ಶ್ರೀಲೀಲಾ ಔಟ್‌, ರವಿತೇಜಗೆ ರಶ್ಮಿಕಾ ಮಂದಣ್ಣ ನಾಯಕಿ

Public TV
1 Min Read

ಟಾಲಿವುಡ್‌ನಲ್ಲಿ (Tollywood) ತೆಲುಗು ನಟಿಮಣಿಯರಿಗಿಂತ ಕನ್ನಡದ ನಟಿಯರ ದರ್ಬಾರ್ ಜೋರಾಗಿದೆ. ಅದರಲ್ಲೂ ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ ನಡುವೆ ಸಖತ್ ಪೈಪೋಟಿಯಿದೆ. ಇದೀಗ ಶ್ರೀಲೀಲಾ (Sreeleela) ನಾಯಕಿಯಾಗಬೇಕಿದ್ದ ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ. ಶ್ರೀಲೀಲಾ ಬದಲು ರಶ್ಮಿಕಾ ಮಂದಣ್ಣಗೆ ಚಿತ್ರತಂಡ ಮಣೆ ಹಾಕಿದೆ.

ಮಾಸ್ ಮಹರಾಜ ರವಿತೇಜ ನಟನೆಯ ಹೊಸ ಸಿನಿಮಾಗೆ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು, ಶ್ರೀಲೀಲಾ. ಈ ಹಿಂದೆ ಧಮಾಕಾ ಚಿತ್ರದಲ್ಲಿ ರವಿತೇಜಗೆ (Ravi Teja) ನಾಯಕಿಯಾಗಿ ಶ್ರೀಲೀಲಾ ಗಮನ ಸೆಳೆದಿದ್ದರು. ಹಾಗಾಗಿ ಈ ಸಿನಿಮಾಗೂ ಇದೇ ಜೋಡಿಯನ್ನೇ ಮತ್ತೆ ಒಂದಾಗಲಿದೆ ಎನ್ನಲಾಗಿತ್ತು. ಆದರೆ ಈಗ ಶ್ರೀಲೀಲಾ ಬದಲು ರಶ್ಮಿಕಾ ಮಂದಣ್ಣಗೆ ಆ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಬಳುಕುವ ಬಳ್ಳಿಯಂತೆ ಮಿಂಚಿದ ಶ್ರೀಲೀಲಾ

ಹೊಸ ಸಿನಿಮಾಗೆ ಹೊಸ ಜೋಡಿ ಇರಲಿ. ರವಿತೇಜ (Ravi Teja) ಜೊತೆ ರಶ್ಮಿಕಾ ನಟಿಸಿದ್ರೆ ಚೆಂದ ಎಂದೆನಿಸಿ ಪುಷ್ಪ ಬ್ಯೂಟಿಯನ್ನ ತಂಡ ಫೈನಲ್ ಮಾಡಿದೆ. ನಟಿಯ ಸಂಭಾವನೆ ಎಷ್ಟೇ ದುಬಾರಿ ಆದರೂ ಓಕೆ ಎಂದು ತಂಡ ನಿರ್ಧರಿಸಿದೆ. ಈ ಚಿತ್ರದ ಕಥೆ ಕೇಳಿ ಶ್ರೀವಲ್ಲಿ ಕೂಡ ಓಕೆ ಎಂದಿದ್ದಾರಂತೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

ಈ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ವರಲಕ್ಷ್ಮಿ ಶರತ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಸದ್ಯ ರವಿ ತೇಜ, ರಶ್ಮಿಕಾ, ಗೋಪಿಚಂದ್ ಮಲಿನೇನಿ ಕಾಂಬೋದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಮೂಡಿ ಬರಲಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್