ಮೊದಲ ಪಂದ್ಯದಲ್ಲೇ ದಾಖಲೆ ಬರೆದ ವಿರಾಟ್‌ ಕೊಹ್ಲಿ!

1 Min Read

ಬೆಂಗಳೂರು: ಸನ್‌ ರೈಸರ್ಸ್‌ (SRH) ವಿರುದ್ಧದ ಪಂದ್ಯ ಮೊದಲ ಪಂದ್ಯದಲ್ಲೇ ಕಿಂಗ್‌ ಕೊಹ್ಲಿ (Virat Kohli) ವಿಶಿಷ್ಟ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಆರಂಭದಿಂದ 19 ಆವೃತ್ತಿವರೆಗೂ ಒಂದೇ ತಂಡವನ್ನು ಪ್ರತಿನಿಧಿಸಿರುವ ಏಕೈಕ ಆಟಗಾರನೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

2008 ರಲ್ಲಿ ಪ್ರಾರಂಭಗೊಂಡ ಚೊಚ್ಚಲ ಐಪಿಎಲ್‍ನಲ್ಲಿ ಆರ್‌ಸಿಬಿ ತಂಡಕ್ಕೆ ಸಾಮಾನ್ಯ ಓರ್ವ ಆಟಗಾರನಾಗಿ ಆಯ್ಕೆಗೊಂಡ ವಿರಾಟ್ ನಂತರ ತನ್ನ ಉತ್ತಮ ಬ್ಯಾಟಿಂಗ್‍ನಿಂದಾಗಿ ಆರ್‌ಸಿಬಿಯ ಪ್ರಮುಖ ಅಟಗಾರನಾಗಿ ಕಾಣಿಸಿಕೊಂಡರು.

ಆರಂಭದ ಸೀಸನ್‍ಗಳಲ್ಲಿ ಅನಿಲ್ ಕುಂಬ್ಳೆ ಸಾರಥ್ಯದಲ್ಲಿ ಬೆಂಗಳೂರು ಪರ ಬ್ಯಾಟ್ಸ್‌ಮ್ಯಾನ್ ಆಗಿ ಆಡಿದ್ದ ಕೊಹ್ಲಿ 2013ರ ಬಳಿಕ ಆರ್‌ಸಿಬಿ ತಂಡದ ನಾಯಕನಾಗಿ ನೇಮಕಗೊಂಡು 2021 ರವರೆಗೆ ತಂಡವನ್ನು ಮುನ್ನಡೆಸಿದ್ದರು. ಓರ್ವ ಯಶಸ್ವಿ ಬ್ಯಾಟ್ಸ್‌ಮ್ಯಾನ್ ಆಗಿ ಐಪಿಎಲ್‍ನಲ್ಲಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿಗೆ ಕಪ್ ಗೆಲ್ಲುವ ಕನಸು 2024 ರವರೆಗೆ ಕನಸಾಗಿಯೇ ಇತ್ತು. ಆದರೆ 2025 ರಲ್ಲಿ ಈ ಕನಸು ನನಸಾಗಿತ್ತು. ಇದನ್ನೂ ಓದಿ: ಮೃತ ಅಭಿಮಾನಿಗಳಿಗೆ ಗೌರವ – ಕಪ್ಪು ತೋಳುಪಟ್ಟಿ ಧರಿಸಿ ಕಣಕ್ಕಿಳಿದ ಆರ್‌ಸಿಬಿ ಆಟಗಾರರು

ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ನಾಯಕ 2008 ರಲ್ಲೇ ಕೊಹ್ಲಿ ಜೊತೆಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ರೋಹಿತ್‌ ಶರ್ಮಾ 2008 ರಿಂದ 2010 ರವರೆಗೆ ಡೆಕ್ಕನ್‌ ಚಾರ್ಜರ್ಸ್‌ ತಂಡದ ಪರ ಆಡಿ ನಂತರ ಮುಂಬೈ ತಂಡವನ್ನು ಸೇರಿದ್ದರು.

ಧೋನಿ 2008 ರಿಂದ 2015 ರವರೆಗೆ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್‌ ಬೆಟ್ಟಿಂಗ್‌ ಹಗರಣದಲ್ಲಿ ಭಾಗಿಯಾದ ಕಾರಣ 2 ವರ್ಷ ಚೆನ್ನೈ ತಂಡವನ್ನು ನಿಷೇಧಿಸಿಲಾಗಿತ್ತು. ಹೀಗಾಗಿ ಧೋನಿ ರೈಸಿಂಗ್‌ ಪುಣೆ ಸೂಪರ್‌ ಜೈಂಟ್‌ ತಂಡದ ಪರ ಆಡಿದ್ದರು.

ಇಲ್ಲಿಯವರೆಗೆ 267 ಪಂದ್ಯ ವಾಡಿರುವ ಕೊಹ್ಲಿ 8661 ರನ್‌ ಹೊಡೆದಿದ್ದಾರೆ. 39.55 ಸರಾಸರಿ, 132.86 ಸ್ಟ್ರೈಕ್‌ ರೇಟ್‌ನಲ್ಲಿ ಕೊಹ್ಲಿ 8 ಶತಕ, 63 ಬಾರಿ ಅರ್ಧಶತಕ ಚಚ್ಚಿದ್ದಾರೆ.

Share This Article