ಹುಡುಗಿಯರ ಬಗ್ಗೆ ಪೋಸ್ಟ್ ಮಾಡಿದ ಅಭಿಮಾನಿ ಜೊತೆ ರಶ್ಮಿಕಾ ಚಾಟ್

Public TV
3 Min Read

ಬೆಂಗಳೂರು: ಚೆಷ್ಮಾ ಸುಂದರಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಈ ಮಧ್ಯೆಯೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಆಗಾಗ ಇನ್ಸ್ ಪಿರೇಷನಲ್ ಕೋಟ್ಸ್‍ಗಳನ್ನು ಸಹ ಹಾಕುತ್ತಿರುತ್ತಾರೆ. ಅದೇ ರೀತಿ ಪೋಸ್ಟ್ ಹಾಕುತ್ತಿದ್ದ ಅಭಿಮಾನಿ ಮೆಸೇಜ್‍ಗೆ ರಶ್ಮಿಕಾ ರಿಪ್ಲೈ ಮಾಡಿದ್ದಾರೆ.

ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಯೊಂದಿಗೆ ರಶ್ಮಿಕಾ ಚಾಟ್ ಮಾಡಿದ್ದಾರೆ. ಅಭಿಮಾನಿಗಳೊಂದಿಗೂ ಚಾಟ್ ಮಾಡುತ್ತಾರಾ ಎಂದು ಆಶ್ಚರ್ಯವಾಗುತ್ತಿದೆಯೇ, ಆದರೂ ಇದು ಸತ್ಯ. ಅವರ ಅಭಿಮಾನಿಯೊಬ್ಬರು ಸಂದೇಶ ಕಳುಹಿಸಿದ್ದು ಇದಕ್ಕೆ ರಶ್ಮಿಕಾ ಮಂದಣ್ಣ ಉತ್ತರಿಸಿದ್ದಾರೆ. ಅಲ್ಲದೆ ಕೆಲ ಕಾಲ ಅವರೊಂದಿಗೆ ಚಾಟ್ ಮಾಡಿದ್ದಾರೆ.

ದಿ ಗರ್ಲ್ಸ್ ಲೈಫ್ ಖಾತೆಯಿಂದ ವ್ಯಕ್ತಿಯೊಬ್ಬ ಹಲೋ ಮ್ಯಾಡಮ್ ಐ ಆಮ್ ಬಿಗ್ಗೆಸ್ಟ್ ಫ್ಯಾನ್ ಆಫ್ ಯು ಎಂದು ಮೆಸೇಜ್ ಮಾಡಿದ್ದಾರೆ, ಇದಕ್ಕೆ ರಶ್ಮಿಕಾ ಪ್ರತಿಕ್ರಿಯಿಸಿ ಹಲೋ ಹೇಳಿದ್ದಾರೆ. ರಶ್ಮಿಕಾ ರಿಪ್ಲೈ ಮಾಡುತ್ತಿದ್ದಂತೆ ವ್ಯಕ್ತಿ ಶಾಕ್ ಆಗಿದ್ದು, ಓ ಮೈ ಗಾಡ್ ಯು ರಿಪ್ಲೈಯ್ಡ್ ಎಂದು ಹೇಳಿದ್ದಾರೆ, ಇದಕ್ಕೆ ಉತ್ತರಿಸಿದ ಚೆಷ್ಮಾ ಚೆಲುವೆ, ನಾನು ನಿಮ್ಮ ಖಾತೆ ನೋಡಿದೆ. ನೀವು ಹುಡುಗಿಯರ ಜೀವನಕ್ಕೆ ಸಂಬಂಧಿಸಿದಂತೆ ಕೋಟ್ಸ್ ಬರೆದಿದ್ದೀರಿ. ಹುಡುಗಿಯರ ಫೀಲಿಂಗ್ಸ್‍ನ್ನು ನೀವು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದೀರಿ ಎಂದು ಹಾರ್ಟ್ ಸಿಂಬಾಲ್ ಹಾಕಿದ್ದಾರೆ. ಅಲ್ಲದೆ ಇದೇ ರೀತಿ ಹಾರ್ಡ್ ವರ್ಕ್ ಮಾಡುತ್ತಿರಿ ಎಂದು ಹೇಳಿದ್ದಾರೆ. ರಶ್ಮಿಕಾ ರಿಪ್ಲೈ ಮಾಡಿದ್ದನ್ನು ನೋಡಿ ಅಭಿಮಾನಿ ಫಿದಾ ಆಗಿದ್ದಾನೆ. ಈ ಫೋಟೋವನ್ನು ಅವರ ಅಭಿಮಾನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

 

View this post on Instagram

 

Amazing fan of rashmika.mandanna must follow his account @the.girlss.life post most insane quotes on Instagram @the.girlss.life ????@the.girlss.life ???? ????@the.girlss.life ❤ ????@the.girlss.life ???? They have been getting so popular lately???? Don’t miss out! _ Follow before they go private ???? they don’t accept everyone _ ????@the.girlss.life ???? ????@the.girlss.life ❤ ????@the.girlss.life ???? . . . . . . . . #thegoodquote #powerofpositivity #explore #millionariementor #houseofleaders #motivationquotes #quotesaboutlife #quotestags #quotestagram #positivequotes #quotesdaily #quotesforlife #quotesgram #quotestoliveby #wordsoftheday #wordsofwisdom #quotesandsayings #typewritervoice #businessquotes #entrepreneurquotes #enterperneurship #successtip #successquotes #inspirationalquotes

A post shared by Rashmika Mandanna ???? (@rashmikaaa_mandanna) on

ಈ ಹಿಂದೆ ರಶ್ಮಿಕಾ ಸಿನಿಮಾ ರಂಗದಲ್ಲಿ ತಮ್ಮದೇ ಟೀಮ್ ಕಟ್ಟಲು ಮುಂದಾಗಿದ್ದರು. ಇದಕ್ಕಾಗಿ ಅಭಿಮಾನಿಗಳು ತಮ್ಮ ಟ್ಯಾಲೆಂಟ್ ತೋರಿಸುವಂತೆ ಸಹ ಹೇಳಿದ್ದರು. ನಟನೆ, ಸ್ಕ್ರಿಪ್ಟ್ ಬರೆಯುವುದು ಸೇರಿದಂತೆ ಯಾವುದೇ ಟ್ಯಾಲೆಂಟ್ ಇದ್ದರೆ ಅದರ ವಿಡಿಯೋ ಕಳುಹಿಸಿ, ನಮ್ಮದೇ ಟೀಮ್ ಕಟ್ಟೋಣ ಎಂದು ಕೇಳಿಕೊಂಡಿದ್ದರು. ಇದಕ್ಕಾಗಿ ಇ-ಮೇಲ್ ಐಡಿ ಸಹ ನೀಡಿದ್ದರು.

ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುತ್ತಿರುವ ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ಅಭಿಮಾನಿಗಳ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದಾರೆ. ಅದೇ ರೀತಿ ಟಿಪ್ಸ್ ಸಹ ನೀಡುತ್ತಿದ್ದಾರೆ.

ಕನ್ನಡದಲ್ಲಿ ಪೊಗರು ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ರಶ್ಮಿಕಾ ಮಂದಣ್ಣ, ಸದ್ಯ ತೆಲುಗಿನ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಇದರ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಲಾಕ್‍ಡೌನ್ ಹಿನ್ನೆಲೆ ಇದೀಗ ಚಿತ್ರೀಕರಣ ಸ್ಥಗಿತವಾಗಿದ್ದು, ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಪುಷ್ಪ ಸಿನಿಮಾ ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ಸಿದ್ಧವಾಗುತ್ತಿದ್ದು, ಅಲ್ಲು ಅರ್ಜುನ್ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಜೋಡಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *