ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ – ಮಕರ ಸಂಕ್ರಾಂತಿಗೆ ಶುಭ ಹಾರೈಸಿದ ಆರ್‌ಸಿಬಿ

1 Min Read

ನ್ನಡಿಗರ ಹೆಮ್ಮೆಯ ಕ್ರಿಕೆಟ್‌ ಟೀಮ್‌ ಆರ್‌ಸಿಬಿ (Royal Challengers Bengaluru), ನಾಡಿನ ಸಮಸ್ತ ಜನರಿಗೆ ಶುಭ ಹಾರೈಸಿದೆ. ಎಕ್ಸ್‌ನಲ್ಲಿ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ.” ನಾಡಿನ ಸಮಸ್ತ ಜನರಿಗೆ ಮಕರ ಸಂಕ್ರಾಂತಿಯ (Makara Sankranti) ಹಾರ್ದಿಕ ಶುಭಾಶಯಗಳು ಎಂದು ಪೋಸ್ಟ್‌ ಮಾಡಿದೆ.

ಪೋಸ್ಟ್‌ನಲ್ಲಿ ಮಹಿಳಾ ತಂಡದ ಆಟಗಾರರು ಹಾಗೂ ಪುರುಷರು ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಆರ್‌ಸಿಬಿಯ ಹೆಸರು ಹಾಗೂ ಚಿಹ್ನೆ ಹೊತ್ತ ಗಾಳಿಪಟ ಆಕಾಶಕ್ಕೆ ಹಾರುತ್ತಿರುವುದನ್ನು ಡಿಸೈನ್‌ ಮಾಡಲಾಗಿದೆ. ಈ ಮೂಲಕ ಈ ಸಲವು ಕಪ್‌ ನಮ್ಮದೇ ಎಂಬ ಸಂದೇಶ ಕೊಟ್ಟಂತೆ ಕಾಣುತ್ತಿದೆ. ಇದನ್ನೂ ಓದಿ: ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ – ಕೆ.ಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು

ರಾಜ್ಯದೆಲ್ಲೆಡೆ ಸಂಭ್ರಮದ ಮಕರಸಂಕ್ರಾಂತಿ ಹಬ್ಬದ ಆಚರಣೆ ನಡೆಯುತ್ತಿದೆ. ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಚಿಣ್ಣರು ಎಳ್ಳುಬೆಲ್ಲ ಹಂಚಿ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಮಕರ ಸಂಕ್ರಾಂತಿ – ಕಾಶಿ ಚಂದ್ರಮೌಳೇಶ್ವರ ಗರ್ಭಗುಡಿಯ ಶಿವಲಿಂಗದ ಮೇಲೆ ಸೂರ್ಯರಶ್ಮಿ ಸ್ಪರ್ಶ

Share This Article