ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಮತ್ತೆ ಬಾಲಿವುಡ್‌ನಿಂದ ಅವಕಾಶವೊಂದು ಅರಸಿ ಬಂದಿದೆ. ಸಲ್ಮಾನ್‌ಖಾನ್ ಜೊತೆ ನಟಿಸಿದ ಸಿಕಂದರ್ ಸಿನಿಮಾ ಮಕಾಡೆ ಮಲಗಿದ್ರೂ ಅವರಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಕಮ್ಮಿಯಾಗಿಲ್ಲ. ಅನಿಮಲ್ ಹಾಗೂ ಛಾವಾ ಸಿನಿಮಾದ ಬಿಗ್ ಸಕ್ಸಸ್ ರಶ್ಮಿಕಾಗೆ ಮತ್ತೊಂದು ಅವಕಾಶ ಕಲ್ಪಿಸಿದೆ.
ರಶ್ಮಿಕಾ ಮಂದಣ್ಣ ನಟಿಸಿದ ದಕ್ಷಿಣ ಭಾರತದ ಪುಷ್ಪ ಹಾಗೂ ಪುಷ್ಪ-2 ಸಿನಿಮಾದ ಬ್ಲಾಕ್‌ಬಸ್ಟರ್ ಹಿಟ್ ಇತಿಹಾಸ ಸೇರಿದೆ. ಸದ್ಯ ಬಾಲಿವುಡ್‌ನಲ್ಲಿ ಕ್ರಿಶ್-4 ಸಿನಿಮಾದ ಸ್ಟಾರ್‌ಕ್ಯಾಸ್ಟ್ ಆಯ್ಕೆ ನಡೆಯುತ್ತಿದೆ. ಸಿನಿಮಾದ ನಾಯಕರಾಗಿ ಹೃತಿಕ್ ರೋಷನ್ (Hrithik Roshan) ಇದ್ರೆ ನಾಯಕಿಯಾಗಿ ರಶ್ಮಿಕಾಗೆ ಮಣೆಹಾಕುತ್ತಿದೆಯಂತೆ ಚಿತ್ರತಂಡ. ಅಂದಹಾಗೆ ಕ್ರಿಶ್-4 ಸಿನಿಮಾವನ್ನ ಗ್ರೀಕ್‌ಗಾಡ್ ಹೃತಿಕ್ ರೋಷನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.
ಕ್ರಿಶ್ ಸರಣಿಗಳನ್ನ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಈ ಬಾರಿ ನಿರ್ದೇಶನದ ಜವಾಬ್ದಾರಿ ಕೂಡಾ ಹೃತಿಕ್ ರೋಷನ್ ಮೇಲೆ ಬಿದ್ದಿದೆ. ಪುಷ್ಪ ಸಿನಿಮಾ ಮೂಲಕ ಶ್ರೀವಲ್ಲಿಯಾಗಿ ಖ್ಯಾತಿ ಪಡೆದಿರೋ ರಶ್ಮಿಕಾ ಬಾಲಿವುಡ್‌ನಲ್ಲೂ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರಿಶ್, ಕ್ರಿಶ್-3 ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ದರು. ಸದ್ಯ ಪ್ರಿಯಾಂಕ ಚೋಪ್ರಾ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಶ್ಮಿಕಾ ಅವರನ್ನ ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ ಎನ್ನಲಾಗ್ತಿದೆ.