ಓಡಿ ಬಂದು ಒಂದೇ ಕೈಯಲ್ಲಿ ಬಾಲ್ ಹಿಡಿದು ಡೈರೆಕ್ಟ್ ಥ್ರೋ – ಜಡೇಜಾ ಫೀಲ್ಡಿಂಗ್ ಸೂಪರ್

Public TV
1 Min Read

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮವಾಗಿ ಫೀಲ್ಡಿಂಗ್ ಮಾಡಿ ಉಸ್ಮಾನ್ ಖವಾಜ ಅವರನ್ನು ರನೌಟ್ ಮಾಡಿದ್ದಾರೆ.

19ನೇ ಓವರ್ 21 ರನ್ ಗಳಿಸಿದ್ದ ಕುಲ್ ದೀಪ್ ಯಾದವ್ ಎಸೆದ 3ನೇ ಎಸೆತವನ್ನು ಖವಜಾ ಬಲಗಡೆ ಹೊಡೆದು ರನ್ ಕದಿಯಲು ಯತ್ನಿಸಿದ್ದರು. ಈ ವೇಳೆ ಕವರ್ ಪಾಯಿಂಟ್ ನಲ್ಲಿದ್ದ ಜಡೇಜಾ ಒಂದೇ ಕೈಯಲ್ಲಿ ಬಾಲನ್ನು ತಡೆದು ನೇರವಾಗಿ ವಿಕೆಟ್ ಗೆ ಗುರಿಯಿಟ್ಟು ಹೊಡೆದರು.

ಜಡೇಜಾ ಎಸೆದ ಬಾಲ್ ವಿಕೆಟ್ ತಾಗುತ್ತಿದ್ದಂತೆ ಆಟಗಾರರು ಸಂಭ್ರಮಿಸಲು ತೊಡಗಿದರು. ಈ ವೇಳೆ ಅಂಪೈರ್ ಮೂರನೇ ಅಂಪೈರ್ ಗೆ ತೀರ್ಪನ್ನು ವರ್ಗಾಯಿಸಿದರು. ಟಿವಿ ರಿಪ್ಲೈಯಲ್ಲಿ ಸ್ಟಂಪ್ ಹಾರಿದ ಬಳಿಕ ಬ್ಯಾಟ್ ಅನ್ನು ಕ್ರೀಸ್ ಗೆ ಇಡುವುದು ಸ್ಪಷ್ಟವಾಗುತ್ತಿದ್ದಂತೆ ಖವಜಾ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಮೊದಲು ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾ ಶೇನ್ ಮಾರ್ಶ್ ಅವರ ಶತಕದಿಂದಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ. ಮಾರ್ಶ್ 131 ರನ್(123 ಎಸೆತ, 11 ಬೌಂಡರಿ, 3 ಸಿಕ್ಸರ್) ಹೊಡೆದರೆ ಮ್ಯಾಕ್ಸ್ ವೆಲ್ 48 ರನ್(37 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದರು.

ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 3, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *