ಮೈಸೂರು ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ: ಪ್ರತಾಪ್ ಸಿಂಹ ಆಹ್ವಾನ

Public TV
3 Min Read

ಮೈಸೂರು: ನಾನು ಚರ್ಚೆಗೆ ಸಿದ್ಧವಾಗಿದ್ದೇನೆ. ನನಗೆ 48 ಗಂಟೆ ಮುಂಚಿತವಾಗಿ ಸ್ಥಳ, ಸಮಯ ತಿಳಿಸಿದರೆ ಸಾಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪಂಥಾಹ್ವಾನ ಕೊಟ್ಟರು.

ಮೈಸೂರು ಅಭಿವೃದ್ಧಿ ಕಾರ್ಯದ ಬಗ್ಗೆ ಕಾಂಗ್ರೆಸ್‍ನಿಂದ ಬಹಿರಂಗ ಚರ್ಚೆಗೆ ಆಹ್ವಾನ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಮಹದೇವಪ್ಪ ಯಾವುದೇ ಸಂದರ್ಭದಲ್ಲಿ ನನ್ನನ್ನು ಚರ್ಚೆಗೆ ಕರೆಯಲಿ. ನಾನು ಚರ್ಚೆಗೆ ಸಿದ್ಧ. ಅವರು ದಂಡು ದಾಳಿ ಸಮೇತ ಬರಲಿ. ನಾನು ಒಬ್ಬನೇ ಬರುತ್ತೇನೆ. 48 ಗಂಟೆ ಮುಂಚಿತವಾಗಿ ನನಗೆ ಸ್ಥಳ, ಸಮಯ ತಿಳಿಸಿದರೆ ಸಾಕು ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪ್ರಾಣಿ ಪರೀಕ್ಷೆಗೆಂದು ಕರೆಸಿ ಪಶುವೈದ್ಯನನ್ನೆ ಅಪಹರಿಸಿ ಬಲವಂತದ ಮದುವೆ ಮಾಡಿದ್ರು 

ನಿಮ್ಮ ಪಂಥಾಹ್ವಾನವನ್ನು ಸ್ವೀಕರಿಸಿದ್ದೇನೆ ಚರ್ಚೆಗೆ ಬನ್ನಿ. ನೀವು ಚರ್ಚೆಗೆ ಬರುವುದು ಬಿಟ್ಟು, ಗ್ರಾಮ ಪಂಚಾಯಿತಿ ಗೆಲ್ಲದ ವಕ್ತಾರನನ್ನು ಕಳುಹಿಸುತ್ತೇನೆಂದರೆ ಹೇಗೆ? ಸಿದ್ದರಾಮಯ ಅವರೇ ವೀರ, ಶೂರರು ಆನೆ, ಕುದುರೆ ಏರಿ ಯುದ್ಧಕ್ಕೆ ಬರುತ್ತಾರೆ. ನೀವೇನು ಹಂದಿ, ಕತ್ತೆ ಏರಿ ಯುದ್ಧಕ್ಕೆ ಬರುತ್ತೀನಿ ಎನ್ನುತ್ತೀರ. ನನ್ನ ಜೊತೆ ಚರ್ಚೆ ಮಾಡಲು ನಿಮಗೆ ಬಾಯಿ ಬಿದ್ದು ಹೋಗಿದೆಯಾ ಎಂದು ವ್ಯಂಗ್ಯವಾಡಿದರು.

ವೇದಿಕೆಗಳಲ್ಲಿ ಗಂಟೆಗಟ್ಟಲೆ ಭಾಷಣ ಮಾಡುತ್ತೀರಾ. ಖಾಲಿ ಕುಳಿತಿರುವ ಮಹದೇವಪ್ಪ ಫೇಸ್‍ಬುಕ್‍ನಲ್ಲಿ ಉದ್ದದ ಪೋಸ್ಟ್ ಹಾಕುತ್ತಾರೆ. ನನ್ನ ಜೊತೆ ಚರ್ಚೆಗೆ ಬರಲು ಏನು ಕಷ್ಟ? ನನ್ನ ಜೊತೆ ಚರ್ಚೆ ಮಾಡಲು ನಿಮಗೆ ಅಹಂ ಅಡ್ಡ ಬರುತ್ತಿದ್ದೇಯಾ. ಅಥವಾ ನನ್ನ ಜೊತೆ ಚರ್ಚೆಗೆ ಭಯನಾ ಎಂದು ಟೀಕಿಸಿದರು.

ಮೈಸೂರಿಗೆ ಬಾಡೂಟಕ್ಕೆ, ಬೀಗರ ಊಟಕ್ಕೆ ವಾರಕ್ಕೆ ಎರಡು ಬಾರಿ ಸಿದ್ದರಾಮಯ್ಯ ಬರುತ್ತಾರೆ. ಅದೇ ಸಮಯನಲ್ಲಿ ಅರ್ಧ ಗಂಟೆ ಬಿಡುವು ಮಾಡಿಕೊಂಡು ಚರ್ಚೆಗೆ ಬನ್ನಿ. ನೀವು ಮಾಡಿರುವ ಅಭಿವೃದ್ಧಿ ಕಾರ್ಯವನ್ನ ಹೇಳಿಕೊಳ್ಳೋಕೆ ಭಯ ಏಕೆ? ಚಿಕ್ಕ ಚಿಕ್ಕ ವಿಷಯವನ್ನು ಚರ್ಚೆ ಮಾಡುತ್ತೇನೆ ಬನ್ನಿ. ನೀವು ವಕ್ತಾರರನ್ನ ಚರ್ಚೆಗೆ ಕಳುಹಿಸುವುದಾದರೇ ನಾನು ನಮ್ಮ ಪಕ್ಷದ ತಾಲೂಕು ವಕ್ತಾರರನ್ನೇ ಕಳುಹಿಸುತ್ತೇನೆ ಎಂದು ಆಹ್ವಾನ ಸ್ವೀಕರಿಸಿದರು.

ಯೋಗ ದಿನದಂದು ರಾಜವಂಶಸ್ಥರಿಗೆ ವೇದಿಕೆಗೆ ಆಹ್ವಾನ ಇಲ್ಲವೆಂದು ಅಭಿಯಾನ ವಿಚಾರವಾಗಿ ಮಾತನಾಡಿದ ಅವರು, ನಾನು ಹೇಳಿರುವುದು ಕೇವಲ ಜನಪ್ರತಿನಿಧಿಗಳ ಪಟ್ಟಿ ಮಾತ್ರ. ಗಣ್ಯರ ಪಟ್ಟಿ ಇನ್ನೂ ಸಿದ್ಧವಾಗುತ್ತಿದೆ. ಅದಕ್ಕೆ ಮೊದಲು ಸುಳ್ಳು ಹಬ್ಬಿಸಬೇಡಿ. ಮೈಸೂರಿನ ರಾಜವಂಶಸ್ಥರ ಬಗ್ಗೆ ಎಲ್ಲರಗಿಂತ ಅತಿಯಾದ ಗೌರವ ನಮಗೆ ಇದೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರು ಮೈಸೂರು ಮಹಾರಾಜರ ಬಗ್ಗೆ ಹಗುರವಾಗಿ ಮಾತನಾಡಿದಾಗ ಅದರ ವಿರುದ್ಧ ನಾನೇ ಮೊದಲು ಧ್ವನಿ ಎತ್ತಿದವನು. ಸಿದ್ದರಾಮಯ್ಯ ಅವರ ಮಾತನ್ನ ವಿರೋಧಿಸಲು ಬಹುತೇಕರಿಗೆ ಹೆದರಿಕೆ ಇದೆ. ಆದ್ರೆ ನಾನು ಅವರಿಗೆ ಉತ್ತರ ಕೊಟ್ಟಿದ್ದೇನೆ. ಹಿಂದೆ ಸಿದ್ದರಾಮಯ್ಯ ಅವರು ಮಹಾರಾಜರ ಕುಟುಂಬಕ್ಕೆ ಆನೇಕ ಕಾಟ ಕೊಟ್ಟರು. ಹಲವು ಅನ್ಯಾಯ ಮಾಡಿದರು ಎಂದು ಆರೋಪಿಸಿದರು. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಆರೋಪಿ ಭದ್ರತೆಗೆ ಬುಲೆಟ್ ಪ್ರೂಫ್ ವಾಹನ, 100 ಪೊಲೀಸರು 

ಅವತ್ತು ಮೈಸೂರಿನಲ್ಲಿದ್ದ ಯಾವ ಜನಪ್ರತಿನಿಧಿಯೂ ಧ್ವನಿ ಎತ್ತಲಿಲ್ಲ. ಆದರೆ ಬಿಜೆಪಿ ಇತಂಹದನ್ನೆಲ್ಲಾ ಸಹಿಸದೆ ಮಹಾರಾಜರ ಪರವಾಗಿ ಎಲ್ಲ ಸಂದರ್ಭದಲ್ಲೂ ಧ್ವನಿ ಎತ್ತುತ್ತಿದೆ. ಮೈಸೂರು ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಮಹಾರಾಜರ ಹೆಸರು ಇಡುತ್ತಿದ್ದೇವೆ. ಇದು ಮಹಾರಾಜರಿಗೆ ನಾವು ಕೊಡುವ ಗೌರವ. ಯಾವುದೋ ಒಂದು ಪೋಸ್ಟರ್ ಹಾಕಿ ನಮಗೆ ಮಹಾರಾಜರ ಬಗ್ಗೆ ತಿಳಿ ಹೇಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಗೆ ಇಡಿ ವಿಚಾರಣೆ ಹಿನ್ನೆಲೆ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಈ ದೇಶದ ಕಾನೂನು ಎಲ್ಲರಿಗೂ ಒಂದೆ. ಇಡಿ ತನಿಖೆಗೆ ಕರೆದಿದೆ. ತನಿಖೆಯನ್ನು ಕಾಂಗ್ರೆಸ್ ನಾಯಕರು ಎದುರಿಸಲಿ. ಹಿಂದೆ ಮೋದಿ ಸಿಎಂ ಆಗಿದ್ದಾಗಲೂ ವಿಚಾರಣೆ ಎದುರಿಸಿದ್ದರು. ಅಮಿತ್ ಶಾ ಅವರನ್ನು ಒಂದು ಪ್ರಕರಣದಲ್ಲಿ ಫಿಟ್ ಮಾಡಿ ಕಾಂಗ್ರೆಸ್ ಜೈಲಿಗೆ ಕಳುಹಿಸಿತ್ತು. ಅದನ್ನೆಲ್ಲಾ ಎದುರಿಸಿ ನ್ಯಾಯಾಲಯದಲ್ಲಿ ಗೆದ್ದು ಬಂದರು. ಇವರು ತಪ್ಪು ಮಾಡಿಲ್ಲ ಎನ್ನುವುದಾದರೆ ಅದನ್ನ ತನಿಖೆಯಲ್ಲಿ ತಿಳಿಸಲಿ. ಈ ನೆಲದ ಕಾನೂನಿಗೆ ಯಾರು ದೊಡ್ಡವರಲ್ಲ ಯಾರು ಚಿಕ್ಕವರಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *