ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಬಿಡುವಿಲ್ಲದ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ ಸಿನಿಮಾಗಳ ನಾಯಕಿಯಾಗುವುದರ ಜೊತೆ ಜೊತೆಗೆ ನಾಯಕಿ ಪ್ರಧಾನ ಸಿನಿಮಾಗಳಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಗರ್ಲ್‍ಫ್ರೆಂಡ್, ಮೈಸಾ, ಥಮಾ ಸಿನಿಮಾಗಳ ಚಿತ್ರೀಕರಣದಲ್ಲಿ ರಶ್ಮಿಕಾ ಬ್ಯುಸಿ ಇರುವ ಹೊತ್ತಿಗೇ ಮತ್ತೊಂದು ಬಿಗ್ ಪ್ರಾಜೆಕ್ಟ್ ಬಾಚಿಕೊಂಡ ಸುದ್ದಿ ಬಂದಿದೆ. ಅದುವೇ (Kanchana 4) `ಕಾಂಚನ 4′.
ದಕ್ಷಿಣ ಭಾರತದಲ್ಲಿ ಕಾಂಚನ ಸಿರೀಸ್ ಒಂದು ದಾಖಲೆ ಬರೆದ ಚಿತ್ರ ಸರಣಿ. ಪ್ರತಿ ಸರಣಿಯಲ್ಲೂ ರಾಘವ ಲಾರೆನ್ಸ್ ಕುತೂಹಲದ ಕಥೆ ಕಟ್ಟಿಕೊಡುವಲ್ಲಿ ಗೆದ್ದಿದ್ದಾರೆ. ಈ ಸಲದ ಕಾಂಚನ ಸಿರೀಸ್‍ನ ನಾಯಕಿಯ ಆಫರ್ ರಶ್ಮಿಕಾಗೆ ಹೋಗಿದೆ ಎನ್ನಲಾಗುತ್ತಿದೆ. ರಶ್ಮಿಕಾ ಇಲ್ಲಿ ದೆವ್ವದ ಪಾತ್ರ ಮಾಡಲಿದ್ದಾರಂತೆ. ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ ಬಿಲ್ಲ ರಂಗ ಬಾಷಾ ಫಸ್ಟ್ ಲುಕ್ ಪೋಸ್ಟರ್
ಗ್ಲ್ಯಾಮರ್, ಪರ್ಫಾಮೆನ್ಸ್ ಎಲ್ಲದಕ್ಕೂ ಸೈ ಎನ್ನುವ ರಶ್ಮಿಕಾ ದಕ್ಷಿಣ ಭಾರತದ ಚಿತ್ರಕರ್ಮಿಗಳ ಆಯ್ಕೆಯ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಘೋಷಣೆಯಾಗಿರುವ ಚಿತ್ರಗಳು ಮೂರೇ ಆಗಿದ್ದರೂ ರಶ್ಮಿಕಾ ಕೈಯಲ್ಲಿ ಹತ್ತಾರು ಪ್ರಾಜೆಕ್ಟ್‌ಗಳಿವೆ. ಅದೆಲ್ಲವೂ ಕಾಲ ಬಂದಾಗ ಘೋಷಣೆಯಾಗುತ್ತೆ.
ಶೀಘ್ರದಲ್ಲೇ ಕಾಂಚನ 4 ಚಿತ್ರದ ಘೋಷಣೆ ಆಗಲಿದ್ದು ಇಲ್ಲಿ ರಶ್ಮಿಕಾ ಪ್ರಧಾನ ನಾಯಕಿಯಾಗಿ ಅಭಿನಯಿಸಲಿದ್ದಾರಂತೆ. ಹಾರರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರುವ ರಶ್ಮಿಕಾ ಅಭಿನಯಿಸಿರುವ ಥಮಾ ಸಿನಿಮಾದ ಪೋಸ್ಟರ್ ಪ್ರಕಾರ ನೋಡೋದಾದ್ರೆ ಹಾರರ್ ಶೈಲಿಯಲ್ಲೇ ಕಾಣಿಸುತ್ತದೆ. ಮೈಸಾದಲ್ಲೂ ಅಗ್ರೆಸ್ಸಿವ್ ಪಾತ್ರ ಪೋಷಿಸಿದ್ದು ಮತ್ತೊಮ್ಮೆ ರಶ್ಮಿಕಾ ಅಂಥದ್ದೇ ಪರ್ಫಾಮೆನ್ಸ್ ಓರಿಯೆಂಟೆಡ್ ಪಾತ್ರ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಕಿಡ್ನ್ಯಾಪ್ – ನಿರ್ದೇಶಕ ನಂದಕಿಶೋರ್‌ಗೆ ಹಣ ಕೊಡಿಸಿದ್ದ ರೌಡಿಶೀಟರ್