ಸಹನಟನ ಹುಟ್ಟು ಹಬ್ಬಕ್ಕೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ ರಶ್ಮಿಕಾ ಮಂದಣ್ಣ

Public TV
1 Min Read

ನ್ನಡದ ಅನೇಕ ನಟ ನಟಿಯರಿಗೆ ವಿಶ್ ಮಾಡದೇ ಇರುವ ಕಾರಣಕ್ಕಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಟೀಕೆಯನ್ನೂ ಸ್ವೀಕರಿಸಿದ್ದಾರೆ. ಹಾಗಾಗಿ ಪುಷ್ಪ (Pushpa) ಸಿನಿಮಾದಲ್ಲಿ ಸಹನಟನಾಗಿ ನಟಿಸಿರುವ ಅಲ್ಲು ಅರ್ಜುನ್ (Allu Arjun) ಅವರ ಹುಟ್ಟು ಹಬ್ಬಕ್ಕೆ  (Birthday) ವಿಶ್ ಮಾಡ್ತಾರಾ ಅಥವಾ ಸುಮ್ಮನೆ ಇರ್ತಾರಾ ಎನ್ನುವ ಕುತೂಹಲವಿತ್ತು. ರೊಮ್ಯಾಂಟಿಕ್ ಆಗಿ ವಿಶ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ರಶ್ಮಿಕಾ.

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ತಮ್ಮ ಕೋಸ್ಟಾರ್ ಹುಟ್ಟು ಹಬ್ಬಕ್ಕೆ ಯಾವ ರೀತಿಯಲ್ಲಿ ವಿಶ್ ಮಾಡಬಹುದು ಎನ್ನುವ ಕುತೂಹಲ ಇದ್ದೇ ಇತ್ತು. ಅದಕ್ಕೆ ರಶ್ಮಿಕಾ ತೆರೆ ಎಳೆದ್ದಾರೆ. ‘ನನ್ನ ಪುಷ್ಪರಾಜ್ ನಿಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಶುಭ ಕೋರಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

ರಶ್ಮಿಕಾ ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲು ಅರ್ಜುನ್ ಪುಷ್ಪ ಪಾತ್ರದಲ್ಲಿ ಮಿಂಚಿದ್ದರು. ಈ ಜೋಡಿ ಸಖತ್ ಫೇಮಸ್ ಕೂಡ ಆಗಿತ್ತು. ಈ ಸಿನಿಮಾದ ಮುಂದುವರಿಕೆಯಾಗಿ ಪುಷ್ಪ 2 ಸಿನಿಮಾ ಕೂಡ ರೆಡಿಯಾಗುತ್ತಿದೆ. ಈ ಸಿನಿಮಾದಲ್ಲೂ ರಶ್ಮಿಕಾ ನಾಯಕಿ. ಅಲ್ಲು ನಾಯಕ. ಈಗಾಗಲೇ ಹಲವು ಹಂತಗಳ ಚಿತ್ರೀಕರಣ ಕೂಡ ನಡೆದಿದೆ.

ಅಲ್ಲು ಹುಟ್ಟು ಹಬ್ಬಕ್ಕೆ ಪುಷ್ಪ ಚಿತ್ರತಂಡ ಗ್ಲಿಮ್ಸ್ ಬಿಡುಗಡೆ ಮಾಡಿದೆ. ಹೊಸ ರೀತಿಯಲ್ಲೇ ಕಾನ್ಸೆಪ್ಟ್ ಮಾಡಿ ಅದನ್ನು ವಿಡಿಯೋ ರೂಪಕ್ಕೆ ತಂದು, ವಿಡಿಯೋದ ಕೊನೆಯಲ್ಲಿ ಅಲ್ಲು ಅರ್ಜುನ್ ಗೆಟಪ್ ರಿವಿಲ್ ಮಾಡಿದ್ದಾರೆ. ಈ ಗ್ಲಿಮ್ಸ್ ಬಗ್ಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಪುಷ್ಪ ಗೆಟಪ್ ಗೆ ಮತ್ತು ಹುಲಿಗಣ್ಣಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Share This Article