ವಿಶ್ವದ ಅತಿ ದೊಡ್ಡ LNG ಘಟಕ ದುರಸ್ತಿಗೆ 5 ವರ್ಷ ಬೇಕು!

2 Min Read

– ರಂಜಾನ್‌ ಸಮಯದಲ್ಲಿ ನಮ್ಮ ಮೇಲೆ ದಾಳಿ ನಡೆಯುತ್ತದೆ ಎಂದು ಊಹಿಸಿರಲಿಲ್ಲ
– 10 ರಿಂದ 20 ವರ್ಷಗಳ ಹಿಂದಕ್ಕೆ ಹೋಗಿದ್ದೇವೆ: ಕತಾರ್‌

ದೋಹಾ: ಇರಾನ್‌ (Iran) ಕ್ಷಿಪಣಿ ದಾಳಿಯಿಂದ ಹಾನಿಗೆ ಒಳಗಾಗಿರುವ ಕತಾರ್‌ನ(Qatar) ರಾಸ್ ಲಫಾನ್ ಘಟಕ ದುರಸ್ತಿಯಾಗಲು 3 ರಿಂದ 5 ವರ್ಷ ತಗಲುವ ಸಾಧ್ಯತೆಯಿದೆ.

ಕತಾರ್‌ನ ಉತ್ತರ ದೋಹಾದಿಂದ 80 ಕಿ.ಮೀ. ದೂರದ ರಾಸ್ ಲಫಾನ್ (Rass Laffan) ಕೈಗಾರಿಕಾ ನಗರದಲ್ಲಿದ್ದ ಎಲ್‌ಎನ್‌ಜಿ ಘಟಕದ ಮೇಲೆ ಇರಾನ್ ಮಾರ್ಚ್ 18, 19ರಂದು 2 ದಿನ ಬ್ಯಾಕ್ ಟು ಬ್ಯಾಕ್ ಮಿಸೈಲ್ ಅಟ್ಯಾಕ್ ಮಾಡಿದೆ.

ಇದರಿಂದಾಗಿ ಆ ಪ್ರದೇಶದಲ್ಲಿ ಎಲ್‌ಎನ್‌ಜಿ (LNG) ಉತ್ಪಾದನೆ ಸ್ಥಗಿತವಾಗಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಆಗಿದೆ. ಎಲ್‌ಎನ್‌ಜಿ ರಫ್ತಿನಲ್ಲಿ ಶೇ.17ರಷ್ಟು ಕುಸಿತವಾಗಿದೆ. ಇದು ಕತಾರ್‌ನಿಂದ ಎಲ್‌ಎನ್‌ಜಿ ಆಮದು ಮಾಡಿಕೊಳ್ಳುವ ಭಾರತದಂಥಹ ರಾಷ್ಟ್ರಗಳಿಗೆ ದೊಡ್ಡ ಹೊಡತವೇ ಆಗಿದ್ದು, ಆತಂಕ ಎದುರಾಗಿದೆ.

 

ವಿಶ್ವಕ್ಕೆ ರಾಸ್ ಲಫಾನ್ ಆಘಾತ ಏನು?
ದುರಸ್ತಿಗೆ ಬೇಕಿದೆ ಕನಿಷ್ಠ 3 ರಿಂದ 5 ವರ್ಷ ಆಗತ್ಯವಿದ್ದು ದೀರ್ಘಾವಧಿ ಎಲ್‌ಎನ್‌ಜಿ ಪೂರೈಕೆ, ಒಪ್ಪಂದದಲ್ಲಿ ಬಿಕ್ಕಟ್ಟು ಎದುರಾರಾಗಿದೆ. ವಾರ್ಷಿಕ ಆದಾಯದಲ್ಲಿ 20 ಮಿಲಿಯನ್ ಡಾಲರ್ (1.87 ಲಕ್ಷ ಕೋಟಿ ರೂ.) ನಷ್ಟವಾಗಲಿದೆ ಎಂದು ಕತಾರ್‌ ಹೇಳಿದೆ. ಇದನ್ನೂ ಓದಿ: ಅಮೆರಿಕದ ಫೈಟರ್‌ ಜೆಟ್‌ ಲ್ಯಾಂಡಿಂಗ್‌ ನಿರಾಕರಿಸಿ ನಮ್ಮದು ತಟಸ್ಥ ದೇಶ ಎಂದ ಶ್ರೀಲಂಕಾ

ಭಾರತದ ಎಲ್‌ಎನ್‌ಜಿ ಆಮದಿನ ಅರ್ಧದಷ್ಟು ಕತಾರ್‌ನಿಂದಲೇ ಬರುತ್ತಿದೆ. 2024ರಲ್ಲಿ 27.8 ಟ್ರಿಲಿಯನ್ ಮೆಟ್ರಿಕ್ ಟನ್ ಎಲ್‌ಎನ್‌ಜಿಯನ್ನು ಭಾರತ ಆಮದು ಮಾಡಿಕೊಂಡಿದೆ. ಈ ಪೈಕಿ 11.30 ಟ್ರಿಲಿಯನ್ ಮೆಟ್ರಿಕ್ ಟನ್ ಕತಾರ್‌ನಿಂದಲೇ ಆಮದು. ಇದು ಒಟ್ಟು ಎಲ್‌ಎನ್‌ಜಿ ಆಮದಿನ ಶೇ.47ರ ಭಾಗವಾಗಿದೆ

2000 ಕೋಟಿ ರೂ. ಭಾರತಕ್ಕೆ ನಷ್ಟವಾಗಿದ್ದು ಅನಿಲ ಲಭ್ಯತೆ ಅಭಾವದಿಂದ ಬೆಲೆ ಏರಿಕೆ ಆಗಬಹುದು. ಇದು ಭಾರತದ ಆರ್ಥಿಕತೆ ಮೇಲೂ ಪರಿಣಾಮ ಉಂಟು ಮಾಡಲಿದೆ.

ಕತಾರ್ ಎನರ್ಜಿಯ ಸಿಇಒ ಮತ್ತು ಇಂಧನ ವ್ಯವಹಾರಗಳ ರಾಜ್ಯ ಸಚಿವ ಸಾದ್ ಅಲ್-ಕಾಬಿ ಪ್ರತಿಕ್ರಿಯಿಸಿ, ನಮ್ಮ ಮೇಲೆ ಈ ರೀತಿಯ ದಾಳಿ ನಡೆಯಲಿದೆ ಎಂದು ನಾವು ಭಾವಿಸಿರಲಿಲ್ಲ. ಅದರಲ್ಲೂ ಪವಿತ್ರ ರಂಜಾನ್‌ ಸಮಯಲ್ಲಿ ಸಹೋದರ ಮುಸ್ಲಿಂ ದೇಶ ನಮ್ಮ ಮೇಲೆ ಈ ರೀತಿ ದಾಳಿ ಮಾಡುತ್ತದೆ ಎಂದು ನಾವು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ.

 

ದಾಳಿಗಳಿಂದ ಉಂಟಾದ ಹಾನಿಯ ಪ್ರಮಾಣದಿಂದ ಆ ಪ್ರದೇಶ ಈಗ 10 ರಿಂದ 20 ವರ್ಷಗಳ ಹಿಂದಕ್ಕೆ ತಳ್ಳಿದೆ. ಬಹಳಷ್ಟು ಜನರಿಗೆ ಈ ಜಾಗ ಸುರಕ್ಷಿತ ತಾಣವಾಗಿತ್ತು. ಆದರೆ ಈಗ ಈ ಜಾಗ ಅಲುಗಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಮೆರಿಕದ ತೈಲ ಕಂಪನಿ ಎಕ್ಸಾನ್ ಮೊಬಿಲಿಸ್ ಹಾನಿಗೊಳಗಾದ ಎಲ್‌ಎನ್‌ಜಿ ಸೌಲಭ್ಯಗಳಲ್ಲಿ ಪಾಲುದಾರರಾಗಿದ್ದರೆ, ಶೆಲ್ ಹಾನಿಗೊಳಗಾದ ಜಿಟಿಎಲ್ ಸೌಲಭ್ಯದಲ್ಲಿ ಪಾಲುದಾರರಾಗಿದ್ದು, ದುರಸ್ತಿ ಮಾಡಲು ಒಂದು ವರ್ಷ ತೆಗೆದುಕೊಳ್ಳಬಹುದು. ಇದನ್ನೂ ಓದಿ: ಇಸ್ರೇಲ್‌, ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇರಾನ್‌ ಟಾಪ್‌ ಕಮಾಂಡರ್‌ ಬಲಿ

ಟೆಕ್ಸಾಸ್ ಮೂಲದ ಎಕ್ಸಾನ್ ಮೊಬಿಲ್ ಎಲ್‌ಎನ್‌ಜಿ ಎಸ್ 4 ನಲ್ಲಿ ಶೇ. 34 ರಷ್ಟು ಮತ್ತು ಎಸ್ 6 ನಲ್ಲಿ ಶೇ. 30 ರಷ್ಟು ಪಾಲನ್ನು ಹೊಂದಿದೆ. ಎಸ್ 4 ಇಟಲಿಯ ಎಡಿಸನ್ ಮತ್ತು ಬೆಲ್ಜಿಯಂನ ಇಡಿಎಫ್‌ಟಿಗೆ ಸರಬರಾಜಿನ ಮೇಲೆ ಪರಿಣಾಮ ಬೀರುತ್ತದೆ. ಎಸ್ 6 ಚೀನಾದ ದಕ್ಷಿಣ ಕೊರಿಯಾದ ಕೋಗಾಸ್, ಇಡಿಎಫ್‌ಟಿ ಮತ್ತು ಶೆಲ್ ಮೇಲೆ ಪರಿಣಾಮ ಬೀರಲಿದೆ.

Share This Article