ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನೋದು ಎಷ್ಟು ಮುಖ್ಯವೋ ಅದೇ ರೀತಿ ಇಂಟರ್ನೆಟ್ ಎನ್ನುವುದು ಕೂಡ ತುಂಬಾ ಮುಖ್ಯ. ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್ ಇಲ್ಲದೇ ಎಲ್ಲವೂ ಅಸಾಧ್ಯ ಎನ್ನುವಂತಾಗಿದೆ. ಆನ್ಲೈನ್ ಆರ್ಡರ್ ಮಾಡುವುದು, ಹಣ ವರ್ಗಾವಣೆ, ಊಟ, ಕೆಲವು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಇನ್ನಿತರವುಗಳನ್ನು ನಾವು ಇಂಟರ್ನೆಟ್ ಮೂಲಕ ಮಾಡುತ್ತೇವೆ. ಅದರಲ್ಲಿ ಮುಖ್ಯವಾಗಿ ಹಣ ವರ್ಗಾವಣೆ. ಆದರೆ ಇದೀಗ ಆರ್‌ಬಿಐ ಇಂಟರ್ನೆಟ್ ಇಲ್ಲದೆ ಹಣ ವರ್ಗಾವಣೆ ಮಾಡುವ ಡಿಜಿ ರುಪಿ ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಏನಿದು? ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂಟರ್ನೆಟ್ ಇಲ್ಲದೆ ಡಿಜಿ ರೂಪಾಯಿ ಹಣ ವರ್ಗಾವಣೆ ಮಾಡಲು ಸಹಾಯ ಮಾಡುತ್ತದೆ. ಇಂಟರ್ನೆಟ್ ಅಥವಾ ದೂರವಾಣಿ ಸಂಪರ್ಕ ಇಲ್ಲದ ಪ್ರದೇಶದಲ್ಲಿ ಈ ಡಿಜಿ ರೂಪಾಯಿ ಹಣ ವರ್ಗಾವಣೆ ಮಾಡಲು ಸಹಾಯಮಾಡುತ್ತದೆ. ಇಂತಹ ಒಂದು ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಿಸಿದೆ. ಇದು ದೇಶದ ಡಿಜಿಟಲ್ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲಾಗಿದೆ.
ಇತ್ತೀಚಿಗೆ ಮುಂಬೈನಲ್ಲಿ ನಡೆದ ಫಿನ್ಟೆಕ್ ಫೆಸ್ಟ್ 2025 ರಲ್ಲಿ ಈ ಡಿಜಿ ರುಪಾಯಿ ವ್ಯವಸ್ಥೆಯನ್ನು ಘೋಷಿಸಲಾಯಿತು. ಮೂಲಕ ಭಾರತ ಹಾಗೂ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.
ಏನಿದು ಡಿಜಿ ರೂಪಾಯಿ?
ಡಿಜಿ ರೂಪಾಯಿ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕಿನ ಕರೆನ್ಸಿ ಆಗಿದೆ. ಭೌತಿಕ ಹಣದ ಡಿಜಿಟಲ್ ರೂಪ ಇದಾಗಿದೆ. ಈ ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಬಿಡುಗಡೆ ಮಾಡಿದ್ದು, ಭೌತಿಕ ಹಣಕ್ಕೆ ಇರುವ ಮೌಲ್ಯ ಈ ಡಿಜಿಟಲ್ ರೂಪಾಯಿಗೆ ಇರಲಿದೆ. ಈ ಹಣ ಬ್ಯಾಂಕುಗಳ ವ್ಯಾಲೆಟ್ ನಲ್ಲಿ ಇರಲಿದೆ. ಯುಪಿಐ ವ್ಯವಸ್ಥೆಯಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆಯಾಗುತ್ತದೆ. ಆದರೆ ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾವಣೆ ಮಾಡುವಾಗ ಬ್ಯಾಂಕ್ ಖಾತೆಯ ಅಗತ್ಯವಿರುವುದಿಲ್ಲ. ಇದು ಯುಪಿಐ ಕಾರ್ಯನಿರ್ವಹಿಸುವ ವಿಧಾನಕ್ಕಿಂತ ವಿಭಿನ್ನವಾಗಿ ಕೆಲಸ ನಿರ್ವಹಿಸುತ್ತದೆ. ಡಿಜಿಟಲ್ ರೂಪಾಯಿ ಇರುವ ವ್ಯಾಲೆಟ್ ಗಳು ಯುಪಿಐ ಶುಗರ್ ಗಳನ್ನ ಸ್ಕ್ಯಾನ್ ಮಾಡಿ ಕೆಲಸ ನಿರ್ವಹಿಸುತ್ತದೆ.
ಡಿಜಿಟಲ್ ರೂಪಾಯಿ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಡಿಜಿಟಲ್ ರೂಪಾಯಿಯು ಟೆಲಿಕಾಂ ನೆರವಿನ ಆಫ್ಲೈನ್ ಪೇಮೆಂಟ್ ಮತ್ತು NFC (Near Field communication) ಆಧಾರಿತ ಪೇಮೆಂಟ್ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸುತ್ತದೆ. ಟೆಲಿಕಾಂ ನೆರವಿನ ಪೇಮೆಂಟ್ ವ್ಯವಸ್ಥೆಗೆ ಕನಿಷ್ಠ ನೆಟ್ವರ್ಕ್ ಸಿಗ್ನಲ್ ಇದ್ದರೆ ಕಾರ್ಯನಿರ್ವಹಿಸುತ್ತದೆ. ಎನ್ ಎಫ್ ಸಿ ವ್ಯವಸ್ಥೆಯು ಇಂಟರ್ನೆಟ್ ಹಾಗೂ ಟೆಲಿಕಾಂ ಸಿಗ್ನಲ್ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ.
ಇದನ್ನ ಬಳಸೋದು ಹೇಗೆ?
ಹಣ ವರ್ಗಾಯಿಸುವವರು ತಮ್ಮ ಮೊಬೈಲನ್ನು ಟ್ಯಾಪ್ ಮಾಡುವ ಮೂಲಕ ಹಣ ವರ್ಗಾವಣೆಯಾಗುತ್ತದೆ. ಈ ಮೂಲಕ ಹಣ ಯುಪಿಐ ರೀತಿ ವ್ಯಕ್ತಿಯಿಂದ ವ್ಯಾಪಾರಗಳಿಗೆ ಹಣ ವರ್ಗಾವಣೆ ಆಗುತ್ತದೆ.
ಸದ್ಯ ಡಿಜಿಟಲ್ ರೂಪಾಯಿ ವ್ಯಾಲೆಟ್ ನೀಡುತ್ತಿರುವ ಬ್ಯಾಂಕುಗಳು:
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಐಸಿಐಸಿಐ ಬ್ಯಾಂಕ್
- ಐಡಿಎಫ್‍ಸಿ ಫಸ್ಟ್ ಬ್ಯಾಂಕ್
- ಯೆಸ್ ಬ್ಯಾಂಕ್
- ಎಚ್ ಡಿ ಎಫ್ ಸಿ ಬ್ಯಾಂಕ್
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
- ಬ್ಯಾಂಕ್ ಆಫ್ ಬರೋಡಾ
- ಕೋಟಕ್ ಮಹೀಂದ್ರಾ ಬ್ಯಾಂಕ್
- ಕೆನರಾ ಬ್ಯಾಂಕ್
- ಆಕ್ಸಿಸ್ ಬ್ಯಾಂಕ್
- ಇಂಡಸ್ ಇಂಡ್ ಬ್ಯಾಂಕ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಫೆಡರಲ್ ಬ್ಯಾಂಕ್
- ಕರ್ನಾಟಕ ಬ್ಯಾಂಕ್
- ಇಂಡಿಯನ್ ಬ್ಯಾಂಕ್
ಡಿಜಿಟಲ್ ರೂಪಾಯಿ ವ್ಯಾಲೆಟ್ ನೀಡುತ್ತಿರುವ ಬ್ಯಾಂಕುಗಳ ಹೆಸರುಗಳೊಂದಿಗೆ ಆಪ್ ಗಳು ಲಭ್ಯವಿದ್ದು, ಬಳಕೆದಾರರು ಈ ಅಪ್ಲಿಕೇಶನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಬಳಿಕ ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾಯಿಸುವವರು ಆಪ್ ಮೂಲಕ ವ್ಯಾಲೆಟ್ ಗಳನ್ನು ಬಳಸಬಹುದು. ಕನಿಷ್ಠ ಬ್ಯಾಲೆನ್ಸ್, ಬ್ಯಾಲೆನ್ಸ್ಗಳ ಮೇಲೆ ಪಾವತಿಸಬೇಕಾದ ಬಡ್ಡಿ ಹಾಗೂ ಮೊಬೈಲ್ ಕಳೆದುಹೋದರೂ ಕೂಡ ಈ ಬ್ಯಾಲೆಟ್ ಗಳನ್ನು ಮರಳಿ ಪಡೆಯಬಹುದು.
ಪ್ರಯೋಜನಗಳೇನು?
ಈ ಡಿಜಿಟಲ್ ರುಪಾಯಿ ಮೂಲಕ ನೆಟ್ವರ್ಕ್ ಸಮಸ್ಯೆಗಳಿಂದ ಆಗುವ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಕಡಿಮೆ ನೆಟ್ವರ್ಕ್ ಇರುವ ಸಮಸ್ಯೆಗಳಲ್ಲಿ ಹಣ ವರ್ಗಾವಣೆಗೆ ಇದು ಸಹಾಯ ಮಾಡುತ್ತದೆ. ಸಂಪರ್ಕವಿಲ್ಲದಿದ್ದರೂ ಕೂಡ ಹಣ ವರ್ಗಾವಣೆ ಮಾಡಬಹುದು. ಇದು ದಿನನಿತ್ಯದ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ವೈಯಕ್ತಿಕ ಹಣ ವರ್ಗಾವಣೆಯಿಂದ ಹಿಡಿದು ವ್ಯಾಪಾರ ವಹಿವಾಟುಗಳಿಗೂ ಇದನ್ನು ಬಳಸಬಹುದು.