ಟೀಂ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಸಿ: ಚೇತನ್ ಚೌಹಾಣ್

Public TV
2 Min Read

ಮುಂಬೈ: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದರೂ ರವಿಶಾಸ್ತ್ರಿ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಅಭಿಯಾನ ಇಂದು ಮತ್ತೆ ಜೀವ ಪಡೆದಿದೆ. ಒಂದು ಹಂತದಲ್ಲಿ ಇಂದು #ಸ್ಯಾಕ್_ರವಿಶಾಸ್ತ್ರಿ ಹ್ಯಾಷ್‍ಟ್ಯಾಗ್ ಟ್ರೆಂಡ್ ಆಗಿತ್ತು. ಈ ನಡುವೆಯೇ ಟೀಂ ಇಂಡಿಯಾದ ಮಾಜಿ ಆಟಗಾರ ಚೇತನ್ ಚೌಹಾಣ್ ರವಿಶಾಸ್ತ್ರಿ ಕೋಚಿಂಗ್ ಕೆಲಸ ಸಾಕು, ಅವರಿಗೆ ಕಮೆಂಟ್ರಿಯೇ ಬೆಟರ್ ಎಂಬ ಸಲಹೆ ನೀಡಿದ್ದಾರೆ.

ಈಗಷ್ಟೇ ಅಂತ್ಯವಾದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-4 ಅಂತರದಲ್ಲಿ ಸೋಲುಂಡ ಬಳಿಕ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಯನ್ನು ಸೋಲಿನ ಹೊಣೆ ಮಾಡಿ ಕೋಚ್ ಸ್ಥಾನದಿಂದ ಕೆಳಗಿಳಿಸುವಂತೆ ಹಲವರು ಆಗ್ರಹಿಸಿದ್ದರು. ಸದ್ಯ ಟೀಂ ಇಂಡಿಯಾ ಮಾಜಿ ಆಟಗಾರ ಚೇತನ್ ಚೌಹಾಣ್ ಕೂಡ ತಂಡದ ಸೋಲಿಗೆ ರವಿಶಾಸ್ತ್ರಿ ಕಾರಣವಾಗಿದ್ದು, ಮುಂದಿನ ಆಸ್ಟ್ರೇಲಿಯಾ ವಿರುದ್ಧ ಸರಣಿಗೂ ಮುನ್ನ ರವಿಶಾಸ್ತ್ರಿಯನ್ನು ತಂಡದಿಂದ ಕೈಬಿಡುವಂತೆ ಹೇಳಿದ್ದಾರೆ.

https://twitter.com/Bhuklagiheyaar/status/1042774411013705728

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಬಳಿಕ ಚೌಹಾಣ್ ಅವರು ರವಿಶಾಸ್ತ್ರಿ ಕೋಚ್ ಹುದ್ದೆ ತ್ಯಜಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಚೌಹಾಣ್, ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಟೀಂ ಇಂಡಿಯಾ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಆಗ ಎರಡು ತಂಡಗಳು ಸಮರ್ಥವಾಗಿ ಪೈಪೋಟಿ ನಡೆಸಲಿವೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ತನ್ನ ವೈಫಲ್ಯಗಳನ್ನು ಅರಿತುಕೊಳ್ಳಲು ವಿಫಲವಾಗಿದೆ. ಇದಕ್ಕೆ ನೇರ ಕಾರಣ ಕೋಚ್ ರವಿಶಾಸ್ತ್ರಿ. ಅದ್ದರಿಂದ ಮುಂದಿನ ಟೂರ್ನಿ ಆರಂಭಕ್ಕೂ ಮೊದಲು ಅವರನ್ನು ಕೋಚ್ ಹುದ್ದೆಯಿಂದ ತೆಗೆಯುವುದು ಸೂಕ್ತ ಎಂದು ತಿಳಿಸಿದ್ದಾರೆ.

ಇದೇ ವೇಳೆ ರವಿಶಾಸ್ತ್ರಿ ಉತ್ತಮ ವೀಕ್ಷಕ ವಿವರಣೆ ನೀಡಬಲ್ಲರು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಚೌಹಾಣ್, ರವಿಶಾಸ್ತ್ರಿ ಅವರಿಗೆ ಆ ಹುದ್ದೆ ನೀಡಿದರೆ ಉತ್ತಮ ಎಂದು ತಿಳಿಸಿದ್ದಾರೆ. ಅಲ್ಲದೇ 1980ರ ದಶಕ ಬಳಿಕ ಸದ್ಯದ ಟೀಂ ಇಂಡಿಯಾ ಅತ್ಯುತ್ತಮ ತಂಡ ಎಂಬ ರವಿಶಾಸ್ತ್ರಿ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ಚೇತನ್ ಚೌಹಾಣ್ ಹಿನ್ನೆಲೆ: 1969ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಚೇತನ್ ಚೌಹಾಣ್ ಪಾದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾದಲ್ಲಿ 1969 ರಿಂದ 1981 ಅವಧಿಯಲ್ಲಿ ಸ್ಥಾನ ಪಡೆದಿದ್ದರು. ಒಟ್ಟಾರೆ ಚೌಹಾಣ್ 40 ಟೆಸ್ಟ್ ಪಂದ್ಯ ಆಡಿ 2,084 ರನ್ ಗಳಿಸಿದ್ದಾರೆ. 1981 ರಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಅಂತಿಮ ಟೆಸ್ಟ್ ಪಂದ್ಯವನ್ನಾಡಿದ್ದರು. ಉಳಿದಂತೆ 7 ಅಂತರಾಷ್ಟ್ರೀಯ ಏಕದಿನ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮುಖ್ಯವಾಗಿ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದರು.

ಇದೇ ವೇಳೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲೂ ಸ್ಯಾಕ್ ರವಿಶಾಸ್ತ್ರಿ ಹ್ಯಾಷ್‍ಟ್ಯಾಗ್ ಅಭಿಯಾನ ಆರಂಭವಾಗಿದೆ. ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಟ್ವೀಟಿಗರು ಒತ್ತಾಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://twitter.com/imkrishnendu92/status/1042791215945547776

https://twitter.com/SijuMoothedath/status/1042787776909860864

Share This Article
Leave a Comment

Leave a Reply

Your email address will not be published. Required fields are marked *