ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ನಟನ ಪತ್ನಿಯಾಗಿ ನಟಿಸೋದು ಪಕ್ಕಾ

Public TV
1 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲ ಚಿನ್ನ. ಇವರು ನಟಿಸಿರೋ `ಮಿಷನ್ ಮಜ್ನು’, `ಗುಡ್ ಬೈ’ ರಿಲೀಸ್ ಗೂ ಮುಂಚೆನೇ ಕಿರಿಕ್ ಬೆಡಗಿ ರಶ್ಮಿಕಾ, ಬಿಟೌನ್ ಸ್ಟಾರ್ ರಣಬೀರ್ ಕಪೂರ್‌ಗೆ ನಾಯಕಿಯಾಗುವ ಅವಕಾಶವ ಗಿಟ್ಟಿಸಿಕೊಂಡಿದ್ದಾರೆ. `ಪುಷ್ಪ’ ಸಕ್ಸಸ್ ನಂತರ ಸೌತ್ ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ರಶ್ಮಿಕಾಗೆ ಬುಲಾವ್ ಬರುತ್ತಿದೆ. ರಣಬೀರ್ ಕಪೂರ್ ಜತೆ ನಟಿಸುತ್ತಾರೆ ಎಂದು ಹಲವು ದಿನಗಳಿಂದ ಸುದ್ದಿ ಆಗುತ್ತಿತ್ತು. ಇದೀಗ ಸುದ್ದಿ ನಿಜವಾಗಿದೆ. ಇದನ್ನೂ ಓದಿ:  ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

ಸದ್ಯ `ಬ್ರಹ್ಮಾಸ್ತ್ರ’ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಿರೋ ರಣಬೀರ್ ಕಪೂರ್ ಈಗ `ಅನಿಮಲ್’ ಚಿತ್ರದಲ್ಲಿ ನಟಿಸಲಿದ್ದಾರೆ. ಯುಗಾದಿ ಹಬ್ಬದಂದು ರಣಬೀರ್‌ ಕಪೂರ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದು ಅಧಿಕೃತವಾಗಿ ಟ್ವೀಟರ್‌ನಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅನೌನ್ಸ್ ಮಾಡಿದ್ದಾರೆ.

ಫ್ರೆಶ್ ಲವ್ ಸ್ಟೋರಿ ಜೊತೆಗೆ ಫ್ರೆಶ್ ಜೋಡಿಯನ್ನು ತೋರಿಸಬೇಕು ಅಂತಾ ರಣಬೀರ್‌ಗೆ `ಪುಷ್ಪ’ ನಟಿ ರಶ್ಮಿಕಾ ಅವರನ್ನು ಫೈನಲ್ ಮಾಡಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ರಶ್ಮಿಕಾ ಅವರು, ರಣಬೀರ್‌ಗೆ ಪತ್ನಿಯಾಗಿ ನಟಿಸಲಿದ್ದಾರೆ. ಅದು ಗೀತಾಂಜಲಿ ಪಾತ್ರದಲ್ಲಿ ಎನ್ನುವುದು ವಿಶೇಷ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *