ರವಿತೇಜ ನಟನೆಯ `ಟೈಗರ್ ನಾಗೇಶ್ವರ್ ರಾವ್’ ರಿಲೀಸ್ ಡೇಟ್ ಫಿಕ್ಸ್

Public TV
1 Min Read

ʻಧಮಾಕʼ (Dhamaka) ಚಿತ್ರದ ಸಕ್ಸಸ್ ಬಳಿಕ ತೆಲುಗು (Telagu) ಚಿತ್ರರಂಗದ ಮಾಸ್ ಮಹಾರಾಜ ರವಿತೇಜ (Raviteja)  ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ `ಟೈಗರ್ ನಾಗೇಶ್ವರ್ ರಾವ್’ ಬಿಡುಗಡೆ ದಿನಾಂಕ ನಿಗದಿಯಾಗಿದೆ. ದಸರಾ ಹಬ್ಬಕ್ಕೆ Tiger Nageswara Rao ಬಾಕ್ಸಾಫೀಸ್ ಬೇಟೆಗಿಳಿದಿದ್ದಾನೆ. ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ದಸರಾ ಹಬ್ಬದ ವೇಳೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

 

View this post on Instagram

 

A post shared by RAVI TEJA (@raviteja_2628)

ವಂಶಿ ನಿರ್ದೇಶನದಲ್ಲಿ ತಯಾರಾಗಿರುವ `ಟೈಗರ್ ನಾಗೇಶ್ವರ್ ರಾವ್’ ಸಿನಿಮಾವನ್ನು ಕಾಶ್ಮೀರಿ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನಿರ್ಮಿಸಿರುವ ಅಭಿಷೇಕ್ ಅರ್ಗವಾಲ್ ಅವರು `ಅರ್ಗವಾಲ್ ಆರ್ಟ್ಸ್’ ನಡಿ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಸಿನಿಮಾ ಮೂಡಿಬಂದಿದ್ದು, ಅದಕ್ಕಾಗಿ ಐದು ಎಕರೆ ಜಾಗದಲ್ಲಿ ಹಳ್ಳಿಯೊಂದನ್ನು ರೀ ಕ್ರಿಯೇಟ್ ಮಾಡಿ ಕೋಟ್ಯಂತರ ರೂಪಾಯಿ ಬಜೆಟ್ ನಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ.

 

View this post on Instagram

 

A post shared by RAVI TEJA (@raviteja_2628)

70ರ ಕಾಲಘಟ್ಟದ ಹೈದ್ರಾಬಾದ್‌ ಸ್ಟುವರ್ಟ್‌ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ರವಿತೇಜ ಗೆಟಪ್, ಬಾಡಿ ಲಾಂಗ್ವೇಜ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್. ಮಧಿ- ಛಾಯಾಗ್ರಹಣ, ಶ್ರೀಕಾಂತ್ ವೀಸಾ- ಸಂಭಾಷಣೆ, ವಿ ಪ್ರಕಾಶ್ ಕುಮಾರ್- ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

Share This Article