WPL 2026: ಆರ್‌ಸಿಬಿ ಗೆಲುವಿನ ಓಟಕ್ಕೆ ಬ್ರೇಕ್‌ – ಡೆಲ್ಲಿಗೆ 7 ವಿಕೆಟ್‌ಗಳ ಜಯ

1 Min Read

ವಡೋದರ: ಡಬ್ಲ್ಯೂಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಆರ್‌ಸಿಬಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದೆ.

ಕೊತಂಬಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿತು. 20 ಓವರ್‌ಗಳಿಗೆ ಆಲೌಟ್‌ ಆಗಿ 109 ರನ್‌ಗಳನ್ನು ಮಾತ್ರ ಕಲೆಹಾಕಿತು. ಸಾಧಾರಣ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡ 15 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು.

ಡೆಲ್ಲಿ ಬೌಲಿಂಗ್‌ ದಾಳಿಗೆ ಆರ್‌ಸಿಬಿ ಬ್ಯಾಟರ್‌ಗಳು ಅಕ್ಷರಶಃ ತತ್ತರಿಸಿದರು. ಕ್ಯಾಪ್ಟನ್‌ ಸ್ಮೃತಿ ಮಂಧಾನಾ 38 ಹಾಗೂ ರಾಧಾ ಯಾದವ್‌ 18, ಗೌತಮಿ ನಾಯಕ್ 11 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಯಾರು ಕೂಡ ಎರಡಂಕಿ ರನ್‌ ದಾಟಲಿಲ್ಲ. ಡೆಲ್ಲಿ ಪರ ನಂದಿನಿ ಶರ್ಮಾ 3 ವಿಕೆಟ್‌ ಕಿತ್ತು ಮಿಂಚಿದರು. ಚಿನೆಲ್ಲೆ ಹೆನ್ರಿ, ಮರಿಜನ್ನೆ ಕೇಪ್‌, ಮಿನ್ನು ಮಣಿ ತಪಾ 2 ವಿಕೆಟ್‌ ಕಬಳಿಸಿದರು. ಶ್ರೀಚರಣೆ 1 ವಿಕೆಟ್‌ ಪಡೆದರು.

ಸಂಘಟಿತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಡೆಲ್ಲಿ ಸುಲಭ ಜಯ ಸಾಧಿಸಿತು. ಲಾರಾ ವೋಲ್ವಾರ್ಡ್ 42, ಜೆಮಿಮಾ ರೋಡ್ರಿಗಸ್ 24, ಮರಿಜಾನ್ನೆ ಕಪ್ಪ್ 19, ಶೆಫಾಲಿ ವರ್ಮಾ 19 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Share This Article