ಮುಂಬೈ: 19ನೇ ಆವೃತ್ತಿಯ ಐಪಿಎಲ್ (IPL 2026) ಟೂರ್ನಿಗೆ ಭರದ ಸಿದ್ಧತೆ ನಡೆಯುತ್ತಿದ್ದು, ಬೇಕಾದ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬೇಡದವರನ್ನು ಕೈಬಿಡುವ ಕ್ರಮದಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 8 ಆಟಗಾರರಿಗೆ ಆರ್‌ಸಿಬಿ (RCB) ಗೇಟ್‌ಪಾಸ್ ಕೊಟ್ಟಿದೆ.
ಹಾಲಿ ಚಾಂಪಿಯನ್ ಆರ್‌ಸಿಬಿ ಲಿಯಾಮ್ ಲಿವಿಂಗ್‌ಸ್ಟೋನ್ ಸೇರಿದಂತೆ ನಾಲ್ವರು ವಿದೇಶಿ ಆಟಗಾರರನ್ನು ಕೈಬಿಟ್ಟಿದೆ. ಮುಜರಬಾನಿ, ಲುಂಗಿ ಎನ್‌ಗಿಡಿ ಮತ್ತು ಟಿಮ್ ಸೀಫರ್ಟ್ ಅವರೂ ಪಟ್ಟಿಯಲ್ಲಿದ್ದಾರೆ. ಮಾಯಾಂಕ್ ಅಗರ್ವಾಲ್ ಮತ್ತು ಸ್ವಸ್ತಿಕ್ ಚಿಕಾರಾ ಅವರನ್ನು ಸಹ ಕೈಬಿಡಲಾಗಿದೆ. ಅವರು 16.4 ಕೋಟಿ ರೂ.ಗಳ ಮೊತ್ತದೊಂದಿಗೆ ಹರಾಜಿಗೆ ಪ್ರವೇಶಿಸಲಿದ್ದಾರೆ.
ಆಟಗಾರರ ರೀಟೈನ್ ಹಾಗೂ ರಿಲೀಸ್‌ಗೆ ಇಂದು ಕೊನೆ ದಿನವಾಗಿತ್ತು. ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಅಂತಿಮ ತಂಡಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸಲ್ಲಿಸಿವೆ.
ಕೈಬಿಟ್ಟ ಆಟಗಾರರು
ಸ್ವಸ್ತಿಕ್ ಚಿಕಾರಾ, ಮಯಾಂಕ್ ಅಗರ್ವಾಲ್, ಟಿಮ್ ಸೀಫರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸಿಂಗ್ ಮುಜರಾಬಾನಿ, ಮೋಹಿತ್ ರಾಠಿ.
ರೀಟೈನ್ ಮಾಡಿಕೊಂಡ ಆಟಗಾರರು
ರಜತ್ ಪಾಟಿದಾರ್ (ಸಿ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ಸಿಂಗ್, ಅಭಿನಂದನ್ ಶರ್ಮಾ, ಅಭಿನಂದನ್ ಶರ್ಮಾ, ಅಭಿನಂದನ್ ಶರ್ಮಾ.

