ಧಿಡೀರ್ ಅಂತಾ ಮಾಡಿ ರವಾ ಉತ್ತಪ್ಪ

Public TV
2 Min Read

ವಾ ಉತ್ತಪ್ಪ ಎಂಬುದು ಭಾರತೀಯ ಖಾದ್ಯಗಳಲ್ಲಿ ಒಂದಾಗಿದ್ದು, ಅಕ್ಕಿ ಮತ್ತು ಮೊಸರಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಪ್ರೋಟಿನ್‌ನ ಅಂಶಗಳಿದ್ದು, ಇದನ್ನು ಸೇವಿಸುವುದರಿಂದ ನಮ್ಮ ಶಕ್ತಿಯು ಹೆಚ್ಚುತ್ತದೆ. ಇದನ್ನು ಬಹು ಸುಲಭವಾಗಿ ತಯಾರಿಸಬಹುದಾಗಿದೆ. ಇದರಲ್ಲಿ ತರಕಾರಿಗಳನ್ನು ಹಾಕುವುದರಿಂದ ಹೆಚ್ಚಿನ ರುಚಿಯನ್ನು ಒದಗಿಸುವುದಲ್ಲದೇ ಮಕ್ಕಳು ಕೂಡಾ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿಯಾಗಿ ಮಾಡಬಹುದು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಇದನ್ನೂ ಓದಿ: ಡಿಫರೆಂಟ್ ಸ್ವಾದದ ಹೆಲ್ತಿ ರೆಸಿಪಿ – ಕೊಕೊನಟ್, ಮಿಂಟ್ ರೈಸ್ ಮಾಡಿ

ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ – 1 ಕಪ್
ಮೊಸರು – ಅರ್ಧ ಕಪ್
ನೀರು – ಅಗತ್ಯಕ್ಕೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – 10 ಎಲೆ
ಸೋಡಾ ಪೌಡರ್ – ಒಂದು ಚಿಟಿಕೆ
ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಅಚ್ಚಖಾರದ ಪುಡಿ – ಅರ್ಧ ಚಮಚ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ಗೆ ರವೆ ಹಾಕಿಕೊಂಡು ಅದಕ್ಕೆ ಮೊಸರು, ಸೋಡಾ ಮತ್ತು ಉಪ್ಪನ್ನು ಹಾಕಿಕೊಂಡು ಚನ್ನಾಗಿ ಕಲಸಿಕೊಳ್ಳಿ.
* ಈಗ ಇದಕ್ಕೆ ಅರ್ಧ ಕಪ್ ನೀರನ್ನು ಹಾಕಿಕೊಳ್ಳಬೇಕು. ಬಳಿಕ ಹಿಟ್ಟು ತುಂಬಾ ದಪ್ಪ ಎನಿಸಿದರೆ ಸ್ವಲ್ಪ ಜಾಸ್ತಿ ನೀರನ್ನು ಹಾಕಿಕೊಳ್ಳಿ. ಈ ಹಿಟ್ಟು ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು.
* ಬಳಿಕ ಈ ಮಿಶ್ರಣವನ್ನು ಅರ್ಧ ಗಂಟೆ ಹಾಗೆಯೇ ಬಿಡಿ. ಬೇಗ ಮಾಡಬೇಕು ಎನ್ನುವವರು 10 ನಿಮಿಷಗಳ ಕಾಲ ಬಿಟ್ಟರೆ ಸಾಕು.
* ನಂತರ ಈ ಮಿಶ್ರಣಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಹಸಿಮೆಣಸಿನ ಕಾಯಿ, ಕರಿಬೇವು, ಅಚ್ಚಖಾರದ ಪುಡಿ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಬಳಿಕ ಗ್ಯಾಸ್‌ ಸ್ಟವ್‌ನಲ್ಲಿ ಪ್ಯಾನ್ ಬಿಸಿಗಿಟ್ಟು, ಬಿಸಿಯಾದ ಬಳಿಕ ದೋಸೆಯ ರೀತಿಯಲ್ಲಿ ಹುಯ್ಯಿರಿ. ಇದನ್ನು 3-4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ಮತ್ತೊಮ್ಮೆ ಇದನ್ನು ತಿರುವಿ ಹಾಕಿಕೊಂಡು 2 ನಿಮಿಷಗಳ ಬೇಯಿಸಿಕೊಳ್ಳಿ. ಬೇಯಿಸಿಕೊಳ್ಳಬೇಕಾದರೇ ಎರಡೂ ಬದಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ.
*ಇದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಚಟ್ನಿಯೊಂದಿಗೆ ಸವಿಯಲು ಕೊಡಿ. ಇದನ್ನೂ ಓದಿ: ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್