ಆನ್‍ಲೈನ್ ಪಾವತಿ – ಮಹತ್ವದ ಬದಲಾವಣೆಗೆ ಮುಂದಾದ ಆರ್‌ಬಿಐ

Public TV
1 Min Read

ಮುಂಬೈ: ಆನ್‍ಲೈನ್ ಪಾವತಿಯಲ್ಲಾಗುತ್ತಿರುವ ಕೆಲ ವಂಚನೆ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿಶೇಷ ಗಮನಹರಿಸಿದೆ. ಮುಂದಿನ ದಿನಗಳಲ್ಲಿ ಆನ್‍ಲೈನ್ ಕಾರ್ಡ್ ತಯಾರಕರು ಮತ್ತು ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‍ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದು. ಹೊರತು ಪೇಮೆಂಟ್ ಆ್ಯಪ್, ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ಕಾರ್ಡ್ ಮಾಹಿತಿಯನ್ನು ಸಂಗ್ರಹ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.

ಕೆಲ ಪೇಮೆಂಟ್ ಆ್ಯಪ್, ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ತಮ್ಮ ಗ್ರಾಹಕರ ಕಾರ್ಡ್ ಮಾಹಿತಿಯನ್ನು ಸಂಗ್ರಹ ಮಾಡಿಕೊಂಡಿರುತ್ತದೆ. ಮುಂದಿನ ಬಾರಿ ಅವರು ವ್ಯವಹರಿಸುವಾಗ ಅವರು ಕಾರ್ಡ್ ಸಂಖ್ಯೆ ತಿಳಿಸಬೇಕೆಂದಿಲ್ಲ, ಬದಲಾಗಿ ಅವರ ಒಟಿಪಿ ಮತ್ತು ಪಾಸ್‍ವರ್ಡ್ ನೀಡಿದರೆ ಸುಲಭವಾಗಿ ವ್ಯವಹರಿಸಬಹುದಿತ್ತು. ಈ ನಿಯಮಕ್ಕೆ ಮುಂದಿನ ವರ್ಷ ಜನವರಿ 1ರ ಬಳಿಕ ಆರ್‌ಬಿಐ ಬ್ರೇಕ್ ಹಾಕಲಿದೆ. ಇದನ್ನೂ ಓದಿ: ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ


ಆನ್‍ಲೈನ್ ಕಾರ್ಡ್ ತಯಾರಕರು ಮತ್ತು ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‍ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದು. ಉಳಿದಂತೆ ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ತಮ್ಮ ಸರ್ವರ್‍ನಲ್ಲಿ ಸಂಗ್ರಹಮಾಡಿಟ್ಟುಕೊಂಡರೆ ಗ್ರಾಹಕರ ಡೇಟಾ ಸೋರಿಕೆಯಾಗಿ ವಂಚನೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆರ್‌ಬಿಐ ಈ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಇದನ್ನೂ ಓದಿ: 6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

Share This Article
Leave a Comment

Leave a Reply

Your email address will not be published. Required fields are marked *