ವಿವಾದವನ್ನು ರಾಜಕೀಯ ಬಳಸಿಕೊಂಡ್ರೆ ದೇಶದ್ರೋಹದ ಕೆಲಸ: ರವೀಂದ್ರ ಶ್ರೀಕಂಠಯ್ಯ

Public TV
1 Min Read

ಮಂಡ್ಯ: ಹಿಜಬ್ ಹಾಗೂ ಕೇಸರಿ ಶಾಲು ವಿವಾದವನ್ನು ರಾಜಕೀಯವಾಗಿ ಬಳಸಿಕೊಂಡರೆ ಅದು ದೇಶದ್ರೋಹದ ಕೆಲಸವಾಗುತ್ತದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಮವಸ್ತ್ರವನ್ನು ಕಡ್ಡಾಯಗೊಳಿಸಿದೆ. ಎಲ್ಲರೂ ಅದನ್ನು ಧರಿಸಿ ಬರಬೇಕು ಜೊತೆಗೆ ಎಲ್ಲಾ ಧರ್ಮದವರು ಅದನ್ನು ಪಾಲಿಸಿಬೇಕಾಗುತ್ತದೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಯಾರದರೂ ಹಾಳು ಮಾಡಲು ಪ್ರಯತ್ನಪಟ್ಟರೆ ಅದು ದೇಶದ್ರೋಹಕ್ಕೆ ಸಮವಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಜಬ್-ಕೇಸರಿ ವಿವಾದದ ಪ್ರಚೋದನಕಾರಿ ವೀಡಿಯೋ ಹರಿಬಿಟ್ಟ ಕಿಡಿಗೇಡಿಗಳು: ಪ್ರಕರಣ ದಾಖಲು

ಹಿಜಬ್ ಹಾಗೂ ಕೇಸರಿ ಶಾಲು ವಿವಾದವನ್ನು ಯಾವುದೇ ಧರ್ಮದವರು, ಯಾವುದೇ ರಾಜಕೀಯ ಪಕ್ಷದವರು ಬಳಸಿಕೊಂಡರೆ ದೇಶದ್ರೋಹವಾಗುತ್ತದೆ. ಅತಿ ಹೆಚ್ಚು ಜನಸಂಖ್ಯೆ ಇರುವಂತಹ ದೇಶ ಮುಂದೆ ಬರುತ್ತಿದೆ ಎನ್ನುವುದಾದರೆ ಅದು ಮಕ್ಕಳ ಶಿಕ್ಷಣದಿಂದ ಮಾತ್ರವಾಗಿದೆ. ದೇಶಕ್ಕೆ ಮಾರಕವಾಗದಂತೆ ಸರ್ಕಾರದ ನಿಯಮ ಪಾಲಿಸಿ ಎಂದು ಸಲಹೆ ನೀಡಿದರು. ಇದನ್ನೂ ಓದಿ:  ಮಕ್ಕಳ ಭವಿಷ್ಯಕ್ಕೆ ನಾವೇ ಕೊಳ್ಳಿ ಇಟ್ಟರೆ ಹೇಗೆ: ಸಭಾಪತಿ ಹೊರಟ್ಟಿ

Share This Article
Leave a Comment

Leave a Reply

Your email address will not be published. Required fields are marked *