖದ ಗುರುತು ಸಿಗದಂತೆ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಸ್ನೇಹಿತೆ ಜೊತೆ ಓಡಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ – ಯುವತಿಯ ಪ್ರಿಯಕರ & ಗ್ಯಾಂಗ್ ಅರೆಸ್ಟ್

ಕೊಲೆಯಾದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತದೇಹವನ್ನು ಬ್ರೀಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಘಟನೆ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ(New Town Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article