ಸಮಂತಾ ಕೈಬಿಟ್ಟ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ

Public TV
1 Min Read

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ (Rashmika Mandanna) ಸೌತ್- ಬಾಲಿವುಡ್ ರಂಗದಲ್ಲಿ ಸಖತ್ ಡಿಮ್ಯಾಂಡ್ (Bollywood) ಇದೆ. ಇತ್ತೀಚಿಗೆ ನಿತಿನ್ ಜೊತೆ ಹೊಸ ಒಪ್ಪಿಕೊಂಡ ಬೆನ್ನಲ್ಲೇ ತೆಲುಗಿನ ಹೊಸ ಚಿತ್ರಕ್ಕೆ ನಟಿ ಓಕೆ ಎಂದಿದ್ದಾರೆ. ಸಮಂತಾ ಕೈಬಿಟ್ಟ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಅದೃಷ್ಟದ ನಟಿ ರಶ್ಮಿಕಾಗೆ ಅವಕಾಶಗಳು ಅರಸಿ ಬರುತ್ತಿದೆ. ಅದರಲ್ಲೂ ‘ಪುಷ್ಪ’ (Pushpa)  ಚಿತ್ರದ ಸಕ್ಸಸ್ ನಂತರ ಶ್ರೀವಲ್ಲಿಗೆ ಬೇಡಿಕೆ ಜಾಸ್ತಿಯಾಗಿದೆ. ಇದೀಗ ತೆಲುಗಿನ ಹೊಸ ಚಿತ್ರ Rainbow ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಫೈನಲ್ ಆಗಿದ್ದಾರೆ. ನಟ ದೇವ್‌ ಮೋಹನ್‌- ರಶ್ಮಿಕಾಗೆ ಕ್ಲ್ಯಾಪ್‌ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಸಮಂತಾ ಕೈಬಿಟ್ಟ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ ನಟಿ ನಯನತಾರಾ

`ರೈನ್‌ಬೋ’ ಸಿನಿಮಾ ರಶ್ಮಿಕಾ ನಟಿಸುತ್ತಿರುವ ಮೊದಲ ಮಹಿಳಾ ಪ್ರಧಾನ ಸಿನಿಮಾವಾಗಿದೆ. ಈ ಬಗ್ಗೆ ರಶ್ಮಿಕಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಇದನ್ನು ಹುಡುಗಿಯ ದೃಷ್ಟಿಕೋನದಿಂದ ಚಿತ್ರೀಕರಿಸಲಾಗಿದೆ. ಈ ಪಾತ್ರವನ್ನು ಜೀವಂತಗೊಳಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ನಟಿ ಮಾತನಾಡಿದ್ದಾರೆ.

ಈ ಚಿತ್ರಕ್ಕೆ ಮೊದಲು ಸಮಂತಾ (Samantha)  ಆಯ್ಕೆಯಾಗಿದ್ದರು. 2021ರಲ್ಲಿಯೇ Dream Warrior Pictures ಸಮಂತಾ ನಾಯಕಿ ಎಂದು ಅನೌನ್ಸ್ ಮಾಡಿದ್ದರು. ಆದರೆ ಸ್ಯಾಮ್ ಅನಾರೋಗ್ಯ ಸಮಸ್ಯೆಯಿಂದ ಈ ಚಿತ್ರವನ್ನ ಕೈಬಿಟ್ಟಿದ್ದಾರೆ. ಸಮಂತಾ ಜಾಗಕ್ಕೆ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ.

Share This Article