– ನನ್ನ ಮೇಲೆ ಕಮಿಷನ್ ಆರೋಪಕ್ಕೆ ಮಾನನಷ್ಟ ಮೊಕದ್ದಮೆ
– ನನ್ನ ಮೇಲಿನ ಆರೋಪಕ್ಕೆ ದಾಖಲೆಯಿದ್ದರೆ ರಾಜಕೀಯ ನಿವೃತ್ತಿ
ಚಿತ್ರದುರ್ಗ: ಪೂರ್ಣಾನಂದಶ್ರೀಗಳು (Poornananda Swamiji) ನಿಗದಿ ಪಡಿಸಿದ ದಿನಾಂಕ, ವೇಳೆಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದ್ದಾರೆ.
ಬಹಿರಂಗ ಚರ್ಚೆಗೆ ಪೂರ್ಣಾನಂದಶ್ರೀ ಸವಾಲು ವಿಚಾರವಾಗಿ ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಶ್ರೀಗಳ ಸವಾಲನ್ನು ಸ್ವೀಕರಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಬೊಮ್ಮಾಯಿ ಸಿಎಂ ಆಗಿದ್ದಾಗ ಮೂರುವರೆ ಕೋಟಿ ನೀಡಿದ್ದರು. 2022ರ ಅಕ್ಟೋಬರ್ 18ಕ್ಕೆ ಬೊಮ್ಮಾಯಿ ಅನುದಾನ ಬಿಡುಗಡೆ ಮಾಡಿದ್ದರು. ಬಳಿಕ ಬೊಮ್ಮಾಯಿ 1 ಕೋಟಿ ಕಡಿತಗೊಳಿಸಿ 2 ಕೋಟಿ ನೀಡಿದ್ದರು. ನಮ್ಮ ಸರ್ಕಾರ ಬಂದಾಗ ನಾನು ಅಧಿಕಾರಿಗಳ ಜೊತೆ ಚರ್ಚಿಸಿದ್ದೆ. ಹಿಂದೆ 5 ಕೋಟಿ, ಮತ್ತು 2 ಕೋಟಿ ಸೇರಿ 7 ಕೋಟಿ ಅನುದಾನ ಬಿಡುಗಡೆ ಆಗಿದೆ. ಆರ್ಥಿಕ ಇಲಾಖೆ ನೀಡಿದ್ದನ್ನು ಮರೆಮಾಚಿ ಶ್ರೀಗಳು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟಿಗೆ ದಾಖಲೆ ನೀಡುವ ಕೆಲಸ ನಾವು ಈಗ ಮಾಡುತ್ತೇವೆ ಎಂದರು. ಇದನ್ನೂ ಓದಿ: ಬಿಹಾರ ಚುನಾವಣೆಗೆ ನಿತೀಶ್ ಸಜ್ಜು – ಬಿಹಾರದ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ
ಶ್ರೀಗಳಿಂದ ನನ್ನ ಮೇಲೆ ಕಮಿಷನ್ (Commission) ಆರೋಪಕ್ಕೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನನ್ನ ಮೇಲಿನ ಆರೋಪಕ್ಕೆ ದಾಖಲೆಯಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ನನ್ನ ಬಳಿ ಅನುದಾನದ ಬಗ್ಗೆ ಎಲ್ಲಾ ದಾಖಲೆಗಳಿವೆ. ಶ್ರೀಗಳು 2 ಗಂಟೆ ಮೊದಲು ಹೇಳಿದರೆ ಬಹಿರಂಗ ಚರ್ಚೆಗೆ ಬರುತ್ತೇನೆ. ಮಠ ಮಾನ್ಯಗಳಿಗೆ, ಸ್ವಾಮೀಜಿಗಳಿಗೆ ಗೌರವಿಸುತ್ತೇನೆ. ಪೂರ್ಣಾನಂದಶ್ರೀ ಇನ್ನೂ ಎಂಎಲ್‌ಸಿ, ಮಂತ್ರಿ ಮೂಡ್‌ನಲ್ಲಿದ್ದಾರೆ. ಇನ್ನೂ ಎಂಎಲ್‌ಸಿ, ಮಂತ್ರಿಗಿರಿ ಬಿಟ್ಟು ಇನ್ನೂ ಹೊರಬಂದಿಲ್ಲ. ಸ್ವಾಮೀಜಿಗಳಾದವರು ನಮಗೆ ಮಾರ್ಗದರ್ಶನ ನೀಡಬೇಕು. ಅದು ಬಿಟ್ಟು ಆರೋಪ, ಪ್ರತ್ಯಾರೋಪ ನಾವು ಸಹಿಸಿಕೊಳ್ಳಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಮೈಲಿಗಲ್ಲು – 500 ಕೋಟಿ ತಲುಪಲಿರುವ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ
ರಾಜಕಾರಣಿಯಾಗಿ ಸ್ವಾಮೀಜಿ ಆಗುವ ಬದಲು ರಾಜಕಾರಣಿಯಾಗೇ ಉಳಿಯಲಿ. ಆ ಪೀಠಕ್ಕೆ, ಸ್ವಾಮೀಜಿ, ಕಾವಿಯನ್ನು ನಾವು ಪ್ರೀತಿಸ್ತೀವಿ, ಗೌರವಿಸುತ್ತೇವೆ. ಸ್ವಾಮೀಜಿ ವರ್ತನೆ ಪ್ರೀತಿ, ಗೌರವದಿಂದ ಇರಬೇಕು. ಮಾನನಷ್ಟ ಮೊಕದ್ದಮೆಗೆ ಫೈಲ್ ರೆಡಿ ಆಗಿದ್ದು, ಖಂಡಿತ ಕೇಸ್ ಹಾಕುತ್ತೇನೆ. 25% ಕೇಳಿದ ದಾಖಲೆಯಿದ್ದರೆ ಕೊಡಿ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಪೂರ್ಣಾನಂದಶ್ರೀ ಎಷ್ಟು ಸಲ ಶಾಸಕ ಆಗಿದ್ದಾರೆ. ಸ್ವಾಮೀಜಿ ಕಾವಿ ಕಳಚಿದ ಬಳಿಕ ನಾನು ಹೇಳುತ್ತೇನೆ. ಸ್ವಾಮೀಜಿ ಏನು ತಿಳಿದುಕೊಂಡಿದ್ದಾರೆ? ಬೊಮ್ಮಾಯಿ ಕಾಲದಲ್ಲೇ ಅನುದಾನ ಬೇಡ ಎಂದು ಹೇಳಲಾಗಿದೆ, ನಾವೇಕೆ ಕೊಡಬೇಕು? ರಾಜಕಾರಣಿ ಆಗಿದ್ದಾಗ ಅನುದಾನ ಎತ್ತಿಕೊಂಡಿದ್ದಾರೆ. ಈಗಲೂ ಅದೇ ಕೆಲಸ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: KRS ಡ್ಯಾಂ ಮೇಲೆ ‘ಕೈ’ ಶಾಸಕ ಬೆಂಬಲಿಗನ ಹುಚ್ಚಾಟ- ನಿರ್ಬಂಧವಿದ್ದರೂ ಲೆಕ್ಕಿಸದೇ ಜಲಾಶಯದ ಮೇಲೆ ರೀಲ್ಸ್