ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಜ್ಯೋತಿಷಿ ವೇಣು ಸ್ವಾಮಿ ಅವರ ಮಾತುಗಳನ್ನು ತುಂಬಾ ಸೆಲೆಬ್ರಿಟಿಗಳು ಕೇಳುತ್ತಾರೆ. ತಮಗೆ ಸಂಕಷ್ಟ ಎದುರಾದಾಗ ಮತ್ತು ಒಳ್ಳೆಯ ದಿನಗಳಿಗಾಗಿ ಇವರ ಹತ್ತಿರ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಜ್ಯೋತಿಷ್ಯ ಕೇಳಿದ್ದೂ ಇದೆ. ಅದರಲ್ಲೂ ಸಮಂತಾ ಮತ್ತು ನಾಗಚೈತನ್ಯ ದೂರವಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ ಈ ವೇಣು ಸ್ವಾಮಿ, ಅವರ ಬದುಕಿನಲ್ಲಿ ಹಾಗೆಯೇ ಆದಾಗ, ವೇಣು ಸ್ವಾಮಿಗೆ ಮತ್ತಷ್ಟು ಡಿಮಾಂಡ್ ಬಂತು. ಈಗ ವೇಣು ಸ್ವಾಮಿ ಕೂಡ ಆ ಎರಡೂ ಸಿನಿಮಾ ರಂಗದ ದೊಡ್ಡ ಸೆಲೆಬ್ರಿಟಿ ಆಗಿಹೋಗಿದ್ದಾರೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್
ಕನ್ನಡದ ಕುವರಿ ರಶ್ಮಿಕಾ ಮಂದಣ್ಣ ಕೂಡ ಹಲವಾರು ಬಾರಿ ಇದೇ ವೇಣು ಸ್ವಾಮಿ ಅವರ ಬಳಿ ಹೋಗಿ ಭವಿಷ್ಯ ಕೇಳಿದ್ದಿದ್ದೆ. ಆಗಾಗ್ಗೆ ನಮ್ಮ ಮನೆಗೆ ರಶ್ಮಿಕಾ ಬರುತ್ತಾರೆ ಎಂದು ಸ್ವತಃ ವೇಣು ಸ್ವಾಮಿ ಅವರೇ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈಗ ವೇಣು ಸ್ವಾಮಿ ಅವರಿಗೂ ಮತ್ತು ರಶ್ಮಿಕಾ ಅವರಿಗೆ ಮನಸ್ತಾಪ ಉಂಟಾಗಿದೆ. ಕಾರಣ ಪ್ರೀತಿ ಪ್ರೇಮ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್
ರಶ್ಮಿಕಾ ಮಂದಣ್ಣ ಅವರ ಹೆಸರು ವಿಜಯ್ ದೇವರಕೊಂಡ ಜತೆ ತಳುಕು ಹಾಕಿಕೊಂಡಿದ್ದು ಹೊಸದೇನೂ ಅಲ್ಲ. ಇಬ್ಬರೂ ಪರಸ್ಪರ ಪ್ರೀತಿಸುತ್ತಾರೆ ಎನ್ನುವ ಸುದ್ದಿಯೂ ಇದೆ. ಇದೇ ವಿಚಾರವನ್ನು ವೇಣು ಸ್ವಾಮಿ ಅವರು ರಶ್ಮಿಕಾ ಅವರಿಗೆ ಹೇಳಿದ್ದರಂತೆ. ‘ನಿನಗೆ ಸದ್ಯಕ್ಕೆ ಪ್ರೇಮ ಪ್ರೀತಿ ಆಗಿ ಬರುವುದಿಲ್ಲ. ಆ ಹುಡುಗನಿಂದ ದೂರವಿದ್ದು ಬಿಡು’ ಅಂದಿದ್ದರಂತೆ. ನಮ್ಮ ವೈಯಕ್ತಿಕ ವಿಚಾರಕ್ಕೆ ಮೂಗು ತೂರಿಸಬೇಡಿ ಎಂದು ಹೇಳಿ ರಶ್ಮಿಕಾ ಅವರು ವೇಣು ಸ್ವಾಮಿ ಅವರಿಂದ ದೂರವಾಗಿದ್ದರಂತೆ. ಸ್ವತಃ ಈ ಮಾತನ್ನು ವೇಣು ಸ್ವಾಮಿ ಅವರೇ ವಿಡಿಯೋ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
‘ಆ ಹುಡುಗಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದೆ. ಅವರು ಅದನ್ನು ಗಂಭೀರವಾಗಿ ತಗೆದುಕೊಳ್ಳಲಿಲ್ಲ. ಖಾಸಗಿ ವಿಚಾರಕ್ಕೆ ಬರಬೇಡಿ ಎಂದು ದೂರವಾದರು. ಅವರು ನನ್ನಿಂದ ದೂರವಾಗಿದ್ದಕ್ಕೆ ಯಾವುದೇ ಬೇಸರವಿಲ್ಲ. 2024ರವರೆಗೂ ಅವರಿಗೆ ಒಳ್ಳೆಯ ದಿನಗಳು ಇವೆ. ನಂತರ ಅವರಿಗೆ ಕಷ್ಟಗಳು ಎದುರಾಗುತ್ತವೆ’ ಎಂದಿದ್ದಾರೆ ವೇಣು ಸ್ವಾಮಿ.