ಕೆಂಪು ಬಣ್ಣದ ಕೋಟು-ಪ್ಯಾಂಟು; ರಶ್ಮಿಕಾ ಸಖತ್ ಹಾಟು

Public TV
1 Min Read

ನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ಬಾಲಿವುಡ್- ಸೌತ್ ಅಂಗಳದಲ್ಲಿ ಬ್ಯುಸಿ ನಟಿಯಾಗಿ ಮಿಂಚ್ತಿದ್ದಾರೆ. ಆಗಾಗ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುವ ಶ್ರೀವಲ್ಲಿ, ಈ ಬಾರಿ ಕೋಟು- ಪ್ಯಾಂಟು ಧರಿಸಿ ಸಖತ್ ಹಾಟ್ ಆಗಿ ಕ್ಯಾಮೆರಾ ಮುಂದೆ ಬಂದಿದ್ದಾರೆ. ಈ ಕುರಿತ ಫೋಟೋ ಸಖತ್ ವೈರಲ್ ಆಗುತ್ತಿದೆ.

‘ಕಿರಿಕ್ ಪಾರ್ಟಿ’ (Kirik Party)ಚೆಲುವೆ ರಶ್ಮಿಕಾ ಮಂದಣ್ಣ, ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ. ಸಿನಿಮಾರಂಗದಲ್ಲಿ ಒಳ್ಳೋಳ್ಳೆಯ ಅವಕಾಶ ಗಿಟ್ಟಿಸಿಕೊಳ್ತಿದ್ದಾರೆ. ಬಂದ ಅವಕಾಶವನ್ನ ಸದುಪಯೋಗಪಡಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಸೌತ್‌ನ ಸ್ಟಾರ್ ನಟರಿಗೆ ರಶ್ಮಿಕಾನೇ ಬೇಕು ಅನ್ನೋವಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದ್ದಾರೆ. ಕಳೆದ ವರ್ಷ ‘ಪುಷ್ಪ’ (Pushpa) ಸಿನಿಮಾದ ಸಕ್ಸಸ್ ಬಳಿಕ ರಶ್ಮಿಕಾ ಲಕ್ ಮತ್ತು ಲುಕ್ಕು ಎರಡು ಬದಲಾಗಿದೆ. ಇದನ್ನೂ ಓದಿ:ರಸ್ತೆ ಅಪಘಾತ : ಕಿರುತೆರೆ ಖ್ಯಾತ ನಟಿ ವೈಭವಿ ಉಪಾಧ್ಯಾಯ ದುರ್ಮರಣ

ಇದೀಗ ಹೊಸ ಫೋಟೋಶೂಟ್ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಕೆಂಪು ಬಣ್ಣದ ಕೋಟು-ಪ್ಯಾಂಟು ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕರ್ಲಿ ಹೇರ್ ಲುಕ್ ಕೂಡ ರಶ್ಮಿಕಾ ಅವತಾರಕ್ಕೆ ಮತ್ತಷ್ಟು ಮೆರುಗು ನೀಡಿದೆ. ರಶ್ಮಿಕಾ ಹಾಟ್ ಅವತಾರ ಪಡ್ಡೆಹುಡುಗರ ನಿದ್ದೆಗೆಡಿಸಿದೆ.

ರಶ್ಮಿಕಾ ಮಂದಣ್ಣ ‘ಪುಷ್ಪ 2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅನಿಮಲ್, ರೈನ್‌ಬೋ, ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಕೈಯಲ್ಲಿದೆ.

Share This Article