ಗುಜರಾತ್‌ ವಿರುದ್ಧ 61 ರನ್‌ಗಳ ಭರ್ಜರಿ ಜಯ – ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ

1 Min Read

ವಡೋದರ: ಬ್ಯಾಟರ್‌ ಮತ್ತು ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 61 ರನ್‌ಗಳ ಜಯ ಸಾಧಿಸಿ ಪ್ಲೇ ಆಫ್‌ ಪ್ರವೇಶಿಸಿದೆ.

ಗೆಲ್ಲಲು 179 ರನ್‌ಗಳ ಕಠಿಣ ಗುರಿಯನ್ನು ಪಡೆದ ಗುಜರಾತ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 117 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಸತತ 5 ಪಂದ್ಯಗಳನ್ನು ಜಯಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ 10 ಅಂಕ ಸಂಪಾದಿಸಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಈ ಮೂಲಕ ಪ್ಲೇ ಆಫ್‌ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

 

ಗುಜರಾತ್‌ 5 ರನ್‌ ಗಳಿಸುವಷ್ಟಲ್ಲೇ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಸಯಾಲಿ ಸತ್ಘರೆ ತಮ್ಮ ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಕಿತ್ತು ಶಾಕ್‌ ನೀಡಿದರು.  ಅನುಷ್ಕಾ ಶರ್ಮಾ ಅವರು 18 ರನ್‌ಗಳಿಸಿ ಔಟಾದರೆ ನಾಯಕಿ ಆಶ್ಲೀ ಗಾರ್ಡ್ನರ್ (Ashleigh Gardner) 54 ರನ್‌ (43 ಎಸೆತ, 5 ಬೌಂಡರಿ, 1 ಸಿಕ್ಸ್‌) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಆರ್‌ಸಿಬಿ 9 ರನ್‌ಗಳಿಸುವಷ್ಟರಲ್ಲೇ 2 ವಿಕೆಟ್‌ ಕಳೆದುಕೊಂಡಿತ್ತು. ನಂತರ ಸ್ಮೃತಿ ಮಂಧಾನ (Smriti Mandhana) ಮತ್ತು ಗೌತಮಿ ನಾಯ್ಕ್‌ (Gautami Naik) ಮೂರನೇ ವಿಕೆಟಿಗೆ 45 ಎಸೆತಗಳಲ್ಲಿ 60 ರನ್‌ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು.  ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ – ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌


ಸ್ಮೃತಿ ಮಂಧಾನ 26 ರನ್‌ಗಳಿಸಿ(23 ಎಸೆತ, 4 ಬೌಂಡರಿ) ಹೊಡೆದು ಔಟಾದರೆ ನಂತರ ಗೌತಮಿ ನಾಯ್ಕ್‌ ಮತ್ತು ರಿಚಾ ಘೋಷ್‌ 45 ಎಸೆತಗಳಲ್ಲಿ 69 ಜೊತೆಯಾಟವಾಡಿದರು.

ಸ್ಫೋಟಕ ಬ್ಯಾಟ್‌ ಬೀಸಿದ ಗೌತಮಿ 73 ರನ್‌(55 ಎಸೆತ, 7 ಬೌಂಡರಿ, 1 ಸಿಕ್ಸ್‌) ರಿಚಾ ಘೋಷ್‌ 27 ರನ್‌(20 ಎಸೆತ, 3 ಸಿಕ್ಸ್‌) ಕೊನೆಯಲ್ಲಿ ರಾಧಾ ಯಾದವ್‌ 17 ರನ್‌(8 ಎಸೆತ, 2 ಬೌಂಡರಿ, 1 ಸಿಕ್ಸ್‌), ಶ್ರೇಯಾಂಕ ಪಾಟೀಲ್‌ 8 ರನ್‌(2 ಎಸೆತ, 2 ಬೌಂಡರಿ) ಹೊಡೆದರು. ಗುಜರಾತ್‌ ಇತರೇ ರೂಪದಲ್ಲೇ 21 ರನ್‌ಗಳನ್ನು ಬಿಟ್ಟುಕೊಟ್ಟಿತ್ತು.

Share This Article