ಬೆಂಗಳೂರಿನಲ್ಲಿಂದು RCB vs CSK ಹೈವೋಲ್ಟೇಜ್ ಪಂದ್ಯ – ಚಿನ್ನಸ್ವಾಮಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

By
1 Min Read

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಇಂದು ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (csk) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಎರಡೂ ತಂಡಗಳಿಗೆ ಇಂದಿನ ಐಪಿಎಲ್ (IPL 2024) ಪಂದ್ಯ ಡು ಆರ್ ಡೈ ಮ್ಯಾಚ್ ಆಗಿದೆ.

ಐಪಿಎಲ್ ಪಂದ್ಯ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ. ಐಪಿಎಲ್ ಪಂದ್ಯ ಬಂದೋಬಸ್ತ್‌ಗೆ 1,200 ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ವರು ಡಿಸಿಪಿಗಳು, 12 ಎಸಿಪಿ, 28 ಇನ್ಸ್ಪೆಕ್ಟರ್, 80 ಸಬ್ ಇನ್ಸ್ಪೆಕ್ಟರ್ ಸೇರಿ ಒಟ್ಟು 1,200 ಪೊಲೀಸರನ್ನು ಕ್ರೀಡಾಂಗಣದ ಸುತ್ತಮುತ್ತ ನಿಯೋಜಿಸಲಾಗಿದೆ. 4 ಕೆಎಸ್‌ಆರ್‌ಪಿ ತುಕಡಿ, ಹೋಂ ಗಾರ್ಡ್ ಸಹ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: 18 ರನ್, 18.1 ಓವರ್, ಕೊಹ್ಲಿ ಜೆರ್ಸಿ ನಂ.18 – ಮೇ 18ರಂದು ಸೋಲೇ ಕಾಣದ ಆರ್‌ಸಿಬಿಗೆ ಅಗ್ನಿಪರೀಕ್ಷೆ!

ಕ್ಯೂಆರ್‌ಟಿ, ವಾಟರ್ ಜೆಟ್, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳವನ್ನೂ ನಿಯೋಜಿಸಿದೆ. ಮಫ್ತಿಯಲ್ಲೂ ಸ್ಟೇಡಿಯಂ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ನಕಲಿ ಟಿಕೆಟ್ ಹಾವಳಿ ತಡೆಗಟ್ಟಲು ಮಫ್ತಿಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

Share This Article