ಮನರೇಗಾ ವಿಚಾರವಾಗಿ ಹೆಚ್‌ಡಿಕೆ ಜೊತೆ ಬಹಿರಂಗ ಚರ್ಚೆಗೆ ಸಿದ್ಧ: ಡಿಕೆಶಿ

1 Min Read

ಬೆಂಗಳೂರು: ಮನರೇಗಾ (MGNREGA) ವಿಚಾರದಲ್ಲಿ ಬಹಿರಂಗ ಚರ್ಚೆಗೆ ಕೇಂದ್ರ ಸಚಿವ ಕುಮಾರಸ್ವಾಮಿ (H.D.Kumaraswamy) ಆಹ್ವಾನಿಸಿದ್ದಾರೆ. ಪಂಥಾಹ್ವಾನ ಸ್ವೀಕರಿಸಲು ನಾನು ಸಿದ್ಧ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿದ್ದೇನೆ. ನಾನು ಯಾವಾಗ ಬೇಕಾದ್ರೂ ರೆಡಿ ಇದ್ದೀನಿ. ಈ ಮೂರು ದಿನಗಳಲ್ಲಿ ಯಾವಾಗಾದ್ರೂ ರೆಡಿ. ಇವತ್ತು ಸಂಜೆನೇ ರೆಡಿ. ಸಾರ್ವಜನಿಕ ಚರ್ಚೆಗಾದ್ರೂ ಬರಲಿ, ಇಲ್ಲವೇ ಯಾವುದಾದರೂ ಟಿವಿ ಮಾಧ್ಯಮಕ್ಕಾದ್ರೂ ಬರಲಿ. ವಿಧಾನಸಭೆಯಲ್ಲಾದ್ರೂ ಚರ್ಚೆಗೆ ಬರಲಿ. ಅವರು ಯಾವಾಗ ಹೇಳ್ತಾರೆ ಹೇಳಿ, ನಾನು ಡಿಬೆಟ್‌ಗೆ ರೆಡಿ. ಅವರ ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: JDS ಪಾರ್ಟಿಯನ್ನೇ ಮಾರಾಟಕ್ಕಿಟ್ಟಿದ್ದಾರೆ – ಪ್ರಿಯಾಂಕ್‌ ಖರ್ಗೆ ಲೇವಡಿ

ಬಿಡಿ ಅವರ ಮಾತನ್ನೆಲ್ಲ‌ ನಾನು ಸಿರಿಯಸ್ ಆಗಿ ತೆಗೆದುಕೊಳ್ಳಲ್ಲ. ನೋಡಿದ್ದೀರಾ ಅಲ್ವ? ಬರೀ ಡೈಲಾಗ್ ಹೇಳೋದು ಸ್ಟೇಟ್ಮೆಂಟ್ ಕೊಡೋದು. ಅದು ಆಯ್ತು ಬಿಡಿ ಡಿಬೇಟ್‌ಗೆ ಯಾವಾಗ ಟೈಂ ಫಿಕ್ಸ್ ಮಾಡ್ತೀರಾ. ನಾನು ನೋಡಪ್ಪ ಯಾವಾಗ ಬೇಕಿದ್ರು ರೆಡಿ. ನನಗೆ 3 ದಿನ ಟೈಂ ಕೊಡಿ ಅಷ್ಟೆ. ಇವತ್ತು ಸಂಜೆಯೇ ಬೇಕಿದ್ರೆ ಕರೀರಿ, ನಾನು ರೆಡಿ. ನನಗೆ ಯಾವ ತಯಾರಿ ಬೇಡ, ಅವಶ್ಯಕತೆ ಇಲ್ಲ ಎಂದು ಸವಾಲೆಸೆದರು.

ನರೇಗಾ ಏನು ಅಂತ ನನ್ನ fingertips ನಲ್ಲಿ ಇದೆ. ಇಡೀ ದೇಶದಲ್ಲಿ ನರೇಗಾ ಯೋಜನೆಯಡಿ ನಮ್ಮ ತಾಲೂಕಿಗೆ ನಂಬರ್ ಒನ್ ತಾಲೂಕು ಕನಕಪುರ ಅಂತ ಪ್ರಶಸ್ತಿ ಸಿಕ್ಕಿದೆ. ಇದು ಪ್ರಹ್ಲಾದ್ ಜೋಷಿ, ಕುಮಾರಸ್ವಾಮಿ, ವಿಜಯೇಂದ್ರಗೆ ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ. ದುಡ್ಡು ಹೊಡೆದಿದ್ದೇವೆ ಅಂತ ಕೇಂದ್ರ ಸರ್ಕಾರ ಬಂದು ತನಿಖೆ ಮಾಡಿದ್ರೂ, ಇದೆಲ್ಲದರ ಬಗ್ಗೆ ನಾನು ಡಿಬೆಟ್ ಮಾಡೋಕೆ ರೆಡಿ ಇದ್ದೇನೆ ಎಂದರು.

ರಾಜ್ಯ ರಾಜಕಾರಣಕ್ಕೆ‌ ಕುಮಾರಸ್ವಾಮಿ ಆಗಮನ ಎಂಬ ಚರ್ಚೆ ಆಗಲಿ. ಅಯ್ಯೋ ರಾಜ್ಯ ಅಲ್ಲ ಹಳ್ಳಿಯಿಂದ ರಾಜಕಾರಣ ಶುರು ಮಾಡಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮಾರ್ಚ್ 6 ರಂದು ರಾಜ್ಯ ಬಜೆಟ್ ಮಂಡನೆಗೆ ಚಿಂತನೆ

Share This Article