ರವಿ ಬಸ್ರೂರು ಅವರ ಕಟಕ-2ಗೆ ಸದ್ದಿಲ್ಲದೇ ತಯಾರಿ

Public TV
1 Min Read

ವಿ ಬಸ್ರೂರು (Ravi Basrur) ನಿರ್ದೇಶನದ ಕಟಕ (Kataka 2) ಸಿನಿಮಾ ವಿಭಿನ್ನ ಕಥೆ ಹಾಗೂ ವಿಭಿನ್ನ ಜಾನರ್‌ನಿಂದ ಗಮನ ಸೆಳೆದಿತ್ತು. ಅಶೋಕ್ ರಾಜ್, ಸ್ಪಂದನ ಪ್ರಸಾದ್ ಹಾಗೂ ಶಾಲಗಾ ಸಾಲಿಗ್ರಾಮ ಈ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದರು. ರವಿ ಬಸ್ರೂರು ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಸಂಗೀತ ನಿರ್ದೇಶನವನ್ನ ಕೂಡಾ ನಿಭಾಯಿಸಿದ್ದರು.

ಅಂದಹಾಗೆ ಕಟಕ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಸಿಂಪಲ್ ಆಗಿ ಒಂದು ಹಳ್ಳಿಯಲ್ಲಿ ನಡೆಯುವ ಕಥೆಯಲ್ಲಿ ಹಾರರ್ ಹಾಗೂ ಸಸ್ಪೆನ್ಸ್ ಅಂಶಗಳೇ ಹೈಲೈಟ್ ಆಗಿದ್ದವು. ಇದೀಗ ಕಟಕ ಚಿತ್ರದ ಭಾಗ-2 ಬರುವ ಬಗ್ಗೆ ಸುಳಿವು ನೀಡಿದೆ ಚಿತ್ರತಂಡ. ಈ ಸಿನಿಮಾ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದೆ ಕಟಕ-2 ಚಿತ್ರತಂಡ. ಇದನ್ನೂ ಓದಿ: ತಮಿಳಿನ ಜನಪ್ರಿಯ ಹಾಸ್ಯನಟ ಮಧನ್ ಬಾಬ್ ನಿಧನ

ಕಟಕ ಸಿನಿಮಾದ ಮೊದಲ ಭಾಗಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದರು ಎನ್‌ಎಸ್ ರಾಜ್‌ಕುಮಾರ್. ಕಟಕ-2 ಸಿನಿಮಾದ ಇಂಗ್ಲಿಷ್ ವರ್ಷನ್ ಟೈಟಲ್ ಟ್ರಾö್ಯಕ್ ಬಿಡುಗಡೆಯಾಗಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂತೋಷ್ ವೆಂಕಿ, ಐರಾ ಉಡುಪಿ ಹಾಗೂ ರೋಹಿತ್ ಸಿದ್ದಪ್ಪ ಈ ಟ್ರ್ಯಾಕ್‌ಗೆ ಧ್ವನಿಯಾಗಿದ್ದಾರೆ. ಈ ಟೈಟಲ್ ಟ್ರ್ಯಾಕ್ ಮೂಲಕ ಕಟಕ-2 ಚಿತ್ರದ ಬಗ್ಗೆ ಹಿಂಟ್ ಕೊಟ್ಟಿದೆ ಚಿತ್ರತಂಡ. ವೀರ ಚಂದ್ರಹಾಸ ಸಿನಿಮಾದ ನಂತರ ಇದೀಗ ತೆರೆಮರೆಯಲ್ಲಿ ಕಟಕ-2 ಭರ್ಜರಿ ಸಿದ್ಧತೆಗಳು ನಡೆದಿವೆ.

Share This Article