ಶಾರುಖ್ ಖಾನ್ ಜೊತೆ ರಶ್ಮಿಕಾ ಮಂದಣ್ಣ: ಕುಣಿದು ಕುಪ್ಪಳಿಸಿದ ಫ್ಯಾನ್ಸ್

By
1 Min Read

ಬಾಲಿವುಡ್ (Bollywood) ನಟ ಶಾರುಖ್ ಖಾನ್ ಜೊತೆ ನಟಿಸಬೇಕು ಎನ್ನುವುದು ಹಲವರ ಕನಸು. ಅಂತಹ ಕನಸನ್ನು ಬೇಗ ನನಸು ಮಾಡಿಕೊಂಡಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ(Rashmika Mandanna). ಹೌದು, ಶಾರುಖ್ ಖಾನ್ ಜೊತೆ ತೆರೆಹಂಚಿಕೊಳ್ಳುವಂತಹ ದೊಡ್ಡ ಅವಕಾಶ ರಶ್ಮಿಕಾಗೆ ಸಿಕ್ಕಿದೆ. ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

ಶಾರುಖ್ ಖಾನ್ (Shah Rukh Khan) ಜೊತೆ ನಟಿಸುತ್ತಿರುವ ಖುಷಿ ಒಂದು ಕಡೆಯಾದರೆ, ಮತ್ತೊಂದು ಕಡೆ ಬಾಲಿವುಡ್ ನ ಪ್ರತಿಷ್ಠಿತ ಬ್ಯಾನರ್ ಯಶ್ ರಾಜ್ ಫಿಲ್ಮ್ಸ್ (Yash Raj Films) ಇದಕ್ಕೆ ಹಣ ಹೂಡುತ್ತಿದೆ. ಹೀಗಾಗಿ ರಶ್ಮಿಕಾಗೆ ಡಬಲ್ ಧಮಾಕ. ಈಗಾಗಲೇ ಬಾಲಿವುಡ್ ನಲ್ಲಿ ರಶ್ಮಿಕಾ ನಟಿಸಿದ್ದರೂ, ಇಂಥದ್ದೊಂದು ಅವಕಾಶ ಅವರಿಗೆ ಈವರೆಗೂ ಸಿಕ್ಕಿರಲಿಲ್ಲ. ಇದನ್ನೂ ಓದಿ:ಟೆಂಪಲ್ ರನ್ ಮುಗಿಸಿ ಫೋಟೋಶೂಟ್ ನಲ್ಲಿ ಭಾಗಿಯಾದ ಸಾರಾ ಅಲಿ ಖಾನ್

ಅಂದಹಾಗೆ ಶಾರುಖ್ ಖಾನ್ ಜೊತೆ ರಶ್ಮಿಕಾ ನಟಿಸುತ್ತಿರುವುದು ಸಿನಿಮಾದಲ್ಲಿ ಅಲ್ಲ. ಜಾಹೀರಾತುವೊಂದರಲ್ಲಿ ಇಬ್ಬರೂ ಕಾಣಿಸಿಕೊಳ್ಳುತ್ತಿದ್ದಾರೆ. ಆ ಜಾಹೀರಾತು ಏನು ಎನ್ನುವ ಕುರಿತು ಮಾಹಿತಿ ಹೊರ ಬಂದಿಲ್ಲ. ಜಾಹೀರಾತೊ ಮತ್ತೊಂದೊ? ಒಟ್ಟಿನಲ್ಲಿ ಶಾರುಖ್ ಜೊತೆ ನಟಿಸುವಂತ ಅವಕಾಶ ರಶ್ಮಿಕಾಗೆ ಇಷ್ಟು ಬೇಗ ಬರುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.

 

ಪುಷ್ಪ 2 ಸಿನಿಮಾದ ಶೂಟಿಂಗ್ ನಲ್ಲಿ ಸದ್ಯ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಅವರು ಸಮಯ ಹೊಂದಿಸಿಕೊಂಡು ಜಾಹೀರಾತಿನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ. ನೆಚ್ಚಿನ ಅಭಿಮಾನಿಗಳ ಶ್ರೀವಲ್ಲಿ, ಜಾಹೀರಾತಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್