ಈ ಸಲ ಕಪ್ ನಮ್ದೆ – ಆರ್​ಸಿಬಿಗೆ ಹರುಷ ತುಂಬಿದ ಹೊಸ ಸ್ಫೂರ್ತಿ ಗೀತೆ

Public TV
1 Min Read

ಬೆಂಗಳೂರು: 15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿ ತಂಡಕ್ಕೆ ಅಭಿಮಾನಿಗಳು ಈ ಸಲ ಕಪ್ ನಮ್ದೆ ಎನ್ನುವ ಹೊಸ ಸ್ಫೂರ್ತಿ ಗೀತೆ ಮೂಲಕ ಹರುಷ ತುಂಬಿದ್ದಾರೆ.

ಪ್ರತಿ ಬಾರಿ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ತಂಡಕ್ಕಾಗಿ (RCB) ಅಭಿಮಾನಿಗಳು ಒಂದಲ್ಲ ಒಂದು ವಿಭಿನ್ನತೆಯೊಂದಿಗೆ ಚಿಯರ್ ಅಪ್ ಮಾಡುತ್ತಾರೆ. ಈ ಬಾರಿಯು ಆರ್​ಸಿಬಿ ಅಭಿಮಾನಿಗಳು ತಂಡಕ್ಕಾಗಿ ಹೊಸ ಸ್ಫೂರ್ತಿ ಗೀತೆಯನ್ನು ಹಾಡಿ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ

ಮೆಗಾ ಹರಾಜಿನ ಬಳಿಕ ಹೊಸ ರೂಪ ಪಡೆದುಕೊಂಡು ಕಣಕ್ಕಿಳಿಯಲು ಸಿದ್ಧವಾಗಿರುವ ಆರ್​ಸಿಬಿ ತಂಡಕ್ಕಾಗಿ ಶ್ರೀರಾಮ್ ಗಂಧರ್ವ ಅವರ ಸಂಗೀತ ಸಂಯೋಜನೆಯಲ್ಲಿ ಸ್ಫೊರ್ತಿ ಗೀತೆ ಮೂಡಿಬಂದಿದೆ. ಹಾಡನ್ನು ಅನಿರುದ್ಧ ಶೆಟ್ಟಿ, ಅಭಿಷೇಕ್ ಮತ್ತು ರ‍್ಯಾಪರ್ ಗುಬ್ಬಿ ಹಾಡಿದ್ದು, ಸುಬಾಶಿನಿ ಶ್ರೀನಿವಾಸ್ ಈ ಹಾಡಿನ ನಿರ್ಮಾಪಕರಾಗಿದ್ದಾರೆ. ಆರ್​ಸಿಬಿ ತಂಡದ ಸೂಪರ್ ಫ್ಯಾನ್ ಸುಕುಮಾರ್ ಕೂಡ ಈ ವೀಡಿಯೋ ಸಾಂಗ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆರ್​ಸಿಬಿಯ ನೂತನ ಸ್ಫೂರ್ತಿ ಗೀತೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: IPL 2022: ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಿಸಲು ಅನುಮತಿ – ಷರತ್ತುಗಳು ಅನ್ವಯ

Share This Article
Leave a Comment

Leave a Reply

Your email address will not be published. Required fields are marked *