ಹೊಸ ಫೋಟೋಶೂಟ್‌ನಿಂದ ಇಂಟರ್‌ನೆಟ್‌ ಬೆಂಕಿ ಹಚ್ಚಿದ ರಶ್ಮಿಕಾ ಮಂದಣ್ಣ

Public TV
1 Min Read

`ಪುಷ್ಪ’ (Pushpa) ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಹೊಸ ಹೊಸ ಫೋಟೋಶೂಟ್ (Photoshoot) ಮೂಲಕ ಇಂಟರ್‌ನೆಟ್‌ಗೆ ಬೆಂಕಿ ಹಚ್ಚುತ್ತಿರುತ್ತಾರೆ. ಈಗ ಮತ್ತೊಮ್ಮೆ ಬೋಲ್ಡ್ ಲುಕ್‌ನಿಂದ ಕ್ರಶ್ಮಿಕಾ ಎಲ್ಲರ ಗಮನ ಸೆಳೆದಿದ್ದಾರೆ.

ಕನ್ನಡದ `ಕಿರಿಕ್’ ಬ್ಯೂಟಿಯ ರಶ್ಮಿಕಾ ಮೇಲಿನ ಕ್ರೇಜ್ (Craze) ಹೆಚ್ಚಾಗುತ್ತಲೇ ಇದೆ. ಪುಷ್ಪ, ವಾರಿಸು (Varisu) ಸಿನಿಮಾ ಸಕ್ಸಸ್ ನಂತರ ರಶ್ಮಿಕಾಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸಂಭಾವನೆ ವಿಚಾರದಲ್ಲೂ ನಟಿ ಸೌಂಡ್ ಮಾಡ್ತಿದ್ದಾರೆ. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ ಬಾಸ್‌ ಬೆಡಗಿ ಅಕ್ಷತಾ ಕುಕಿ

ಇದೀಗ ಸಮಾರಂಭವೊಂದರಲ್ಲಿ ಹಾಟ್ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟಿದ್ದಾರೆ. ಇವೆಂಟ್ ಬಳಿಕ ಚೆಂದದ ಫೋಟೋಶೂಟ್ ಕೂಡ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕಪ್ಪು ಮತ್ತು ಸಿಲ್ವರ್ ಮಿಶ್ರಿತ ಡ್ರೆಸ್‌ನಲ್ಲಿ ರಶ್ಮಿಕಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ರಶ್ಮಿಕಾಳ ಮಾದಕ ನೋಟ ಪಡ್ಡೆಹುಡುಗರ ನಿದ್ದೆಗೆಡಿಸಿದೆ.

ರಶ್ಮಿಕಾ ಮಂದಣ್ಣ, ಸದ್ಯ ಪುಷ್ಪ 2, ಅನಿಮಲ್ ಮತ್ತು ನಟ ನಿತಿನ್ ಜೊತೆಗಿನ ಹೊಸ ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿ ಕಾಣಿಸಿಕೊಳ್ತಿದ್ದಾರೆ.

Share This Article