ತಮಿಳಿನಲ್ಲಿ ಬಂಪರ್ ಆಫರ್‌, ವಿಕ್ರಮ್‌ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

Public TV
1 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ಸೌತ್- ಬಾಲಿವುಡ್‌ನಲ್ಲಿ ಬ್ಯುಸಿ ನಾಯಕಿಯಾಗಿ ಸದ್ದು ಮಾಡ್ತಿದ್ದಾರೆ. ಈಗ ಕಾಲಿವುಡ್‌ನಲ್ಲಿ ‘ಪುಷ್ಪ'(Pushpa)  ಶ್ರೀವಲ್ಲಿಗೆ ಬಂಪರ್ ಆಫರ್‌ವೊಂದು ಸಿಕ್ಕಿದೆ. ತಮಿಳಿನ ಸ್ಟಾರ್ ನಟರ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ತಿದ್ದಾರೆ. ಇದನ್ನೂ ಓದಿ:ಸ್ಪಂದನಾ ಮೃತದೇಹ ನಾಳೆ ಬೆಂಗಳೂರಿಗೆ, ಬುಧವಾರ ಅಂತ್ಯಕ್ರಿಯೆ

ಶ್ರೀಲೀಲಾ ಅಲ್ಲ, ಯಾರೇ ಬಂದರೂ ರಶ್ಮಿಕಾ ಖದರ್ ಕಮ್ಮಿಯಾಗೋಲ್ಲ ಅನ್ನೋದಕ್ಕೆ ಈ ಸುದ್ದಿ ತಾಜಾ ಉದಾಹರಣೆ. ತೆಲುಗಿನಲ್ಲಿ ಶ್ರೀಲೀಲಾ ಅದೆಷ್ಟೇ ಸದ್ದು ಮಾಡ್ತಿದ್ರು. ಹಿಂದಿ, ತೆಲುಗು- ತಮಿಳಿನಲ್ಲಿ ರಶ್ಮಿಕಾ ಮಂದಣ್ಣಗೆ ಬೇಡಿಕೆಯಿದೆ. ಬಾಲಿವುಡ್- ಸೌತ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ನಟಿಸುತ್ತಾ ಇದ್ದಾರೆ. ಈಗ ಸ್ಟಾರ್ ನಟ ಚಿಯಾನ್ ವಿಕ್ರಮ್ ಜೊತೆ ಶ್ರೀವಲ್ಲಿ ನಟಿಸುವ ಚಾನ್ಸ್ ಗಿಟ್ಟಿಕೊಂಡಿದ್ದಾರೆ.

ವಿಕ್ರಮ್ ಅದ್ಧೂರಿ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ತೆರೆಕಂಡ ‘2008’ ಸಿನಿಮಾವನ್ನು ನಿರ್ದೇಶಕ ಜೂಡ್ ಆಂಥೋನಿ ಜೋಸೆಫ್ ನಿರ್ದೇಶನದಲ್ಲಿ ವಿಕ್ರಮ್ ಅದ್ಧೂರಿ ಸಿನಿಮಾ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ.

ಚಿಯಾನ್ ವಿಕ್ರಮ್ (Chiyan Vikram) ಜೊತೆ ರಶ್ಮಿಕಾ ಮಂದಣ್ಣ (Rashmika Mandanna) ಒಬ್ಬರೇ ಇರೋದಿಲ್ಲ. ಕಾಲಿವುಡ್ ನಟ ವಿಜಯ್ ಸೇತುಪತಿ (Vijay Sethupathi) ಕೂಡ ಇರಲಿದ್ದಾರೆ. ಮೂವರ ಪಾತ್ರಕ್ಕೂ ಹೆಚ್ಚಿನ ಸ್ಕೋಪ್ ಇದೆ. ಭಿನ್ನ ಕಥೆ ಮತ್ತು ಪಾತ್ರಕ್ಕೆ ಈ ಸ್ಟಾರ್ ಕಲಾವಿದರು ಜೀವ ತುಂಬಲಿದ್ದಾರೆ. ಹೊಸ ಜಾನರ್ ಕಥೆ, ಪಾತ್ರ ಹೇಗಿರಲಿದೆ ಇದೆಲ್ಲದರ ಅಪ್‌ಡೇಟ್ ಇನ್ನಷ್ಟೇ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಬೇಕಿದೆ. ಒಟ್ನಲ್ಲಿ ರಶ್ಮಿಕಾ ಸಿನಿಮಾ ಬಗ್ಗೆ ನಯಾ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್