ಮುಂಬೈ: ಈ ತಿಂಗಳ (ಅಕ್ಟೋಬರ್) 10ರ ವೇಳೆಗೆ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು 19,153 ಕೋಟಿ ರೂ. ಕಡಿಮೆ ಆಗಿದೆ. ಇದೇ ಅವಧಿಯಲ್ಲಿ ಆರ್‌ಬಿಐ (RBI) ಚಿನ್ನದ ಮೀಸಲು ಸಂಗ್ರಹದ ಪ್ರಮಾಣ 9 ಲಕ್ಷ ಕೋಟಿ ರೂ. ದಾಟಿದೆ ಎಂದು ಆರ್‌ಬಿಐ ತಿಳಿಸಿದೆ.
ಈ ಮೂಲಕ ಒಟ್ಟು ಚಿನ್ನದ ಮೀಸಲು ಸಂಗ್ರಹ (RBI Gold Reserves) 61.41 ಲಕ್ಷ ಕೋಟಿ ರೂ. ಅಷ್ಟಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ. ಇದನ್ನೂ ಓದಿ: RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ
ಆರ್‌ಬಿಐ ಬಳಿ ಇರುವ ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ 49,333 ಕೋಟಿ ಕಡಿಮೆಯಾಗಿದ್ದು, 50.35 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹ 31,642 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ 7,581 ಕೋಟಿ ಮೌಲ್ಯದ ನೋಟುಗಳು ಜನರ ಬಳಿಯಿದೆ: RBI