ಕೊನೆಗೂ ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

Public TV
1 Min Read

ಬೆಂಗಳೂರು: ಪ್ರತಿ ಬಾರಿಯೂ ಈ ಸಲ ಕಪ್‌ ನಮ್ದೆ (ESCN) ಎನ್ನುತ್ತಿದ್ದ ಆರ್‌ಸಿಬಿ (RCB) ಅಭಿಮಾನಿಗಳ ಕನಸು ಈಡೇರಿದ್ದು, ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL) ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ.

ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ರಾತ್ರಿಯಿಡಿ #RCB  ಟ್ರೆಂಡ್‌ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರಿನ(Bengaluru) ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲೂ ಅಭಿಮಾನಿಗಳ ಆರ್‌ಸಿಬಿ ಆರ್‌ಸಿಬಿ ಎಂದು ಹೇಳಿ ಘೋಷಣೆ ಮೊಳಗಿಸುತ್ತಿದ್ದರು.

ಈ ಸಂಭ್ರಮಕ್ಕೆ ಕಾರಣವೂ ಇತ್ತು. ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ರಂತಹ ಘಟಾನುಘಟಿ ಆಟಗಾರರಿದ್ದರೂ ಇಲ್ಲಿಯವರೆಗೆ ಕಪ್‌ ಗೆದ್ದಿರಲಿಲ್ಲ.  ಇದನ್ನೂ ಓದಿ: WPL Champions: ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – ಆರ್‌ಸಿಬಿ ಚೊಚ್ಚಲ ಚಾಂಪಿಯನ್‌!

ಕಳೆದ 16 ಐಪಿಎಲ್‌ (IPL) ಟೂರ್ನಿ ಪೈಕಿ ಪುರುಷರ ತಂಡ 2009, 2011, 2016 ಫೈನಲ್‌ ಪ್ರವೇಶಿಸಿದ್ದರೂ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು. ಆದರೆ ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಆರ್‌ಸಿಬಿ ಅಭಿಮಾನಿಗಳ ಬಹು ವರ್ಷದ ಕನಸು ಈಡೇರಿತು.

ಫೈನಲ್‌ ಪಂದ್ಯದ ವೇಳೆ ಮಾತನಾಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil) ಪ್ರತಿಬಾರಿಯೂ ನಮ್ಮ ತಂಡವನ್ನು ಅಭಿಮಾನಿಗಳು ಈ ಸಲ ಕಪ್‌ ನಮ್ದೆ ಎಂದು ಹೇಳಿ ಹುರಿದುಂಬಿಸುತ್ತಿದ್ದರು. ಈ ಬಾರಿ ನಾವು ಕಪ್‌ ಗೆದ್ದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ:  ಧೋನಿ ಟ್ರೆಂಡ್‌ ಮುಂದುವರಿಸಿದ ಸ್ಮೃತಿ – ಮಂಧಾನ ನಾಯಕತ್ವಕ್ಕೆ ಭೇಷ್‌ ಅಂದ್ರು ಫ್ಯಾನ್ಸ್‌!

ನಾಯಕಿ ಸ್ಮೃತಿ ಮಂಧನಾ(Smriti Mandhana), ಪ್ರತಿಬಾರಿ ಅಭಿಮಾನಿಗಳು “ಈ ಸಲ ಕಪ್‌ ನಮ್ದೇ” ಎಂದು ಹೇಳುತ್ತಿದ್ದರು. ಆದರೆ ಈ ಬಾರಿ “ಈ ಸಲ ಕಪ್‌ ನಮ್ದು” ಎಂದು ಹೇಳಬಹುದು ಎಂದು ಸಂತಸ ವ್ಯಕ್ತಪಡಿಸಿದರು.

Share This Article