ಗೋಲ್ಡನ್ ಆಫರ್ ಕೈಚೆಲ್ಲಿದ ರಶ್ಮಿಕಾ ಮಂದಣ್ಣ

Public TV
1 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕೈತುಂಬಾ ಸಿನಿಮಾಗಳಿರುವ ನಟಿ, ತಮಗೆ ಸಿಕ್ಕ ಗೋಲ್ಡನ್ ಚಾನ್ಸ್ ಅನ್ನು ರಿಜೆಕ್ಟ್ ಮಾಡಿರೋದನ್ನು ತಿಳಿದು ಫ್ಯಾನ್ಸ್‌ ಅಚ್ಚರಿಗೊಂಡಿದ್ದಾರೆ.

ತಮಿಳಿನ ಸೂಪರ್ ಹಿಟ್ ಚಿತ್ರವನ್ನು ರಶ್ಮಿಕಾ ಕೈಬಿಟ್ಟಿದಕ್ಕೆ ಫ್ಯಾನ್ಸ್ ದಂಗಾಗಿದ್ದಾರೆ. ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಕೋಟಿಗಟ್ಟಲೇ ಕಮಾಯಿ ಮಾಡುತ್ತಿರುವ ವಿಕ್ರಮ್‌ (Vikram) ನಟನೆಯ ‘ತಂಗಲಾನ್’ (Thangalaan Film) ಸಿನಿಮಾವನ್ನು ಪುಷ್ಪ ನಟಿ ಕೈಬಿಟ್ಟಿರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಚಿತ್ರ ರಿಜೆಕ್ಟ್‌ ಮಾಡಿದ ಶ್ರೀಲೀಲಾ

ನಿರ್ದೇಶಕ ಪಾ ರಂಜಿತ್ ಅವರು ಮಾಳವಿಕಾ ಮೋಹನನ್ ನಟಿಸಿರುವ ನಾಯಕಿ ಪಾತ್ರಕ್ಕೆ ಮೊದಲು ರಶ್ಮಿಕಾರನ್ನು ಸಂಪರ್ಕಿಸಿದ್ದರಂತೆ. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಈ ಚಿತ್ರವನ್ನು ನಟಿ ಕೈಚೆಲ್ಲಿದ್ದರು. ಈಗ ‘ತಂಗಲಾನ್’ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಸಕ್ಸಸ್ ರೇಸ್ ನೋಡಿ ಅಯ್ಯೋ ಶ್ರೀವಲ್ಲಿ ಎಂತಹ ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡರು ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಪುಷ್ಪ 2, ಛಾವಾ, ಅನಿಮಲ್ ಪಾರ್ಕ್, ಕುಬೇರ, ರೈನ್‌ಬೋ ಸಿನಿಮಾ ಸೇರಿದಂತೆ ಅನೇಕ ಪ್ರಾಜೆಕ್ಟ್‌ಗಳಿವೆ.

Share This Article